ಪ್ರಗತಿಯಲ್ಲಿ ಔಷಧ ವಿಜ್ಞಾನದ ಪಾತ್ರ ಪ್ರಮುಖ
ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ದೇಶದ ಆರ್ಥಿಕ ಪ್ರಗತಿಯಲ್ಲಿ ಔಷಧ ವಿಜ್ಞಾನ ಪ್ರಮುಖ ಪಾತ್ರ ವಹಿಸುವುದರಿಂದ ಈ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪೂರೈಸಿದವರಿಗೆ ವಿಫುಲ ಅವಕಾಶ ಸೃಷ್ಟಿಯಾಗಲಿದೆ ಎಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಂ.ಕೆ. ರಮೇಶ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‍ಎಸ್-ಎಎಚ್‍ಇಆರ್ (ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್)ನ ಜೆಎಸ್‍ಎಸ್ ಔಷಧ ವಿಜ್ಞಾನ ಕಾಲೇಜು ವತಿಯಿಂದ ಸೋಮವಾರ ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಅಯೋಜಿಸಿದ್ದ ಸಮವರ್ತನಾ-ಫಾರ್ಮಸಿ ಪದವೀಧರರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದ ಆರ್ಥಿಕತೆ 3.7 ಟ್ರಿಲಿಯನ್ ಆಗಿದ್ದು ಮುಂದಿನ ಇಪ್ಪತ್ತು ವರ್ಷದಲ್ಲಿ 20 ಟ್ರಿಲಿಯನ್ ಡಾಲರ್‍ಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ ಔಷಧ ವಿಜ್ಞಾನ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ ಎಂದರು.
ಸ್ವತಂತ್ರ ಬಂದಾಗ ಮನುಷ್ಯನ ಸರಾಸರಿ ಆಯಸ್ಸು 30 ರಿಂದ 40 ವರ್ಷವಾಗಿತ್ತು. ನಂತರದ ದಿನಗಳಲ್ಲಿ ಪೆÇಲಿಯೋವನ್ನು ಸಂಪೂರ್ಣವಾಗಿ ತಡೆಗಟ್ಟಲಾಯಿತು. ಅಲ್ಲದೇ ಮಲೇರಿಯಾ ಕೂಡ ನಿಯಂತ್ರಣದಲ್ಲಿದೆ. ಜತೆಗೆ ದೇಶದ ನಾನಾ ಭಾಗಗಳಿಗೆ ಭಾರತದಿಂದಲೇ ಔಷಧವನ್ನು ರಫ್ತು ಮಾಡಲಾಗುತ್ತಿದೆ. ಈ ಬೆಳವಣಿಗೆಗಳಿಗೆ ದೇಶದಲ್ಲಿನ ಔಷಧ ವಿಜ್ಞಾನದ ಕೊಡುಗೆ ಅಪಾರ ಎಂದು ತಿಳಿಸಿದರು.
254 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಜೆಎಸ್‍ಎಸ್ ಔಷಧ ವಿಜ್ಞಾನ ಕಾಲೇಜು ವತಿಯಿಂದ ಸೋಮವಾರ ಅಯೋಜಿಸಿದ್ದ ಸಮವರ್ತನಾ-ಫಾರ್ಮಸಿ ಪದವೀಧರರ ಸ್ವಾಗತ ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಬಿ.ಫಾರ್ಮ್, ಫಾರ್ಮ್ ಡಿ, ಡಿ ಫಾರ್ಮ್, ಎಂ.ಫಾರ್ಮ್ ಪೂರೈಸಿದ 254 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. 2023-24ನೇ ಸಾಲಿಗೆ ಬಿ.ಫಾರ್ಮ್ ಪೂರೈಸಿದ 82, ಫಾರ್ಮ್ ಡಿನಲ್ಲಿ 37, ಡಿ.ಫಾರ್ಮ್‍ನಲ್ಲಿ 52, ಎಂ.ಫಾರ್ಮ್ ಪದವಿ ಪೂರೈಸಿದ 83 ಮಂದಿ ಸೇರಿದಂತೆ ಒಟ್ಟು 254 ಪದವೀಧರರು ವೈಯಕ್ತಿಕವಾಗಿ ಪದವಿ ಪ್ರಮಾಣಪತ್ರ ಸ್ವೀಕರಿಸಿದರು.
ಡಿ.ಫಾರ್ಮ್‍ದಲ್ಲಿ ಎಂ.ಸಹನಾ, ಬಿ.ಫಾರ್ಮ್‍ನಲ್ಲಿ ಅಲಿಶಾ ಆಂಥೋನಿ, ಫಾರ್ಮ್ ಡಿ ವಿಷಯದಲ್ಲಿ ವುಡಾರು ಪಣತಿ ರೆಡ್ಡಿ, ಎಂ.ಫಾರ್ಮ್‍ನಲ್ಲಿ ಅದಿತಿ ಡ್ಯಾಶ್. ಔಷಧೀಯ ನಿಯಂತ್ರಣ ವ್ಯವಹಾರಗಳ ಇಲಾಖೆಯ ಎಸ್.ಅಮೇಶಾ, ಔಷಧೀಯ ರಸಾಯನಶಾಸ, ವಿಭಾಗದ ಸತ್ಯಂ ಸಾಯಿ ಮಧು ಪ್ರಶಾಂತ್, ಚೌಧರಿ ಭಾರತಿ ಶೇಷರಾಮ್ ಅಗ್ರಸ್ಥಾನ ಪಡೆದಿದ್ದಾರೆ.
ಫಾರ್ಮಾಸ್ಯುಟಿಕಲ್ ಕ್ಯಾಲಿಟಿ ಅಶೂರೆನ್ಸ್ ವಿಭಾಗದಲ್ಲಿ ತುಮ್ಮೂರು ಕ್ಷಿತಾ ಸಾಯಿ, ಫಾರ್ಮಾಕಾಲಜಿ ವಿಭಾಗದಲ್ಲಿ ಸಲಾದುಲಾ ಹಿಮಾ, ಇಂಡಸ್ಟ್ರಿಯಲ್ ಫಾರ್ಮಸಿ ವಿಭಾಗದಲ್ಲಿ ರುತುಜಾ ಹರಿಶ್ಚಂದ್ರ ಯಾದವ್ ಮತ್ತು ಫಾರ್ಮಸಿ ಪ್ರಾಕ್ಟಿಸ್ ವಿಭಾಗದ ವೈಶಾಖಿ ಚಿನ್ನದ ಪದಕ ಪಡೆದುಕೊಂಡರು.
ಔಷಧೀಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಗುರುಪಾದಯ್ಯ, ಔಷಧ ವಿಭಾಗದ ಮುಖ್ಯಸ್ಥ ಡಾ.ರಿಯಾಜ್ ಅಲಿ ಉಸ್ಮಾನಿ ಅವರಿಗೆ ಅತ್ಯುತ್ತಮ ಸಂಶೋಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‍ಎಸ್ ಎಎಚ್‍ಇಆರ್‍ನ ಕುಲಸಚಿವ ಡಾ.ಬಿ.ಮಂಜುನಾಥ, ಸಿಒಇ ಡಾ.ಸುಧೀಂದ್ರ ಭಟ್, ಡೀನ್ ಡಾ.ವಿಶಾಲ್ ಕುಮಾರ್ ಗುಪ್ತಾ, ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್, ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ವಿ.ಪೂಜಾರ್ ಇದ್ದರು.