ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಿ :  ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್
ಸಂಜೆವಾಣಿ ವಾರ್ತೆ
ಹಿರಿಯೂರು.ಜು.1 ;  ಕಾಡು ಗೊಲ್ಲ ಸಮಾಜದ ವಿದ್ಯಾರ್ಥಿಗಳು  ಶಿಕ್ಷಣದ ಕಡೆ ಹೆಚ್ಚಿನ ಗಮನ ನೀಡಬೇಕು, ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವರಾದ ಡಿ. ಸುಧಾಕರ್ ಹೇಳಿದರು. ಹಿರಿಯೂರಿನ ತುಳಸಿ ಕಲ್ಯಾಣ ಮಂಟಪದಲ್ಲಿ  ಕರ್ನಾಟಕ ರಾಜ್ಯ ಕಾಡುಗೊಲ್ಲ ಸಂಘ ಹಾಗೂ ತಾಲೂಕು ಕಾಡುಗೊಲ್ಲ ಸಂಘ ಹಿರಿಯೂರು ವತಿಯಿಂದ 2023 – 24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ  ಶೇಕಡ 80ಕ್ಕೂ ಹೆಚ್ಚು ಅಂಕ ಪಡೆದ ಕಾಡುಗೊಲ್ಲ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು. ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ, ಕೆಲಸ ಕಾರ್ಯಗಳನ್ನು ಮಾಡುವುದು ನಮ್ಮ ಕರ್ತವ್ಯ ಫಲವನ್ನು ಕೊಡುವುದು ದೇವರ ಕಾರ್ಯ ಎಂದರು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಪ್ರೋತ್ಸಾಹದಾಯಕ ಹಾಗೂ ಬೆನ್ನುತಟ್ಟುವಂತಹ ಕೆಲಸವಾಗಿದೆ, ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದರು. ಚಿತ್ರದುರ್ಗ ಜಿಲ್ಲಾ ನೂತನ ಲೋಕಸಭಾ ಸದಸ್ಯರಾದ ಗೋವಿಂದ ಕಾರ ಜೋಳ ರವರು ಮಾತನಾಡಿ ಸಮಾಜದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು ಹಾಗೂ  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಿರಿಯೂರು ತಾಲೂಕು ಕಾಡುಗೊಲ್ಲ ಸಮಾಜದ ಅಧ್ಯಕ್ಷರಾದ ಪಿ ಆರ್ ದಾಸ್ ರವರು ಪ್ರಾಸ್ತಾವಿಕ ಮಾತನಾಡಿ ಕಾಡುಗೊಲ್ಲ ಸಮಾಜದ ಮಕ್ಕಳು ಐಎಎಸ್ ಕೆಎಸ್ ನೀಟ್ ಕೋಚಿಂಗ್ ಪಡೆಯಲು ಕೋಚಿಂಗ್ ಸೆಂಟರ್  ಆರಂಭಿಸುತ್ತೇವೆ ಎಂದರು. ಹಾಗೂ ರಾಜಕೀಯವಾಗಿ ಶೈಕ್ಷಣಿಕವಾಗಿ ನಮ್ಮ ಮಕ್ಕಳು ಮುಂದೆ ಬರಬೇಕಾಗಿದೆ ಎಂದು ತಿಳಿಸಿದರು. ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ರಾಜ್ಯ ಕಾಡುಗೊಲ್ಲ ಸಂಘದ ಅಧ್ಯಕ್ಷರಾದ ರಾಜಣ್ಣನವರು ವಿದ್ಯಾರ್ಥಿಗಳಿಗೆ ಹಾಗೂ ಮುಖಂಡರುಗಳಿಗೆ ಸನ್ಮಾನ ನಡೆಸಿದರು. ಕರ್ನಾಟಕ ರಾಜ್ಯ ಕಾಡುಗೊಲ್ಲ  ಸಂಘದ ಗೌರವಾಧ್ಯಕ್ಷರಾದ ಮೀಸೆ ಮಹಾಲಿಂಗಪ್ಪ , ಉಮೇಶ್ ಕಾರಜೋಳ,  ಕೆ.ಟಿ ತಿಪ್ಪೇಸ್ವಾಮಿ, ತಿಪ್ಪೀರಯ್ಯ, ತಿಪ್ಪಣ್ಣ, ಅಭಿನಂದನ್, ಶಿವರಂಜನಿ ಯಾದವ್, ಖಾದಿ ರಮೇಶ್, ರಾಮಣ್ಣ, ಈಶ್ವರ್, ಸಿ.ಬಿ. ಪಾಪಣ್ಣ, ರಂಗಸ್ವಾಮಿ, ನಂದೀಶ್, ನಾಗೇಂದ್ರ ನಾಯ್ಕ್, ಗೀತಾ ನಂದಿನಿ ಗೌಡ, ವೀರಣ್ಣ, ನಾಗರಾಜ್, ಆಲಮರದಟ್ಟಿ ಶಿವಣ್ಣ, ಗೋವಿಂದರಾಜ್, ಶಿವಾನಂದ್, ನಾಗಣ್ಣ, ರಂಗಯ್ಯ, ಗೋಪಾಲ್, ಬಸವರಾಜ್, ಕೃಷ್ಣ ಪೂಜಾರಿ, ತಿಮ್ಮಣ್ಣ, ಚಿತ್ತಯ್ಯ ಸೇರಿದಂತೆ ಕಾಡು ಗೊಲ್ಲ ಸಮಾಜದ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.