ವಿಶ್ವಕರ್ಮ ಸಮಾಜ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ: ಶಾಸಕ ಪಾಟೀಲ್
ಸಂಜೆವಾಣಿ ವಾರ್ತೆ
ಹುಮನಾಬಾದ: ಸೆ.೨೭:ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಬದ್ಧನಾಗಿ ಪ್ರಮಾಣ ಕವಾಗಿ ಪ್ರಯತ್ನಿಸಲಾಗುವುದು ಎಂದು ಶಾಸಕ ಡಾ.ಸಿದ್ದು ಪಾಟೀಲ ಹೇಳಿದರು.
ಪಟ್ಟಣದ ಶ್ರೀ ವೀರದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜದಿಂದ ಬುಧವಾರ ನಡೆದ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮ ಸಮಾಜದ ಸಮುದಾಯ ಭವನದÀ ನಿರ್ಮಾಣ ಸಂಬAಧ ನಿವೇಶನವನ್ನು ಮಂಜೂರು ಮಾಡಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿ ಯೋಜನೆಯಡಿ ೨೫ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೇ ನೀಡಿದರು.
ದೇಶದಲ್ಲಿರುವ ವಿಶ್ವಕರ್ಮ ಸಮಾಜದ ಬಾಂಧವರಿಗಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಮಹತ್ವದ ಯೋಜನೆಗಳು ಕಲ್ಪಿಸಿಕೊಟ್ಟಿದ್ದಾರೆ. ಸಮಾಜದ ಬಾಂಧವರು, ಅಂತಹ ಯೋಜನೆಗಳ ಸದುಪಯೋಗ ಪಡೆದು ಆರ್ಥಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.
ಹಿರೇಮಠದ ರೇಣುಕ ವೀರ ಗಂಗಾಧರ ಸ್ವಾಮೀಜಿ, ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಫಾರ್ಮಾಸಿಸ್ಟ್ ಯುನಿಯವ ರಾಜ್ಯಾಧ್ಯಕ್ಷ ರವಿ ಪಂಚಾಳ ಪ್ರಾಸ್ತಾವಿಕ ಮಾತನಾಡಿದರು.
ವಿಶ್ವಕರ್ಮ ಸಮಾಜ ಜಿಲ್ಲಾಧ್ಯಕ್ಷ ಮಹೇಶ ಪಂಚಾಳ, ಕಾರ್ಯದರ್ಶಿ ಶಿವಾನಂದ ಪಂಚಾಳ, ಬಸವರಾಜ ಪಂಚಾಳ, ಭೀಮೇಶ ಪಂಚಾಳ, ಧರ್ಮಪಾಲ ಪೊದ್ದಾರ, ಬಸವರಾಜ ಪಂಚಾಳ, ಪ್ರಭಾಕರ ಪಂಚಾಳ, ವಿಶ್ವಕರ್ಮ ಸಮಾಜ ಅಧ್ಯಕ್ಷ ಅಶೋಕ ಪಂಚಾಳ, ಪ್ರಧಾನ ಕಾರ್ಯದರ್ಶಿ ಮಾಣ ಕ ಎಂ. ಕಾರ್ಯಾಧ್ಯಕ್ಷ ಮಾಣ ಕ ಎಚ್, ಉಪಾಧ್ಯಕ್ಷ ವೀರೇಶ, ಸಂಘಟನಾ ಕಾರ್ಯದರ್ಶಿ ಸಂಜೀವಕುಮಾರ, ಸಹ ಕಾರ್ಯದರ್ಶಿ ಸಂಜೀವಕುಮಾರ, ವಿಜಯಕುಮಾರ ಚಟ್ಟಿ, ಇದ್ದರು.
