ಕೊಳ್ಳುರ ಎಸ್ಡಿಎಂಸಿಗೆ ವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಔರಾದ :ಸೆ.೨೭: ತಾಲೂಕಿನ ಕೊಳ್ಳುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಸಮಿತಿ ರಚನೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಿಜಯಕುಮಾರ ದೆಗಲವಾಡೆ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಮಹಾನಂದ ಸೂರ್ಯಕಾಂತ ಅವರನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಲಯ ಸಂಪನ್ಮೂಲ ಅಧಿಕಾರಿಗಳು ಮಾಹಾದೇವ ಘುಳ್ಳೆ, ಮುಖ್ಯಗುರು ಕಲ್ಲಪ್ಪ ಬೋರಾಳೆ, ಪಿಎಸ್‌ಐ ಸಿದ್ದಲಿಂಗ, ಗ್ರಾ.ಪಂ ಅಧ್ಯಕ್ಷೆ ಸುನಿತಾ ಶಿವಶಂಕರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಕುಮಾರ ದೆಗಲವಾಡೆ, ಗ್ರಾಮದ ಮುಖಂಡರಾದ ಸೂರ್ಯಕಾಂತ ಮಜ್ಗೆ, ಕಾಶಿನಾಥ ಡಬಾಡೆ, ರಾಜಕುಮಾರ ಹೊನಸೆಟ್ಟೆ, ಬಂಡಯ್ಯ ಸ್ವಾಮಿ, ಸುಧಾಕರ ಕೊಳ್ಳುರ, ಅಶೋಕ ಚಂದ, ವಿಜಯಕುಮಾರ ಹೊನಸೆಟ್ಟೆ, ವಿಜಯಕುಮಾರ ಜಾಧವ, ಚಾಂದಪಾಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.