ಜು.5ರಿಂದ 7ರವರೆಗೆ ತೆರಿಗೆ ಸಮಾಲೋಚನೆ ಎಕ್ಸ್‍ಪೋ
ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ರಾಮ್ ಪತಂಗೆ ಅಂಡ್ ಕಂಪನಿ ವತಿಯಿಂದ ಜು.5ರಿಂದ 7ರವರೆಗೆ ನಗರದ ರೈಲ್ವೆ ನಿಲ್ದಾಣ ರಸ್ತೆಯ ಸಂಖ್ಯೆ 1148ರ ವಿಳಾಸದಲ್ಲಿ ಉಚಿತ ತೆರಿಗೆ ಸಮಾಲೋಚನೆ ಎಕ್ಸ್‍ಪೋ ಆಯೋಜಿಸಲಾಗಿದೆ ಎಂದು ಹಣಕಾಸು ತಜ್ಞ ಟಿ.ಆರ್.ರಾಮ್‍ಕೀರ್ತ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ನಗರದಲ್ಲಿ ಈ ರೀತಿಯ ಮೊದಲ ಕಾರ್ಯಕ್ರಮವಾಗಿದೆ. ಇಲ್ಲಿ ತೆರಿಗೆ ಪಾವತಿದಾರರಿಗೆ ವಿವಿಧ ತೆರಿಗೆ, ವೈಯಕ್ತಿಕ ಮತ್ತು ಕಾಪೆರ್Çರೇಟ್ ತೆರಿಗೆ ಪಾವತಿ ವಿಷಯದ ಮಾಹಿತಿ ನೀಡಲಾಗುವುದು. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಅದರ ಪ್ರಯೋಜನ ಏನೆಂಬ ಬಗ್ಗೆ ಅರಿವು ಹೊಂದಿರುವುದು ಅಗತ್ಯ. ಇದರಿಂದಾಗಿ ದೇಶದ ಆರ್ಥಿಕತೆಗೆ ಪ್ರಯೋಜನವಾಗುತ್ತದೆ. ಅಲ್ಲದೆ, ಆದಾಯ ತೆರಿಗೆ, ಹೂಡಿಕೆ ಆಯ್ಕೆ ಮತ್ತು ಹಣಕಾಸು ಸಾಲದ ಬಗ್ಗೆಯೂ ಉಚಿತ ಮಾಹಿತಿ ಇಲ್ಲಿ ದೊರೆಯಲಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಶೋಮಿಕಾ ಹಾಜರಿದ್ದರು.