“ಅರಿವಿರದ ಭಯಕ್ಕೆ ಅಂಜಬೇಡಿ”
ಕಲಬುರಗಿ:ಜು.1:”ವರ್ತಮಾನ ಕಾಲದ ಸಮಸ್ಯೆ,ಭಯಗಳು ಇರಲಿ . ಆದರೆ ನಮಗೆ ಗೊತ್ತೇ ಇರದ ಮುಂದೆ ಭವಿಷ್ಯತ್ ಕಾಲೀನದಲ್ಲಿ ಆಗಬಹುದಾದ ಭಯಗಳಿಂದಲೂ ದೇವರು ರಕ್ಷಿಸುತ್ತಾನೆ. ಆದರೆ ಆ ದೇವನಲ್ಲಿ ವಿಶ್ವಾಸವಿರಬೇಕಷ್ಟೆ”ಹೀಗೆಂದು ಪರಮ ಪೂಜ್ಯ ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮತೀರ್ಥರು ಸಂದೇಶವನ್ನು ನೀಡಿದರು.
ಮಳಖೇಡ ಕ್ಷೇತ್ರ ,ಶ್ರೀಮತ್ಟೀಕಾಕೃತ್ಪಾದರ ಮೂಲವೃಂದಾವನ ಸನ್ನಿಧಾನ ಇಲ್ಲಿ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡುತ್ತಾ ನಮ್ಮನ್ನು ದೇವರು ಎಲ್ಲಾ ಸ್ಥಳಗಳಿಂದ ರಕ್ಷಿಸಿದ್ದಾನೆ.ಲೋಕದಲ್ಲಿ ವಾಸಿಸುವ ನಮಗೆ ಅಪಾಯ ,ಭಯಗಳು ಹೇಗುಂಟಾಗುತ್ತವೆ ಇದು ತಿಳಿದಿರುವುದಿಲ್ಲ. ಬೇರೆ ಗ್ರಹಗಳಿಂದ,ಸೂರ್ಯ ಕಿರಣಗಳಿಂದ( uಟಣಡಿಚಿvioಟeಣ ಡಿಚಿಥಿs)ಇಲ್ಲಿ ವಾತಾವರಣದಲ್ಲಿ ಆಕ್ಸಿಜನ್ ಇಟ್ಟು ರಕ್ಷಿಸಿದ್ದಾನೆ.ಅಷ್ಟೇ ಅಲ್ಲ.ಅವನು “ತ್ರ್ಯಧೀಶಃ”. ಎಲ್ಲಾ ಕಾಲಗಳಿಗೂ ಸ್ವಾಮಿಯಾಗಿದ್ದಾನೆ ಆದ್ದರಿಂದ ನಮಗೆ ಗೊತ್ತೇ ಇರದ ಭವಿಷ್ಯತ್ ಕಾಲೀನ ಆಪತ್ತುಗಳಿಂದಲೂ ರಕ್ಷಿಸುತ್ತಾನೆ. ಒಬ್ಬ ಡಾಕ್ಟರ್ ಬಳಿ ಹೋಗಿ” ನನಗೆ 10ವರ್ಷದ ನಂತರ ಒಂದು ರೋಗ ಯಾವುದು ಬರುತ್ತೋ ಅದಕ್ಕೆ ಔಷಧ ಈಗ ಕೊಡು” ಎಂದರೆ ಅದಕ್ಕೆ ಆ ಡಾಕ್ಟರ್ ಏನೂ ಮಾಡಲಾರ.ನಮ್ಮ ಜೀವನದಲ್ಲಿ ಹಿಂದೆ ನಾವೇನು ಪಾಪ ಕರ್ಮ ಮಾಡಿದ್ದೇವೆಯೋ ಗೊತ್ತಿಲ್ಲ. ಅದಕ್ಕೆ ಶಿಕ್ಷೆಯಾಗಿ ಮುಂದೆ ಯಾವ ಕಾಲದಲ್ಲಿ ಯಾವ ದುಃಖ ಗಂಡಾತರಗಳು ಕಾದಿದೆಯೋ ಗೊತ್ತಿಲ್ಲ.ಆದರೆ ಆ ಭಗವಂತನು ” ತ್ರ್ಯಧೀಶಃ” .ನಾವು ಅವನಲ್ಲಿ ಭಕ್ತಿಯಿಂದ ವಿಶ್ವಾಸ ಮಾಡಿದರೆ ಮೂರೂ ಕಾಲಗಳಿಗೂ ನಿಯಾಮಕನಾದ ಅವನು” ಇಂದೇನು” “ಮುಂದೇನು” “ಹಿಂದೇನು”. ಎಲ್ಲವನ್ನೂ ತಿಳಿದವ. ಮಾತ್ರವಲ್ಲ.ಅದಕ್ಕೇನು ಉಪಾಯ ಅನ್ನುವುದನ್ನೂ ಶಾಸ್ತ್ರದಲ್ಲಿ ಪರಮಾತ್ಮ ತಿಳಿಸಿಕೊಟ್ಟಿದ್ದಾನೆ. ಅವನ ಸ್ತೋತ್ರ,ಜಪ,ಪಠನ,ಪಾರಾಯಣ,ಮಹಾತ್ಮರ ಸೇವೆ ಇವೆಲ್ಲವನ್ನೂ ಮಾಡಿದರೆ ಮೂರೂ ಕಾಲದ ಆಪತ್ತನ್ನು ಪರಿಹಾರ ಮಾಡುತ್ತಾನೆ. ಪರಮಾತ್ಮ ಅಂತಹ ದಯಾಲು ಆಗಿದ್ದಾನೆ. ಜೀವನದಲ್ಲಿ ಕಷ್ಟಗಳು ಬಂದಾಗ ನಮ್ಮ ಪ್ರಯತ್ನ ಕೈ ಮೀರಿ ಹೋದಾಗ ಹತಾಶರಾಗದೆ, ಚಿಂತಾಕ್ರಾಂತರಾಗದೆ ,ಅವನಲ್ಲಿ “ಭಕ್ತಿಯಿಂದ ವಿಶ್ವಾಸ ಮಾಡಿ” ಎಂದು ಭಾಗವತ ಸಂದೇಶ ಕೊಟ್ಟಿದೆ ಎಂದು ಶ್ರೀಗಳು ತಿಳಿಸಿದರು.ಜೀವನದಲ್ಲಿ ಮನುಷ್ಯಕ್ಕಾಗಿ ಹಣ ಕೂಡಿಡುವಂತೆ ಭವಿಷ್ಯದಲ್ಲಿನ ತನ್ನ,ತನ್ನವರ ನೆಮ್ಮದಿಗಾಗಿ ಪುಣ್ಯವನ್ನು ಸಂಗ್ರಹಿಸಬೇಕು.” ವಿಶ್ವಸ್ಯ ಯಃ ಸ್ಥಿತಿಲಯೋದ್ಭವಹೇತುರಾದ್ಯೋ ಯೋಗೇಶ್ವರೈರಪಿ ದುರತ್ಯಯ ಯೋಗ ಮಾಗರ್ಃ| .”ಯೋಗ” ಅಂದರೆ ಉಪಾಯ.ಮಾರ್ಗ.ನಮ್ಮೆಲ್ಲರ ಸಾರ್ವದೇಶಿಕ,ಸಾರ್ವಕಾಲಿಕ,ರಕ್ಷಣೆಗಾಗಿ ಏನೆಲ್ಲಾ ಮಾರ್ಗಗಳು,ಉಪಾಯಗಳನ್ನು ದೇವರು ಇಟ್ಟಿದ್ದಾನೆ ಇದನ್ನು ಯೋಗೇಶ್ವರರಿಂದಲೂ ಊಹೆ ಮಾಡಲು ಸಾಧ್ಯವಿಲ್ಲ.ಆ ದೇವರು ಏನು ಆಲೋಚನೆ ಮಾಡಿರಬಹುದು, ಹೇಗೆ,ಯಾರನ್ನು ರಕ್ಷಣೆ ಮಾಡಬಹುದು, ಇದು ಯಾರಿಗೂ ತಿಳಿಯುವುದಿಲ್ಲ.ಹಿರಣ್ಯಕಶಿಪು ಎಂಬ ವರಬಲದಿಂದ ಕೊಬ್ಬಿ ಯಾವರೀತಿಯಿಂದಲೂ ಸಾವಿಲ್ಲದ ಮಹಾರಾಕ್ಷಸನನ್ನು ಸಂಹರಿಸಲು ,ಸಾಯಂಕಾಲದಲ್ಲಿ,ಉಗುರಿನಲ್ಲಿ,ಹೊಸಿಲು ಮೇಲೆ,
ಬ್ರಹ್ಮ ಸೃಷ್ಟನಲ್ಲದವನಾಗಿ ಅದ್ಭುತವಾಗಿ ಸಂಹಾರ ಮಾಡಿದ. ಭಕ್ತರಿಗಾಗಿ ರಕ್ಷಾ ಸಾಧನಗಳು ದೇವರ ದೃಷ್ಟಿಯಲ್ಲಿ” ಸಹಸ್ರಧಾ,ಅನಂತಧಾ,ಪುನಶ್ಚ ಅನಂತಧಾ” ಎಂದು ಶಾಸ್ತ್ರದಲ್ಲಿ ತಿಳಿಸಿದಂತೆ ಲೆಕ್ಕವಿಲ್ಲದಷ್ಟಿವೆ.
ಶರೀರವುಳ್ಳ ನಮಗೆ ಜೀವಿಸಲಿಕ್ಕೆ ರೋಗಾಣು,ವೈರಾಣುಗಳಿಂದ ಅಪಾಯವಾಗದಿರಲು ಚರ್ಮ( ಇxಣeಡಿಟಿಚಿಟ ,Iಟಿಣeಡಿಟಿಚಿಟ) ಬಿಳಿರಕ್ತಕಣ( ತಿ.b.ಛಿ) (ಂಟಿಣiboಜಥಿs). ಹೊಟ್ಟೆಯಲ್ಲಿ ಜೀರ್ಣವಾಗಲು ಆಮ್ಲ( ಂಛಿiಜ) ರಕ್ತ ಶುದ್ಧಿಗಾಗಿ,ಮೂತ್ರ ತಯಾರಿಕೆಗಾಗಿ ಮೂತ್ರಪಿಂಡ(ಏiಜಟಿeಥಿ) ಉಸಿರಾಡುವ ಗಾಳಿ ಶುದ್ಧಿಗಾಗಿ, ಪ್ರಾಣವಾಯುವಿಗಾಗಿ,(ಈoಡಿ ಔxಥಿgeಟಿ)ಶ್ವಾಸಕೋಶ(ಐuಟಿgs)ಪೆÇೀಷಕಾಂಶಗಳ ಸೆಳೆಯುವಿಕೆಗಾಗಿ( ಈoಡಿ ಂbseಡಿvಚಿಣioಟಿ) ಓeಠಿhಡಿoಟಿ uಟಿiಣs,ಇನ್ನು ಮಲತಯಾರಿಕೆ,ವಿಸರ್ಜನೆ ಅಂಗ,ಪೆÇೀಷಕಾಂಶಗಳ ವಿತರಣಾಂಗ,ಮೂತ್ರ ವಿಸರ್ಜನಾಂಗ, ಹೀಗೆಲ್ಲಾ ಮಾನವನಿಂದ ಸಾಧ್ಯವಾಗದಿರುವ ವಸ್ತುಗಳನ್ನು ಸೃಷ್ಟಿಸಿ ನಮ್ಮ ಶರೀರ ಕಾಪಾಡಿ ,ನಮ್ಮನ್ನು ರಕ್ಷಣೆ ಮಾಡಿದ್ದಾನೆ. ಇದನ್ನು ಮೂರೂ ಕಾಲಗಳಲ್ಲಿ ಮಾಡ್ತಾನೆ ಆದ್ದರಿಂದ ಅವನು” ತ್ರ್ಯಧೀಶಃ”.
ತಂದೆ ,ತಾಯಿಯ ಮೂಲಕ ಜೀವ ಈ ಪ್ರಪಂಚಕ್ಕೆ ಬರುವಾಗ ಲಕ್ಷಾಂತರ ಜೀವಿಗಳು ಅತಿಸೂಕ್ಷ್ಮವಾಗಿದ್ದು ಇವನ ಜೊತೆ ಹುಟ್ಟಲು ಪೈಪೆÇೀಟಿ ನಡೆಸಿರುತ್ತವೆ. ಆಗ ಇವನ ಕರ್ಮಕ್ಕನುಸಾರ ದೇವರು ಆ ಎಲ್ಲಾ ಜೀವಿಗಳನ್ನು ಬದಿಗೊತ್ತಿ ಇವನನ್ನು ಬದುಕಿಸುತ್ತಾನೆ.ಹುಟ್ಟಿಸುತ್ತಾನೆ. ಹೀಗೆ ಜಯ ಕೊಟ್ಟು ಹುಟ್ಟಿಸಿದ್ದಾನೆ. ” ಕ್ಷೇಮಂ ವಿಧಾಸ್ಯತಿ ಸ ನೋ ಭಗವಾನ್ ತ್ರ್ಯಧೀಶಃ” .
ಹಿರಣ್ಯಾಕ್ಷನೆಂಬ ಅಸುರ ಭೂಮಿಯನ್ನೇ ಅಪಹರಿಸಿದಾಗ ದೇವತೆಗಳಿಗೆ ಏನೂ ತೋಚದೆ ಬ್ರಹ್ಮದೇವರ ಬಳಿ ಕಷ್ಟ ತೋಡಿಕೊಂಡಾಗ ಬ್ರಹ್ಮದೇವರು ಆ ದೇವತೆಗಳಿಗೆ ಸಮಾಧಾನಮಾಡುತ್ತಾ ” ಆ ದೇವರಲ್ಲಿ ವಿಶ್ವಾಸಮಾಡಿ, ಅವನು ” ತ್ರ್ಯಧೀಶ”, ರಕ್ಷಿಸುವನು.”ವಿಶ್ವಸ್ಯ ಯಃ ಸ್ಥಿತಿಲಯೋದ್ಭವಹೇತುರಾದ್ಯೋ ಯೋಗೇಶ್ವರೈರಪಿ ದುರತ್ಯಯ ಯೋಗಮಾಗರ್ಃ| ಕ್ಷೇಮಂ ವಿಧಾಸ್ಯತಿ ಸ ನೋ ಭಗವಾಂಸ್ತ್ರ್ಯಧೀಶಸ್ತ್ರಾತಾಸ್ಮದೀಯವಿಮೃಶೇನ ಕಿಯಾನಿಹಾಥರ್ಃ||. ನಾವೂ ಭಗವಂತನಲ್ಲಿ ಧೃಡವಾದ ವಿಶ್ವಾಸಮಾಡಿ ರಕ್ಷಣೆಯ ಭಾರ ಅವನಿಗೇ ಬಿಡೋಣ ಎಂದು ಶ್ರೀಮದ್ಭಾಗವತ ಸಂದೇಶನೀಡಿದೆ ಎಂದು ಶ್ರೀಪಾದಂಗಳವರು ಭಕ್ತ ಸಮೂಹವನ್ನುದ್ದೇಶಿಸಿ ಅನುಗ್ರಹಿಸಿದರು.