ಬೀದಿಬದಿ ವ್ಯಾಪಾರಿಗಳಿಗೆ ಛತ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧; :  ಬಾತಿ ಶ್ರೀಆಂಜನೇಯ ದೇವಸ್ಥಾನದ ಹತ್ತಿರ ಹೂವು ಹಣ್ಣು  ಕಾಯಿ ಮಾರುವ ಬೀದಿಬದಿ ವ್ಯಾಪಾರಿಗಳಿಗೆ  ಮಾತೃದೇವೋ ಸಮಾಜ ಕಲ್ಯಾಣ ಮತ್ತು ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಛತ್ರಿಗಳನ್ನು ವಿತರಣೆ ಮಾಡಲಾಯಿತು .ಈ ವೇಳೆ  ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿಯ ದಾವಣಗೆರೆ ಜಿಲ್ಲಾ ಅಧ್ಯಕ್ಷರುಗಳಾದಂತಹ  ಸುಧೀಂದ್ರ ಡಿ ಟಿ. ಹಳೆಬಾತಿ, ಬಿಜೆಪಿ ಮುಖಂಡರುಗಳಾದ ಸಿದ್ದೇಶ್ ದೊಡ್ಡ ಗೌಡರು, ಮತ್ತೊಬ್ಬ ಬಿಜೆಪಿ ಮುಖಂಡರುಗಳಾದ ಅತಿತ್ ಅಂಬರ್ಕರ್,  ಮಾತೃದೇವೋ ಸಮಾಜ ಕಲ್ಯಾಣ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಪೋತುಲ ಶ್ರೀನಿವಾಸ್  ಹಾಗೂ ಸಂಸ್ಥೆಯ ಸದಸ್ಯರುಗಳಾದ ವನಿತಾ, ಆಶಾ, ಅಶ್ವಿನಿ, ಚಂದ್ರಕಲಾ, ಮಂಜುನಾಥ್, ಪ್ರಜ್ವಲ್ ಕೆ ಎನ್, ಲಕ್ಷ್ಮಿಕಾಂತ್, ಭಾರದ್ವಾಜ್ ಎಸ್ ಪಿ ರವರು ಭಾಗವಹಿಸಿದ್ದರು.ಛತ್ರಿ ಸ್ವೀಕಾರ ಮಾಡಿದ ಫಲಾನುಭವಿಗಳು ಮಳೆಗಾಲದಲ್ಲಿ ಈ ಛತ್ರಿ ತುಂಬಾ ಸಹಾಯವಾಗುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು.