ನಿರಂತರ ಭಜನೆ
ಬೈಲಹೊಂಗಲ, ಜು1: ನಗರದ ಇತಿಹಾಸ ಪ್ರಸಿದ್ಧ ಶ್ರೀ ದೊಡ್ಡಾದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ನಿರಂತರ ಭಜನೆಗೆ ಚಾಲನೆ ನೀಡಲಾಯಿತು.
ನಗರದ ಪಾಟೀಲ ಗಲ್ಲಿಯಲ್ಲಿನ ಶ್ರೀ ದೊಡ್ಡಾದೇವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ವರ್ಷ ಪದ್ಧತಿಯಂತೆ ಲೋಕ ಕಲ್ಯಾಣಾರ್ಥವಾಗಿ ಶ್ರೀ ದೊಡ್ಡಾ ದೇವರ ಭಜನಾ ಮಂಡಳಿ ವತಿಯಿಂದ ನಡೆಸಲಾಗುವ ಒಂದು ದಿನದ ನಿರಂತರ ನಿಂತುಕೊಂಡು ಭಜನೆ ಮಾಡುವ ಕಾರ್ಯಕ್ರಮಕ್ಕೆ ಬೆಟಗೇರಿ ಮುರುಸಾವಿರ ಮಠದ ಪೂಜ್ಯ ಕುಮಾರ ವೀರುಪಾಕ್ಷ ಸ್ವಾಮೀಜಿಗಳ ಹಾಗೂ ಮುರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿಗಳ ಸಾನಿಧ್ಯದಲ್ಲಿ ಚಾಲನೆ ನೀಡಲಾಯಿತು.
ಕಳೆದ ಐದು ದಿನಗಳಿಂದ ಮಹಿಳೆಯರಿಂದ ಮಳೆರಾಯನ ಪದಗಳನ್ನು ಹಾಡಲಾಗಿದ್ದು, ಒಂದು ದಿನಗಳ ಕಾಲ ನಿಂತುಕೊಂಡು ಭಜನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇ. ಮೂ. ಮಹಾಂತಯ್ಯ ತೆಗ್ಗಿನಮಠ ಶಾಸ್ತ್ರಿಗಳು, ವೇ.ಮೂ. ಸದಾಶಿವಯ್ಯ ತೆಗ್ಗಿನಮಠ ಶಾಸ್ತ್ರಿಗಳು, ರಾಜಣ್ಣ ಜನ್ಮಟ್ಟಿ, ವಿಜಯ ಬೋಳನ್ನವರ,ಪಾಂಡಪ್ಪ ಇಂಚಲ, ಶಿವಪ್ಪ ಮತ್ತಿಕೊಪ್ಪ, ಶಿವಪ್ಪ ಲಿಂಬೆನ್ನವರ, ಬಸಪ್ಪ ಜಂಬಗಿ, ಶ್ರೀಕಾಂತ ಮತ್ತಿಕೊಪ್ಪ, ಕುಮಾರಗೌಡ ಪಾಟೀಲ,ಉಲವಪ್ಪ ಬಡ್ಡಿಮನಿ, ಅದೃಷ ಹುಚ್ಚನವರ, ಮಹಾಂತೇಶ ಮಲ್ಲಾಪುರ,ಬಾಬು ಮಿರಜಕರ, ಸೋಮಪ್ಪ ವಾಲಿ, ಉಲವಪ್ಪ ಹಲಕಿ, ರಮೇಶ ಪಾಟೀಲ, ನಾಗೇಶ ತೋಟಗಿ, ಮಲ್ಲಿಕಾರ್ಜುನ ಗುಳನ್ನವರ, ಈರಪ್ಪ ಪಿರಗೋಜಿ, ನಿಂಗಪ್ಪ ಜೇಶಕಣಿ, ರವಿ ಪಿರಗೋಜಿ, ಅರುಣ ತುರಮರಿ ಸೇರಿದಂತೆ ಶ್ರೀ ದೊಡ್ಡಾ ದೇವರ ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.