ಮಳೆಗಾಲ ಹಿನ್ನೆಲೆ ಮಣ್ಣು ಮಿಶ್ರಿತ ನೀರು: ನಗರದ ಸಾರ್ವಜನಿಕರುಕುಡಿಯುವ ನೀರನ್ನು ಇತರೆ ಕೆಲಸಕ್ಕಾಗಿ ಉಪಯೋಗಿಸಲು ಸೂಚನೆ
ಕಲಬುರಗಿ:ಜು.1:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಣ್ಣು ಮಿಶ್ರಿತ ನೀರು ಬರುತ್ತಿರುವ ಪ್ರಯುಕ್ತ ಈ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ಸಾರ್ವಜನಿಕರು ಈ ಕುಡಿಯುವ ನೀರನ್ನು ಕುಡಿಯಲು ಬಳಸದೇ ಇತರೆ ಕೆಲಸಕ್ಕಾಗಿ ಉಪಯೋಗಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯುಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರಕ್ಕೆ ನೀರು ಸರಬರಾಜು ಮಾಡುವ ಹಳೆಯ ನೀರು ಶುದ್ಧೀಕರಣ ಘಟಕದಲ್ಲಿ (ಹಳೆ ಫಿಲ್ಟರ್ ಬೇಡ್‍ನಲ್ಲಿ) ಇರುವ ಎನ್.ಎಸ್.ಆರ್. (NSR)/ನೆಲಮಟ್ಟದ ಜಲಸಂಗ್ರಹಗಾರದ ಸ್ವಚ್ಛತಾ ಕಾರ್ಯಕೈಗೊಂಡಿರುವ ಪ್ರಯುಕ್ತ ಹಾಗೂ ನೀರು ಸರಬರಾಜು ಮಾಡುವ ಬೆಣ್ಣೆತೋರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಣ್ಣು ಮಿಶ್ರಿತ ನೀರು ಬರುತ್ತಿರುವ ಪ್ರಯುಕ್ತ ನಗರದ ಬರುವ ಮೇಲ್ಮಟದ ಜಲಾ ಸಂಗ್ರಹಗಾರಗಳಾದ ಮೊಮಿನಪುರ, ಡಿಸಿ ಟ್ಯಾಂಕ್, ವೇಟರ್ನರಿ ಟ್ಯಾಂಕ್ ಹಾಗೂ ಡಿ.ವ್ಹಿ.ಸಿ ಟ್ಯಾಂಕಿನ ಅಡಿಯಲ್ಲಿ ಬರುವ ಪ್ರದೇಶಗಳಾದ ಸಂದಲಗಲ್ಲಿ, ಚಾಚಾ ಹೋಟಲ್, ಮೊಮಿನಪುರ, ಗಣೇಶ ಮಂದೀರ, ಲುಕಮನ ಕಾಲೇಜ, ಭರತ ತಾಂಡಾ, ಬಾಪುನಗರ, ಸುಂಧರ ನಗರ, ಲೋವರ್ ಜಗತ್, ಮಕ್ತಂಪುರ, ಚಪಲ್ಲ ಬಜಾರ, ಸಂತ್ರಾಸವಾಡಿ, ಮಿಲನ ಚೌಕ್, ಗದಗಿಮಠ, ಮರಗಮ್ಮ ದೇವಸ್ಥಾನ, ಲೇಡಿಜ್ ಹಾಸ್ಟೇ, ಪೊಲೀಸ ಕ್ವಾರ್ಟರ್ಸ್, ಕುವೆಂಪು ಕಾಲೋನಿ, ಮಹಾಲಕ್ಷ್ಮಿ ಲೆ-ಔಟ್, ವೀರೇಶ ನಗರ, ಸಾಯಿನಗರ, ಐವಾನ್ ಶಾಹಿ ಪ್ರದೇಶಗಳಲ್ಲಿನ ಸಾರ್ವಜನಿಕರು ಕುಡಿಯುವ ನೀರನ್ನು ಕುಡಿಯಲು ಬಳಸದೇ ಇತರೆ ಕೆಲಸಕ್ಕಾಗಿ ಉಪಯೋಗಿಸಬೇಕು.
ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕು. ನೀರಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ, ಶುಲ್ಕರಹಿತ ಸಹಾಯವಾಣಿ ಸಂಖ್ಯೆ 1800 425 8247 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಹಾಗೂ ದೂರುಗಳನ್ನು ದಾಖಲಿಸಬಹುದು ಎಂದು ಅವರು ತಿಳಿಸಿದ್ದಾರೆ.