ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಮಹಿಳೆಯರು ಸ್ವಾವಲಂಬಿ ಆಗಲು ಸಹಕಾರಿ: ಮಹಮ್ಮದ್ ಗೌಸ್
ಬೀದರ:ಸೆ.೨೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪರಮ ಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆ ಅಮ್ಮನವರ ಮಾರ್ಗದರ್ಶನದಲ್ಲಿ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಶ್ರಿ ರಾಮ ಕಲ್ಯಾಣ ಮಂಟಪ ಮಂಗಲಪೇಟ್ ಕಾರ್ಯಕ್ಷೇತ್ರದಲ್ಲಿ ಹಮ್ಮಿಕೊಲಾಯಿತು.
ನಗರ ಸಭೆ ಅಧ್ಯಕ್ಷರಾದ ಮಹಮ್ಮದ್ ಗೌಸ್ ಅವರು ಉದ್ಘಾಟನೆ ಮಾಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಮಹಿಳೆಯರನ್ನು ಸ್ವಾವಲಂಬನೆ ಆಗಲು ಸಹಾಯಕಾರಿಯಾಗಿದೆ. ಅನೇಕ ಬಡವರಿಗೆ, ಆರ್ಥಿಕ ಸಬಲರಾಗಲು ಸ್ವ ಉದ್ಯೋಗ ಮತ್ತು ಎಷ್ಟು ಕುಟುಂಬಗಳು ಅಭಿವೃದ್ಧಿಯಾಗಿವೆ ಎಂದು ಮಾತಾನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಜನಜಾಗೃತಿ ಸದಸ್ಯರಾದ ಗುರುನಾಥ್ ರಾಜಗೀರ್ ಅವರು ಪ್ರತಿಯೋಬ್ಬ ಮಹಿಳೆಯರು ಸ್ವಾವಲಂಬನೆ ಬದುಕು ನಡೆಸಬೇಕು ಮತ್ತು ಯಾವ ಜಾತಿ ಭೇದವಿಲ್ಲ ನಮ್ಮಲ್ಲಿ ಹರಿಯುವುದು ಒಂದೇ ರಕ್ತ , ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹೇಗೆ ಬದುಕುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘವನ್ನು ಕಟ್ಟಿ ಬೆಳೆಸಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಮಾತಾನಾಡಿದರು.
ಬ್ಯಾಂಕ್ ಆಫ್ ಬರೋq ವ್ಯವಸ್ಥಾಪಕರಾದ ಶ್ರೀ ನರಹರಿ ಇವರು ಬ್ಯಾಂಕಿನ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಬೀದರ ಜಿಲ್ಲೆಯ ಜಿಲ್ಲಾ ನಿರ್ದೇಶಕರು ಶ್ರೀಯುತ ಪ್ರವೀಣ್ ಕುಮಾರ್,ಕಿರು ಪ್ರದರ್ಶನ ಮಾಡುವ ಮೂಲಕ ಒಂದು ಸಣ್ಣ ಸಾಲ ಕೊಡಬೇಕು ,ಅಂದರೆ ಹತ್ತಾರು ಕಾಗದ ಪತ್ರ ಬೇಕಾಗುತ್ತೆ ಆದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸಂಸ್ಥೆಯ ಭರವಸೆ ಇವತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಸಿಗುವಂತಾಗಿದೆ. ಅವಶ್ಯಕತೆ ಇದ್ದವರಿಗೆ ಸಹಾಯ ಆಗಬೇಕು. ಅನ್ನೊ ದೃಷ್ಟಿ ಯಿಂದ ಸಂಸ್ಥೆ ಮುಖಾಂತರ ಸಾಲ ಕೊಡುತ್ತಿರುವುದು. ಇದೊಂದು ಪಾರದರ್ಶಕತೆಯ ಬಗ್ಗೆ ಸದಸ್ಯರು ಗಮನಿಸುವುದು. ಸಮುದಾಯಕ್ಕೆ ಹಲವಾರು ಉಪಯುಕ್ತ ಕಾರ್ಯಕ್ರಮ ಪೂಜ್ಯರು ಅನುದಾನ ನೀಡಿರುತ್ತಾರೆ. ಸ್ವ ಸಹಾಯ ಸಂಘದ ಸದಸ್ಯರಿಗೆ ಸುವಿಧಾ ರಶೀದಿ, ಬ್ಯಾಂಕ್ ರಶೀದಿ, ಮಾಸಿಕ ವರದಿ,ಜಮೆ ಮಾಡುವ ಮೊತ್ತದ ಬಗ್ಗೆ, ಉಳಿತಾಯ ಎಷ್ಟು,ಬಡ್ಡಿದರ , ಹೋಮ್ ಲೋನ್, ಮರುಪಾವತಿ ಚಿಟಿ ,ಐiಛಿ, ಬಗ್ಗೆ ಮಾಹಿತಿ ನೀಡಿ, ಸ್ವ ಸಹಾಯ ಸಂಘದ ಗುಂಪು ಭದ್ರತೆ ಬಗ್ಗೆ ಹಲವಾರು ಮಾಹಿತಿ ಮಾರ್ಗದರ್ಶನ ನೀಡಿದರು.
ಬೀದರ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಧರ್ಮೇಂದ್ರ ಎನ್ ರವರು ಮಾತನಾಡಿ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರ ಮಾಸಾಶನ, ಶ್ರದ್ದಾ ಕೇಂದ್ರ, ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನ ದೀಪ ಶಿಕ್ಷಕರ ಆಯ್ಕೆ,ಜನ ಮಂಗಳ ಕಾರ್ಯಕ್ರಮ, ನಮ್ಮೂರು ನಮ್ಮ ಕೆರೆ , ಕೃಷಿ ಅನುದಾನ ವಿತರಣೆ, ಜನಜಾಗೃತಿ ಕಾರ್ಯಕ್ರಮಗಳು, ಜ್ಞಾನ ವಿಕಾಸ ಕಾರ್ಯಕ್ರಮಗಳು ಹೀಗೆ ಹಲವಾರು ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಣಕಾಸು ಪ್ರಬಂಧಕರಾದ ಕೃಷ್ಣಾನಂದ ತಾಲೂಕು ವಿಚಕ್ಷಣಾ ಅಧಿಕಾರಿಗಳಾದ ಕವಿತಾ, ತಾಲೂಕು ನೋಡಲ್ ಅಧಿಕಾರಿಗಳಾದ ಕೃಷ್ಣ ,ಐಟಿ ಪ್ರಬಂಧಕರಾದ ಜ್ಯೋತಿ, ಮೇಲ್ವಿಚಾರಕರಾದ ಶಿಲ್ಪ, ಸರಸ್ವತಿ, ಸುನೀಲ್,ಬೀರಪ್ಪ , ಕಛೇರಿ ಸಹಾಯಕರಾದ ಪ್ರವೀಣ್,vಟeಗಳು , ಸೇವಾ ಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
