ವಿವಿಧ ಮಳಿಗೆಗಳ ಮೇಲೆ ತಂಬಾಕು ಜಾಗೃತಿ ದಾಳಿ
ಬೀದರ, ಸೆ.೨೭:ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ ೨.೦ ಚಟುವಟಿಕೆಯ ಅನುಸಾರ ಬೀದರ ಹಾಗೂ ಭಾಲ್ಕಿ ತಾಲ್ಲೂಕಿನಲ್ಲಿ ತಂಬಾಕು ಮಾರಾಟ ಮಳಿಗೆಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಂಬಾಕು ಜಾಗೃತಿ ದಾಳಿ ಮಾಡಿ ಕೋಟ್ಪಾ ೨೦೦೩ರ ಕಾಯ್ದೆ ಉಲ್ಲಂಘನೆ ಮಾಡಿದ ಒಟ್ಟು ೫೮ ಅಂಗಡಿಗಳಿಗೆ ೬೨೦೦ ರೂ. ದಂಡ ವಿಧಿಸಲಾಯಿತು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ. ಶಂಕರೆಪ್ಪಾ ಬೊಮ್ಮಾ ತಿಳಿಸಿದರು.
ವ್ಯಾಪಾರಿಗಳು ತಮ್ಮ ಅಂಗಡಿಗಳಲ್ಲಿ ಕೇಂದ್ರ ಸರ್ಕಾರದಿಂದ ಈಗಾಗಲೇ ನಿಶೇದಿಸಲ್ಪಟ್ಟ ಸಿಗರೇಟ್‌ಗಳನ್ನು ಮಾರಾಟವನ್ನು ಮಾಡಬೇಕು. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಿಗರೇಟ್ ಹಾಗೂ ಮಾದಕ ವಸ್ತುಗಳ ಬಳಕೆ ಆರೋಗ್ಯದ ಮೇಲೆ ಗಂಭಿರ ಪರಿಣಾಮಗಳು ಬೀರುವುದರಿಂದ ಈ ಉತ್ಪನ್ನಗಳ ಬಳಕೆಯನ್ನು ಮಾಡದಿರುವಂತೆ ಜಾಗೃತರಾಗಲು ಮನವಿ ಮಾಡಿದರು.
ಮಾದಕ ವಸ್ತುಗಳಿಗೆ ಬಲಿಯಾಗಬೇಡಿ: ಆನಂದ ಉಕ್ಕಲಿ
ಬೀದರ, ಸೆ.೨೭: ಇಂದಿನ ಯುವ ಪೀಳಿಗೆಯು ಮಾದಕ ವಸ್ತುಗಳಿಗೆ ದಾಸರಾಗದೇ ತಮ್ಮ ಅಮೂಲ್ಯ ಭವಿಷ್ಯವನ್ನು ಹಾಳು ಮಾಡಿಕೊಳ್ಳದೇ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಬೀದರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಹೇಳಿದರು.
ಅವರು ಬೀದರ ಅಬಕಾರಿ ಇಲಾಖೆಯಿಂದ ಬೀದರ ಮೈಲೂರಿನ ಗುರುನಾನಕ ದೇವ್ ಇಂಜಿನಿಯರಿAಗ್ ಕಾಲೇಜಿನ ಗುರುನಾನಕ ಭವನದ ಸಭಾಂಗಣದಲ್ಲಿ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಢಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳು ಹಾಗೂ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಕಾನೂನಿನ ಅಡಿಯಲ್ಲಿ ಇರುವ ಶಿಕ್ಷೆಯ ಪ್ರಮಾಣದ ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಗುರುನಾನಕ ದೇವ್ ಇಂಜಿನಿಯರಿAಗ್ ಕಾಲೇಜಿನ ಸಿಬ್ಬಂದಿಗಳಾದ ಡಾ.ಸಿಂಧು ಪ್ರಸಾದ ಎಚ್‌ಓಡಿ, ಡಾ.ಧನಂಜಯ ಎಂ., ಡಾ.ಅನುಪಕುಮಾರ, ಡಾ.ನಥಾನಿಯಲ್ ರಾಜ್, ಅನಿಲರಾಜ್ ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಕಾಲೇಜಿನ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.