ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯ ಅಧಿಕಾರ ಗಂಡಂದಿರ ದರ್ಬಾರ್‌ಗೆ ಕಡಿವಾಣ ಇಲ್ಲವೇ
ಕೋಲಾರ,ಜು,೨- ನಗರದ ಸ್ಥಳೀಯ ಆಡಳಿತ ಮಂಡಳಿಗಳು ಬದಲಾಗಿ ಹಲವು ತಿಂಗಳುಗಳೇ ಕಳೆದರೂ ಆಡಳಿತ ಮಂಡಳಿಯನ್ನು ನೂತನ ಸರ್ಕಾರ ರಚಿಸಲು ಅವಕಾಶ ಇಲ್ಲದೆ ಅಧಿಕಾರಿಗಳೇ ಮುಂದುವರೆಯುತ್ತಿದ್ದಾರೆ ಹೀಗಾಗಿ ಅಧಿಕಾರಿಗಳ ಮೇಲೆ ಜನಪ್ರತಿನಿಧಿಗಳ ಒತ್ತಡ ಹೇರಲಾಗದೆ ಸಾರ್ವಜನಿಕರ ಕೆಲಸಕಾರ್ಯಗಳು ವಿಳಂಭವಾಗುತ್ತಿದೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.
ನಗರದಲ್ಲಿ ೩೫ ವಾರ್ಡ್‌ಳಿದ್ದು ಬಹುತೇಕ ೧೦ ಕ್ಕೂ ಹೆಚ್ಚು ಮಂದಿ ಮಹಿಳೆಯರು ಸದಸ್ಯರು ಇದ್ದರೇ ಅದರೆ ಇವರೆಲ್ಲಾ ಬಹುತೇಕ ಆಟಕ್ಕೊಂಡು ಲೆಕ್ಕಕ್ಕೆ ಇಲ್ಲದಂತಾಗಿದೆ. ಬಹುತೇಕ ಮಹಿಳಾ ಸದಸ್ಯರಿಗೆ ತಾವು ಗೆದ್ದಿರುವ ವಾರ್ಡಿನ ಬಗ್ಗೆ ಕನಿಷ್ಠ ಅರಿವು ಇಲ್ಲದ ಮಂದಿ ಇದ್ದರೆ ಇವರಲ್ಲಿ ಮಹಿಳಾ ನಗರಸಭಾ ಸದಸ್ಯರುಗಳಿಗೆ ಸಾರ್ವಜನಿಕರ ಸಂರ್ಪಕವೇ ಇಲ್ಲವಾಗಿದೆ. ಅವರ ನಗರಸಭೆಯ ಅಧಿಕಾರವನ್ನು ಪತಿ ಮಹಾಶಯರು ಕಸಿದು ಕೊಂಡು ತಾವೇ ಸದಸ್ಯರಿಗಿಂತ ಹೆಚ್ಚಾಗಿ ನಗರಸಭೆಯಲ್ಲಿ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾರೆ.
ಮಹಿಳೆಯರಿಗೆ ಸರ್ಕಾರವು ರಾಜಕೀಯವಾಗಿಯೋ ಸಮಾನತೆ ನೀಡ ಬೇಕು. ಅವರಿಗೆ ರಾಜಕಾರಣದಲ್ಲಿ ಅಧಿಕಾರ ನೀಡ ಬೇಕೆಂಬ ಉದ್ದೇಶವನ್ನು ಹೊಂದಿದ್ದು ಮಹಿಳೆಯರು ಕೇವಲ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ ಆಡಳಿತವನ್ನು ನಿರ್ವಾಹಿಸ ಬಲ್ಲ ಸಶಕ್ತಳು ಎಂಬ ದೆಸೆಯಲ್ಲಿ ಮಹಿಳೆಯು ಅಬಲೆಯಲ್ಲ ಎಂದು ಸಬಲೀಕರಣ ಗೊಳಿಸಲು ಸರ್ಕಾರವು ಸಮಾನತೆಯ ಹಕ್ಕುಗಳನ್ನು ನೀಡಲು ಮಹಿಳಾ ಮೀಸಲಾತಿ ತಂದರೆ ಅದನ್ನು ತಮ್ಮ ಗಂಡಂದಿರಗೆ ನೀಡಿ ಮನೆಯಲ್ಲಿ ಮುಸುರೆ ತಿಕ್ಕುತ್ತಾ ಕುಳಿತಿರುವ ಹಿನ್ನಲೆಯಲ್ಲಿ ನಮ್ಮ ಭಾರತದ ಮಹಿಳೆಯರು ಮುಂಚೂಣೀಗೆ ಬಾರದೆ ಇರುವುದಕ್ಕೆ ಸ್ವಯಂಕೃತ ಅಪರಾಧಗಳೇ ಕಾರಣವಾಗಿದೆ ಎನ್ನಬಹುದಾಗಿದೆ.
ಮಹಿಳಾ ಸದಸ್ಯರ ಗಂಡಂದಿರು ಅಧಿಕೃತ ಸದಸ್ಯರುಗಳಿಗಿಂತ ಹೆಚ್ಚಾಗಿಯೇ ಅಧಿಕಾರಿಗಳ ಮೇಲೆ ದಬಾವಣೆ ಮಾಡಲು ಮುಂದಾಗಿದ್ದಾರೆ. ಮಹಿಳಾ ಸದಸ್ಯೆಯನ್ನು ಅಡುಗೆ ಮನೆಯಲ್ಲಿ ಕೊರಿಸಿ ತಾವೇ ಬಹಿರಂಗವಾಗಿ ಸಭೆಗಳಲ್ಲಿ ಭಾಗವಹಿಸುವುದು, ಮಹಿಳಾ ಸದಸ್ಯೆ ಪರವಾಗಿ ತಾವೇ ಅಭಿಪ್ರಾಯಗಳನ್ನು ಮಂಡಿಸುತ್ತಿರುವುದು ಕಾಣಬಹುದಾಗಿದೆ.
ಇದು ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಾಗಿದೆ. ನಗರಸಭೆ, ಪುರಸಭೆ, ಪಂಚಾಯಿತಿಗಳಲ್ಲಿ ಕಾಣಬಹುದಾಗಿದೆ. ಸರ್ಕಾರಿ ಅಧಿಕಾರಿಗಳು ಸಹ ಮಹಿಳಾ ಸದಸ್ಯೆ ಗಂಡಂದಿರಗೆ ಮಣೆ ಹಾಕುತ್ತಿದ್ದಾರೆ. ಪುರುಷ ಸದಸ್ಯರಿಗಿಂತ ಮಹಿಳಾ ಸದಸ್ಯೆಯರ ಗಂಡಂದಿರ ಕಾಟ ಹೆಚ್ಚಾಗಿದೆ. ಅದು ಎಷ್ಟು ಮಿತಿ ಮೀರಿತ್ತು ಎಂದರೆ ಓರ್ವ ಮಹಿಳಾ ಸದಸ್ಯೆ ಗಂಡ ತಾನೇ ಸದಸ್ಯ ಎಂಬಂತೆ ೫-೬೦ ಅಡಿ ಎತ್ತರದ ಕಟಾಟ್ ಹಾಕಿ ಮಿಂಚುತ್ತಾ ಅಧಿಕಾರಿಗಳನ್ನು ಹೆದರಿಸಿ, ಬೆದರಿಸುತ್ತಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥೆರು ಈ ಸಂಬಂಧವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ಹಿನ್ನಲೆಯಲ್ಲಿ ಆಯೋಗದ ಅಧಿಕಾರಿಗಳು ಸಾಕ್ಷಾಧಾರಗಳ ಮೇಲೆ ಮಹಿಳೆ ಸದಸ್ಯೆ ತನ್ನ ಅಧಿಕಾರವನ್ನು ದುರ್‍ಬಳಿಸುತ್ತಿದ್ದ ಹಿನ್ನಲೆಯಲ್ಲಿ ಅಕೆಯನ್ನು ಪಂಚಾಯಿತಿ ಸದಸ್ಯತ್ವದಿಂದಲೇ ವಜಾಗೊಳಿಸಿ ಆದೇಶವನ್ನು ಜಾರಿ ಮಾಡಿದ ಪ್ರಕರಣ ಬೇರೆ ಎಲ್ಲೂ ಅಲ್ಲ. ಮುಳಬಾಗಿಲು ತಾಲ್ಲೂಕಿನಲ್ಲೇ ಇತ್ತೀಚೆಗೆ ಗ್ರಾಮ ಪಂಚಾಯಿತಿಯೊಂದರಲ್ಲಿ ನಡೆದಿದೆ.
ಇದೆಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳದೆ ಮಹಿಳಾ ಸದಸ್ಯೆಯ ಗಂಡಂದಿರಿಗೆ ಕಚೇರಿಗಳಲ್ಲಿ ಮಣೆ ಹಾಕುತ್ತಿರುವುದು ದುರಂತದ ಸಂಗತಿಯಾಗಿದೆ. ಮಹಿಳಾ ಸದಸ್ಯರಿಗೆ ತಮ್ಮ ವಾರ್ಡಿನ ಬಗ್ಗೆ ಕನಿಷ್ಟ ಜ್ಞಾನವು ಇಲ್ಲ, ಸದಸ್ಯೆಯನ್ನು ಚುನಾವಣೆಯಲ್ಲಿ ಕಂಡಿದ್ದು ಹೊರತು ಪಡೆಸಿ ಸಾರ್ವಜನಿಕರು ಈವರೆಗೆ ನೋಡೇ ಇಲ್ಲ. ಮಹಿಳೆ ಸದಸ್ಯರಿಗೆ ಕನಿಷ್ಟ ತಮ್ಮ ಜವಾಬ್ದಾರಿ ಏನೆಂಬುವುದರ ಅರಿವು ಇಲ್ಲದಂತ ಅಶುದ್ದವಾದ ದಡ್ಡಶಿಖಾ ಮಣಿಗಳನ್ನು ಆಯ್ಕೆ ಮಾಡಿರುವುದಕ್ಕೆ ಸಾರ್ವಜನಿಕ ಮತದಾರರು ಪಶ್ಚಾತಾಪದಿಂದ ಪರಿತಪಿಸುವಂತಾಗಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಿಗೆ ಮಾತ್ರ ಮನ್ನಣೆ ನೀಡುವಂತಾಗಲಿ ಮಹಿಳಾ ಸದಸ್ಯರ ಗಂಡಂದಿರ ದರ್ಬಾರ್‌ಗಳಿಗೆ ಅವಕಾಶ ನೀಡ ಬೇಡಿ ಅವರ ಮಾತಿಗೆ ಮನ್ನಣೆ ನೀಡಬಾರದು. ಈ ಸಂಬಂಧವಾಗಿ ಜಿಲ್ಲಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.