ಪರಿಸರ ಹಸಿರಾಗಿಸುವ ಕಾರ್ಯ ಆರಂಭ
ಲಕ್ಷ್ಮೇಶ್ವರ,ಜು2: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಪರಿಸರವನ್ನು ಹಸಿರಾಗಿಸಲು ಕಾರ್ಯೋನ್ಮುಖರಾಗುತ್ತಾರೆ.
ಇದಕ್ಕೆ ಶಿರಹಟ್ಟಿಯ ಸಾಮಾಜಿಕ ವಲಯ ಅರಣ್ಯ ಇಲಾಖೆಯು ಈಗ ಮಳೆಗಾಲ ಆರಂಭವಾಗಿರುವುದರಿಂದ ರಸ್ತೆಯ ಬದಿ ಸಸಿ ನೆಡುವುದು ಶಾಲಾ-ಕಾಲೇಜು ಆವರಣ ಸರ್ಕಾರಿ ಕಚೇರಿಗಳ ಆವರಣ ಸೇರಿದಂತೆ ರೈತರ ಬದುವುಗಳು ಹೀಗೆ ಎಲ್ಲೆಂದರಲ್ಲಿ ಸಸಿ ನೆಡುವ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ.
ತಾಲೂಕಿನ ಲಕ್ಷ್ಮೇಶ್ವರ ಬೆಳ್ಳಟ್ಟಿ ಜಿಲ್ಲಾ ಮುಖ್ಯ ರಸ್ತೆಯ ಅಡರಕಟ್ಟಿ ಬಡ್ನಿ ಮಧ್ಯದ 3 ಕಿ.ಮೀ ರಸ್ತೆಯ ಎರಡು ಬದಿಗೂ ಸಸಿ ನೆಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿಯವರು ಅಡರಕಟ್ಟಿ- ಬಡ್ನಿ ಮಧ್ಯದ ಮೂರು ಕಿಲೋಮೀಟರ್ ರಸ್ತೆಯ ಎರಡು ಬದಿಗೂ ವಿವಿಧ ರೀತಿಯ 900 ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು ವನಪಾಲಕ ಮಹಾಂತೇಶ ಲಮಾಣಿ ಸಸಿಗಳ ಕುರಿತು ಮಾಹಿತಿ ನೀಡಿ 350 ಬೇವು 50 ಹೊಳೆಮತ್ತಿ 150 ತಪಶಿ 150 ಹುಣಸೆ 100 ಮಹಾಗನಿ 200 ಬಸವನ ಪಾದ ಹೀಗೆ ಸಸಿಗಳನ್ನು ನೆಡಲಾಗುತ್ತಿದೆ ಎಂದು ಹೇಳಿದರು.
ಸಾಮಾಜಿಕ ವಲಯ ಅರಣ್ಯ ಇಲಾಖೆಯ ಈ ಕಾರ್ಯದಲ್ಲಿ ಸಾರ್ವಜನಿಕರು ನೆಟ್ಟಿರುವ ಸಸಿಗಳನ್ನು ಸಂರಕ್ಷಿಸಿ ಬೆಳೆಸಿ ಪರಿಸರ ಹಸಿರಾಗಿಸಲು ಕೈಜೋಡಿಸಬೇಕು ಎಂಬುದು ಕಳಕಳಿಯ ಮನವಿಯಾಗಿದೆ ಈ ಕುರಿತು ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿಯವರು ಸಾರ್ವಜನಿಕರು ನೆಟ್ಟ ಸಸಿಗಳನ್ನು ಮರವನ್ನಾಗಿ ಬೆಳೆಸಲು ಮಗುವಿನಂತೆ ಬೆಳಸಬೇಕು ಎಂದು ಎಲ್ಲರಲ್ಲೂ ಮನವಿ ಮಾಡಿದ್ದಾರೆ.