ಕಲಬುರಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಮಾದಿಗ ಸಮುದಾಯಕ್ಕೆ ನೀಡಲಿ: ನಾಲವಾರಕರ್ ಒತ್ತಾಯ
ಕಲಬುರಗಿ:ಜು.2: ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಎ,ಐ,ಸಿ,ಸಿ ಅಧ್ಯಕ್ಷರಲ್ಲಿ,ಮತ್ತು ಕೆ,ಪಿ,ಸಿ,ಸಿ ಅಧ್ಯಕ್ಷರಲ್ಲಿ ಮನವಿ ಮಾಡಿ,
ಕಲಬುರಗಿ ಕಾಂಗ್ರೆಸ್ ಪಕ್ಷದಲ್ಲಿ ಮಾದಿಗ ಸಮುದಾಯಕ್ಕೆ ಇಲ್ಲಿವರಿಗೆ ಕಾಂಗ್ರೆಸ್ ಪಕ್ಷ ನೀಡಿ ಜವಾಬ್ದಾರಿಯನ್ನು ನಿಷ್ಠೆ, ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವ. ಕಾಂಗ್ರೆಸ್ ಪಕ್ಷದಲ್ಲಿ ಅನುಭವ ಹಾಗೆಯೇ ಹಿರಿಯತನಕ್ಕೆ ಅವಕಾಶ ನೀಡಿ ಕಲಬುರಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಥಾನ ಮಾದಿಗ ಸಮುದಾಯಕ್ಕೆ ನೀಡಬೇಕು,
ಏಕೆಂದರೆ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿಯಿರುವ ಅಭ್ಯರ್ಥಿಗಳ ಗೆಲುವುವಿಗಾಗಿ ಹಗಲು ರಾತ್ರಿ ಪಕ್ಷ ನೀಡಿ ಜವಾಬ್ದಾರಿಯನ್ನು ವಹಿಸಿಕೊಂಡರು ಮಾದಿಗ ಸಮಾಜದ ಹಿರಿಯರನ್ನು ಕಲಬುರಗಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕಾಗಿ ಮಾದಿಗ ಸಮಾಜದ ಯುವ ನಾಯಕರಾದ ಮಂಜುನಾಥ ನಾಲವಾರಕರ್ ಮಾಧ್ಯಮ ಮೂಲಕ ಮನವಿ ಮಾಡಿದರು