ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಪೂರ್ವ ಪ್ರಾಥಮಿಕ ಶಾಲೆ
ನವಲಗುಂದ,ಜು1 : ಸರ್ಕಾರಿ ಶಾಲೆ ಸಬಲಿಕರಣ ಹಾಗೂ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಶಿಕ್ಷಣ ಮಂತ್ರಾಲಯ ಪಿ,ಎ ಬಿ ಯಲ್ಲಿ ಅನುಮತಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಬಿ ಮಲ್ಲಾಡ ಹೇಳಿದರು.
ಮಹಬೂಬ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಗಂಡು ಮಕ್ಕಳ ಶಾಲೆ ನಂ 3 ರಲ್ಲಿ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಎಲ್ ಕೆ ಜಿ /ಯು ಕೆ ಜಿ ನರ್ಸರಿ ತರಗತಿ ಉದ್ಘಾಟನೆ ಹಾಗೂ ನರ್ಸರಿ ಶಾಲೆಗೆ ಬಂದಂತಹ ಅನುದಾನದಲ್ಲಿ ಶಿಶು ಸ್ನೇಹಿ ಪೀಠೋಪಕರಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಮ್ಮದಶಿರಾಜ ಶಿರಕೋಳ ಮಾತನಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಹಾಗೂ ಸರ್ಕಾರ ಸರ್ಕಾರಿ ಶಾಲೆ ಬೆಳೆಸುವ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿಸಿದ್ದಾರೆ ಎಂದರು.
ಕ್ಲಸ್ಟರಿನ ಸಿ.ಆರ್.ಪಿ.ಗಳಾದ ಗಣೇಶ ಹೋಳೆಯಣ್ಣವರ, ಎಚ್ ಎಂ ಗುರಾಣಿ, ಜಹೀರ್ ಅಬ್ಬಾಸ್ ಮಕಾನದಾರ, ಅಬ್ಬಾಸ್‍ಅಲಿ ದೇವರಿಡು, ರಾಜೇಸಾಬ ಅಣ್ಣಿಗೇರಿ, ಬಾಬಾಜಾನ ಖುದಾವಂದ, ಮಹ್ಮದಜಬ್ಬಾರ ಧಾರವಾಡ, ಶೇಖಹಸನ ಸಿರಗುಪ್ಪಿ, ಮಹ್ಮದಇಸಾಕ ದಾರುಗಾರ, ಮಕ್ತುಮಸಾಬ ಮಿರ್ಜಿ, ಅಲ್ಲಾಬಕ್ಷ ಮಕಾನದಾರ, ಶಿಕ್ಷಕರಾದ ಎಂ.ಎಂ.ಮುಲ್ಲಾ, ಸಿ ಎಚ್ ಜಗಾಪೂರ, ಎಸ ಜಿ ಮಕಾನದಾರ, ಎಸ್ ಎಂ ಕಾಗದಗಾರ, ಫೈರೋಜಾ ದಾರುಗಾರ ಮುಂತಾದವರು ಉಪಸ್ಥಿತರಿದ್ದರು.