ನಾಯಕತ್ವ ತರಬೇತಿ ಶಿಬಿರ
ಗದಗ,ಜು1: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟೀಯ ಸೇವಾ ಯೋಜನೆ ಕೋಶವು ವಿಶ್ವವಿದ್ಯಾಲಯದ ಗಾಂಧೀ ಭವನದಲ್ಲಿ ಏರ್ಪಡಿಸಿದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರದಲ್ಲಿ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕ ಕುಮಾರ ಮಾರುತಿ ಜಂಥ್ಲಿ ಭಾಗವಹಿಸಿದ್ದನು.
ಶಿಬಿರದಲ್ಲಿ ಸ್ವಯಂ ಸೇವಕರನ್ನು ಕೆಲವು ತಂಡಗಳಲ್ಲಿ ವಿಂಗಡಿಸಿ ಅವರಿಗೆ ಹಲವು ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿದ್ದರು. ಮಾರುತಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮದ ನೇತೃತ್ವವನ್ನು ವಹಿಸಲಾಗಿತ್ತು ಈತನು ತನ್ನ ತಂಡದೊಂದಿಗೆ ವಿಶ್ವವಿದ್ಯಾಲಯದ ಆವರಣದಲ್ಲಿ ನೂರಾರು ಸಸಿಗಳನ್ನು ನೆಟ್ಟು ಶಿಬಿರಾಧಿಕಾರಿಗಳ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಈತನನ್ನು ಕಾಲೇಜಿನ ಸಿಡಿಸಿ ಪದಾಧಿಕಾರಿಗಳು, ಪ್ರಾಂಶುಪಾಲರು, ಸಿಬ್ಬಂದಿಗಳು ಮತ್ತು ಎನ್.ಎಸ್.ಎಸ್. ಘಟಕದ ಸಂಯೋಜಕ ಡಾ. ಅಪ್ಪಣ್ಣ ಹಂಜೆ ಅವರು ಅಭಿನಂದಿಸಿದರು.