ಸೇವಾ ನಿವೃತ್ತಿ ಸನ್ಮಾನ ಬೀಳ್ಕೋಡುಗೆ
ಕೊಲ್ಹಾರ:ಜು.2: ಪಟ್ಟಣದ ಪಟ್ಟಣ ಪಂಚಾಯತ ಕಾರ್ಯಾಲಯದ ಕರ ವಸೂಲಿಗಾರರಾಗಿ ಕರ್ತವ್ಯ ನಿರ್ವಹಿಸಿ ಸೇವ ನಿವೃತ್ತಿ ಹೊಂದಿದ ಪ್ರಯುಕ್ತ ಸಿದ್ದಪ್ಪ ಮುರನಾಳ ಇವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.
ಪ.ಪಂ ಕಾರ್ಯಾಲಯದಲ್ಲಿ ಪಟ್ಟಣದ ಪ್ರಮುಖರು, ಪ ಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೋಟ್ಟರು.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಪಟ್ಟಣದ ಪ್ರಮುಖರಾದ ವಿನೀತಕುಮಾರ ದೇಸಾಯಿ, ರಾಜಶೇಖರ ಶೀಲವಂತ, ಮಹೇಶ ಗಿಡ್ಡಪ್ಪಗೋಳ, ವಿರುಪಾಕ್ಷಿ ಕೋಲಕಾರ, ಎಂ.ಆರ್ ಕಲಾದಗಿ, ಡೋಂಗ್ರಿ ಕಟಬರ, ಬಸಪ್ಪ ಕಟಬರ, ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸಿಪ್ ಗಿರಗಾಂವಿ, ಅಪ್ಪಾಸಿ ಮಟ್ಟಿಹಾಳ, ಮಹಾಂತೇಶ ಗಿಡ್ಡಪ್ಪಗೋಳ, ನಿಂಗು ಗಣಿ, ಬಾಬು ಬಜಂತ್ರಿ, ದಸ್ತಗೀರ ಕಲಾದಗಿ, ಶ್ರೀಶೈಲ ಅಥಣಿ ಹಾಗೂ ಇನ್ನಿತರರು ಇದ್ದರು.