ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು
ಬೈಲಹೊಂಗಲ,ಜು.2: -ವಿವಿಧ ರಸಾಯನಿಕ ಮಿಶ್ರಣಗಳ ವಿಷಪೂರಿತ ಆಹಾರ ಸೇವೆನೆಯಿಂದ ಜನರು ಹಲವು ಕಾಯಿಲೆಗಳೀಗೆ ತುತ್ತಾಗುತ್ತಿದ್ದಾರೆ. ಆಹಾರವಾಗಿ ಸೇವಿಸುವ ಬಹುತೇಕ ಬೆಳೆಗಳಿಗೆ ರಾಸಾಯಿನಿಕ ಗೊಬ್ಬರ, ಕೀಟನಾಷಕಗಳ ಅತಿಯಾದ ಸಿಂಪಡಣೆಯಿಂದ ಜನರ ಜೀವಿತಾವಧಿ ಕಡಿಮೆಯಾಗುತ್ತಿದೆ ಎಂದು ಬೈಲಹೊಂಗಲ ತಾಪಂ ಇಓ ಸುಭಾಷ್ ಸಂಪಗಾವಿ ಹೇಳಿದರು.
ತಾಲೂಕಿನ ದೊಡವಾಡ ಗ್ರಾಪಂ ವ್ಯಾಪ್ತಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ “ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾವಯವ ಪದ್ದತಿಯಿಂದ ಬೆಳೆದ ಆಹಾರ ಪದಾರ್ಥಗಳು ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸೇವನೆಯಿಂದ ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಉತ್ತಮ ಆರೋಗ್ಯವೇ ನಿಜವಾದ ಸಂಪತ್ತು ಎಂದು ಅವರು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಮಾತನಾಡಿದರು. ಸಮುದಾಯ ಆರೋಗ್ಯ ಅಧಿಕಾರಿ ಬಸಪ್ಪ ಇಂಗನಹಳ್ಳಿ ಮಾತನಾಡಿ ಉದ್ಯೋಗ ಕಾತ್ರಿ ಕಾಮಗಾರಿ ಸ್ಥಳದಲ್ಲಿ ಶಿಬಿರದಲ್ಲಿ ಬಿ.ಪಿ. ತಪಾಸಣೆ, ಶುಗರ, ಎಚ್ ಬಿ (ರಕ್ತಹೀನತೆ) ಚರ್ಮ ಕಾಯಿಲೆ, ಬಾಯಿ ಪರೀಕ್ಷೆ, ಇತರೆ ಸಾಂಕ್ರಾಮಿಕ ಕಾಯಿಲೆಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಆದ್ದರಿಂದ ಎಲ್ಲರೂ ತಪಾಸಣೆ ಮಾಡಿಕೊಳ್ಳಬೇಕು. ಎಂದು ಸಲಹೆ ನೀಡಿದರು. ಉಪಸ್ಥಿತಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಎಚ್. ವಿಶ್ವನಾಥ ಗ್ರಾಪಂ ಕಾರ್ಯದರ್ಶಿ ಅಡಿವೆಪ್ಪ ತಳವಾರ, ತಾಪಂ ಐಇಸಿ ಸಂಯೋಜಕ ಎಸ್.ವ್ಹಿ.ಹಿರೇಮಠ, ಆರೋಗ್ಯ ಇಲಾಖೆ ಸಿಬ್ಬಂದಿ ನಾಗರಾಜ ಪೂಜೇರ, ಗ್ರಾಪಂ ಸಿಬ್ಬಂದಿಗಳು, ಆಶಾ ಕಾರ್ಯರ್ತೆಯರು ಮತ್ತು ನರೇಗಾ ಕೂಲಿಕಾರರು ಹಾಜರಿದ್ದರು.