90 ಲಕ್ಷ ರಸ್ತೆ ಕಾಮಗಾರಿಗೆ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ
ಸಂಜೆವಾಣಿ ವಾರ್ತೆ
ನಂಜನಗೂಡು: ಜು.02:- ಬದನವಾಳು ಗ್ರಾಮದಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವದಾಗಿ ತಿಳಿಸಿ ತೊಂಬತ್ತು ಲಕ್ಷ ವೆಚ್ಚದ ಉತ್ತಮ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು
ಮುಂದುವರೆದು ಮಾತನಾಡಿ ಭಾರದ್ ಜೋಡ ಯಾಕೆ ಸಂದರ್ಭದಲ್ಲಿ ಬದಲಾವಣೆ ಗ್ರಾಮದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ಈ ಕ್ಷೇತ್ರ ಅಭಿವೃದ್ಧಿಪಡಿಸುತ್ತೇನೆ. ಉತ್ತಮ ರಸ್ತೆ ಮಾಡುತ್ತೇವೆ ಎಂದಿದ್ದರು ಅದರಂತೆ ಕೊಟ್ಟ ಮಾತಿನಂತೆ ಉಳಿಸಿಕೊಂಡು 90 ಲಕ್ಷ ಅನುದಾನ ನೀಡಿದ್ದಾರೆ ಉತ್ತಮ ರಸ್ತೆಗೆ ಗುದ್ದಲಿ ಪೂಜೆಯನ್ನು ಶಾಸಕ ದರ್ಶನ್ ನೆರವೇರಿಸಿದರು.
ಇದು ವರ್ಣ ವಿಧಾನಸಭಾ ಕ್ಷೇತ್ರದ ಮಲ್ಲುಪುರ ಗ್ರಾಮದಿಂದ ನಂಜನಗೂಡು ಕ್ಷೇತ್ರದ ಬದನವಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗಿದೆ ಆದಷ್ಟು ಬೇಗ ಮಹಾತ್ಮ ಗಾಂಧೀಜಿಯವರು ಬಂದು ಬದನವಾಳು ಗ್ರಾಮದಲ್ಲಿ ಸ್ಥಾಪಿಸಿರುವ ಖಾದಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಇದು ಅಭಿವೃದ್ಧಿ ಹೊಂದಿದ ನಂತರ ಪ್ರವಾಸಿ ಕೇಂದ್ರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕುರಟ್ಟಿ ಮಹೇಶ್, ವಿಜಯಕುಮಾರ್, ಮಂಜುನಾಥ್, ಸೋಮು ಸೇರಿದಂತೆ ಇತರರಿದ್ದರು