ರೈತ ಸಂತೆಯಲ್ಲಿ ಸುಂಕ ವಸೂಲಿ ಖಂಡಿಸಿ ರೈತರದಿಢೀರ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.02-ರೈತ ಸಂತೆಯಲ್ಲಿ ಸುಂಕ ವಸೂಲಿ ಖಂಡಿಸಿ ದಿಢೀರ್ ಪ್ರತಿಭಟನೆಗಿಳಿದ ರೈತರು ಆಕ್ರೋಶ ಹೊರಹಾಕಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಸೋಮವಾರ ನಡೆದಿದೆ.
ರೈತ ಸಂಘದ ವೀರನಪುರ ನಾಗಪ್ಪ ನೇತೃತ್ವದಲ್ಲಿ ಬೇಗೂರು ಗ್ರಾಪಂ ಕಾರ್ಯಾಲಯ ಮುಂಭಾಗ ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮಾರಾಟಗಾರರು, ಖರೀದಿದಾರರಿಂದ ಸುಂಕ ವಸೂಲಿ ಮಾಡುವುದು ಬ್ರಿಟಿμï ಪಳೆಯುಳಿಕೆ ಆಗಿದೆ. ಕೂಡಲೇ ಸುಂಕ ವಸೂಲಾತಿ ನಿಲ್ಲಿಸಬೇಕು ಇಲ್ಲದಿದ್ದರೇ ಸಂತೆಯನ್ನು ಎಪಿಎಂಸಿಗೆ ಒಳಪಡಿಸಬೇಕು ಎಂದು ಆಕ್ರೋಶ ಹೊರಹಾಕಿದರು.
ರೈತರು ಈಗಾಗಲೇ ಬರ, ಮಳೆ ಹಾನಿಯಿಂದ ಕಂಗೆಟ್ಟಿದ್ದಾರೆ, ಈ ನಡುವೆ ಸುಂಕ ವಸೂಲಿ ಮಾಡುವುದು ಸರಿಯಲ್ಲ, ಸುಂಕ ನಿಲ್ಲಸದಿದ್ದರೇ ಉಗ್ರ ಹೋರಾಟ ಮಾಡುತ್ತೇವೆಂದು ಗ್ರಾಪಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.