ಕಾನೂನು ನಿಂತ ನೀರಲ್ಲ, ಬದಲಾವಣೆ ಸಹಜ
ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ಬದಲಾವಣೆ ಜಗದ ನಿಯಮ, ಅದು ಅನಿವಾರ್ಯವೂ ಕೂಡ. ಹೀಗಾಗಿ ಕಾನೂನು ನಿಂತ ನೀರಂತಿರದೆ ಬದಲಾಗುತ್ತಿರುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ತಿಳಿಸಿದರು.
ನಗರದ ನಜರ್‍ಬಾದ್‍ನಲ್ಲಿರುವ ಕರ್ನಾಟಕ ಪೆÇಲೀಸ್ ಅಕಾಡೆಮಿ ಸಭಾಂಗಣದಲ್ಲಿ ಸೋಮವಾರ ನಡೆದ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 150 ವರ್ಷದ ಹಿಂದಿನ ಕಾನೂನಿಗೆ ಈಗ ಬದಲಾವಣೆಯ ಕಾಲ ಬಂದಿದ್ದು, ಸಾಕಷ್ಟು ಹಳೆಯ ವಿಚಾರಗಳೊಂದಿಗೆ ಹೊಸ ವಿಚಾರಗಳು ಸೇರ್ಪಡೆಯಾಗಿ ಜಾರಿಯಾಗಿವೆ. ಎಲ್ಲರೂ ಬದಲಾದ ಕಾನೂನನ್ನು ಸಮನ್ವಯದಿಂದ ಅನುಷ್ಠಾನಗೊಳಿಸಬೇಕಿದೆ. ಆಗ ಮಾತ್ರ ಕಾನೂನು ಯಶಸ್ವಿಯಾಗಿ ಜಾರಿಯಾಗುತ್ತದೆ ಎಂದು ಹೇಳಿದರು.
ಹಳೆಯ ಐಪಿಸಿ, ಸಿಆರ್‍ಪಿಸಿ ಮತ್ತು ಸಾಕ್ಷ್ಯ ಕಾಯಿದೆ ರದ್ದಾಗಿದ್ದು, ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಯಾಗಿದೆ. ಇದರಿಂದ ಸಾಕಷ್ಟು ಬದಲಾವಣೆಯಾಗಿದ್ದು, ಕೆಲ ಅಪರಾಧಗಳಿಗೆ ಕನಿಷ್ಠ ಶಿಕ್ಷೆಯೊಂದಿಗೆ ಗರಿಷ್ಠ ಶಿಕ್ಷೆ ಪ್ರಮಾಣ ವಿಧಿಸಲಾಗಿದೆ. ಅಲ್ಲದೇ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ನೂತನ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜೆಎಸ್‍ಎಸ್ ಕಾನೂನು ಕಾಲೇಜಿನ ಸಿಇಒ ಪೆÇ್ರ.ಸುರೇಶ್ ಮಾತನಾಡಿ, 160 ರಿಂದ 170 ವರ್ಷಗಳ ಹಿಂದಿನ ಕಾನೂನನ್ನು ಸ್ವಂತ ಅನುಭವದ ಮೇಲೆ ಬದಲಾವಣೆ ಮಾಡಲಾಗಿದ್ದು, ಈಗ ನೆಲದ ಕಾನೂನಾಗಿದ್ದು, ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಅನಾವಶ್ಯಕ ವಿಧಿ ನಿಯಮಗಳನ್ನು ಕೈ ಬಿಡಲಾಗಿದೆ ಎಂದು ಹೇಳಿದರು.
ಈ ಮೊದಲು ಬ್ರಿಟಿಷರು ತಮಗೆ ಅನುಕೂಲಕ್ಕೆ ತಕ್ಕಂತೆ ಕಾನೂನುಗಳನ್ನು ಮಾಡಿ ಅನುಷ್ಠಾನಗೊಳಿಸಿದ್ದರು. ಮೊದಲು ರಾಜ್ಯ ದ್ರೋಹ ವಿಚಾರ ಬ್ರಿಟಿಷರಿಗೆ ಆದ್ಯತೆಯಾಗಿದ್ದು, ಹೊಸ ಭಾರತೀಯ ನ್ಯಾಯ ಸಂಹಿತೆಗೆ ಮಹಿಳೆಯರು ಮತ್ತು ಮಕ್ಕಳ ದೌರ್ಜನ್ಯ ತಡೆಯುವುದು ಮೊದಲ ಆದ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪೆÇಲೀಸ್ ಅಕಾಡೆಮಿಯ ನಿರ್ದೇಶಕಿ ಎಂ.ಎಸ್.ಗೀತ, ಉಪ ನಿರ್ದೇಶಕ ಎನ್.ನಿರಂಜನ್ ರಾಜ್ ಅರಸ್, ಆರ್‍ಎಎಸ್‍ಎಲ್ ಉಪ ನಿರ್ದೇಶಕ ಚಂದ್ರಶೇಖರ್, ಮೈಸೂರು ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್, ಪತ್ರಕರ್ತ ಎಸ್.ಟಿ.ರವಿಕುಮಾರ್ ಇದ್ದರು.