ಶಿವಕುಮಾರ ಎನ್ ಜಿಗೆ “ನ್ಯಾಷನಲ್ ಸೋಶಿಯಲ್ ಡೆವಲಪ್ ಮೆಂಟ್ ಪ್ರಶಸ್ತಿ
ದಾವಣಗೆರೆ. ಜು.೧; ಕಳೆದ ಹಲವು ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ, ಸೇವಾ ವೃತ್ತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು, ಸಮುದಾಯದೊಂದಿಗೆ ಬೆರೆತು ಹಲವಾರು ಸಾಮಾಜಿಕ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು  ಬರುತ್ತಿರುವ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಕ್ತ ನಿಧಿ ಕೇಂದ್ರದಲ್ಲಿ ಜಿಲ್ಲಾ ಆಪ್ತಸಮಾಲೋಚಕರು ಮತ್ತು ಸಂಯೋಜಕರು ಆಗಿ ಸೇವೆಯನ್ನು ಸಲ್ಲಿಸುತ್ತಿರುವ ಶಿವಕುಮಾರ ಎನ್ ಜಿ ಇವರಿಗೆ ಅವರ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ಸೇವಾ ಕಾರ್ಯವನ್ನು ಗುರುತಿಸಿ ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ, ಇಂಟರ್ ನ್ಯಾಷನಲ್ ಅಚಿವರ್ಸ್ ಕೌನ್ಸಿಲ್ – ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ* ಯಿಂದ ನ್ಯಾಷನಲ್ ಸೋಶಿಯಲ್ ಡೆವಲಪ್ ಮೆಂಟ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಸಾಮಾಜಿಕ ಕಾರ್ಯಚಟುವಟಿಕೆಗಳು ಹೀಗೇ ಮುಂದುವರಿಯಲಿ ಎಂದು ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ಅಕಾಡೆಮಿ, ಇಂಟರ್ ನ್ಯಾಷನಲ್ ಅಚಿವರ್ಸ್ ಕೌನ್ಸಿಲ್ – ಏಶಿಯ ಇಂಟರ್ ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿ ಆಶಿಸಿದೆ.ಇವರು ಮೂಲತಹ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದವರು.