ಸದ್ಭೋಧ ಸಮ್ಮಾನ ಸಮ್ಮಿಲನ
ಲಕ್ಷ್ಮೇಶ್ವರ-ಪಟ್ಟಣದ ಚನ್ನಮ್ಮನವನದಲ್ಲಿ ಪ್ರತಿಭಾ ಪುರಸ್ಕಾರ ಉಪನ್ಯಾಸ ಸನ್ಮಾನ ಕಾರ್ಯಕ್ರಮ ಸದ್ಬೋದ ಸಮ್ಮಾನ ಸಮ್ಮಿಲನ ಸಮಾರಂಭ ರಾಮಗಿರಿಯ ಬಸಣ್ಣನವರು ಬೆಟಿಗೇರಿ ಅವರ ಅಭಿಮಾನಿ ಬಳಗದಿಂದ ಜರುಗಿತು.
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮುಂಡರಗಿಯ ಸಂತಾನ ಮಠದ ಪರಮಪೂಜ್ಯ ಜಗದ್ಗುರು ನಾಡೋಜ ಡಾ . ಅನ್ನದಾನಿಶ್ವರ ಮಹಾ ಶಿವಯೋಗಿಗಳವರು ಮಾನವನಾಗಿ ಜನ್ಮ ತಾಳಿದ ಮೇಲೆ ಜೀವನದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಋಣವನ್ನು ತೀರಿಸಬೇಕು.
ರಾಮಗಿರಿ ಗ್ರಾಮದ ಬಸಣ್ಣ ಬೆಟಿಗೇರಿ ಅವರು ಜೀವನದುದ್ದಕ್ಕೂ ಸಾತ್ವಿಕ ಜೀವನವನ್ನು ನಡೆಸಿ ಸಾಮಾಜಿಕ ಕಳಕಳಿ ಗ್ರಾಮೀಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಜೀವನವನ್ನು ಕಳೆದು ತಮ್ಮ ಹುಟ್ಟು ಹಬ್ಬದ ಅಂಗವಾಗಿ ವಿನಾಕಾರ ಣ ಹಣವನ್ನು ಹಾಳು ಮಾಡದೆ ಅದರ ನೆಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಣೆ ನೀಡಿರುವದು ಎಲ್ಲರಿಗೂ ಮಾದರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಎಂಎ ರೆಡ್ಡೇರವರು ಮಾತನಾಡಿದರು. ವಿಶ್ರಾಂತ ಉಪ ನಿರ್ದೇಶಕರಾದ ಐಬಿ ಬೆನಕೊಪ, ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿ ವಿವಿ ಸಾಲಿಮಠ ಮುಂಡರಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‍ಎಂ ಪಡ್ನೇಶಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರೆವಾಡಿ ಮಠದ ಮಳೆ ಮಲ್ಲಿಕಾರ್ಜುನ ಶ್ರೀಗಳು, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಸಣ್ಣ ಬೆಟಿಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ. ಎಸ್. ಹರಲಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈಶ್ವರ್ ಮೆಡ್ಲೇರಿ, ಉಪನ್ಯಾಸಕ ಮಂಜುನಾಥ ಕೊಕ್ಕರಗುಂದಿ, ಉಮೇಶ ನೇಕಾರ, ಸತೀಶ ಬೊಮಲೆ ಸೇರಿದಂತೆ ಅನೇಕರಿದ್ದರು. ಶಿಕ್ಷಕರಾದ ಚಂದ್ರು ನೇಕಾರ, ನಾಗರಾಜ ಶಿಗ್ಲಿ ನಿರ್ವಹಿಸಿದರು. ನಂತರ ಶಿಕ್ಷಕ ರಾಜು ರಜಪೂತ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.