ಜಿಲ್ಲಾಧಿಕಾರಿ ನಿವಾಸದಲ್ಲಿ ಹಾವು ಪ್ರತ್ಯಕ್ಷ
ಕಲಬುರಗಿ,ಜು.1-ನಗರದ ಜಗತ್ ವೃತ್ತ ಸಮೀಪದಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಾವು ಕಾಣಿಸಿಕೊಂಡಿದೆ.
ಹಾವು ಕಂಡು ಗಾಬರಿಯಾದ ಅಲ್ಲಿನ ಸಿಬ್ಬಂದಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಉರಗ ರಕ್ಷಕರಾದ ಸ್ನೇಕ್ ಪ್ರಶಾಂತ್ ಅವರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದು ನಿರ್ಜನ ಪ್ರದೇಶಕ್ಕೊಯ್ದು ಬಿಟ್ಟಿದ್ದಾರೆ.
“ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಹಾವನ್ನು ಹಿಡಿದು ರಕ್ಷಣೆ ಮಾಡಿ ನಿರ್ಜನ ಪ್ರದೇಶಕ್ಕೊಯ್ದು ಬಿಡಲಾಗಿದೆ. 7 ಅಡಿ ಉದ್ದದ ರ್ಯಾಟ್ ಸ್ನೇಕ್ ಪತ್ತೆಯಾಗಿದ್ದು, ಅದನ್ನು ಹಿಡಿದು ನಿರ್ಜನ ಪ್ರದೇಶದಲ್ಲಿ ಬಿಡಲಾಗಿದೆ” ಎಂದು ಸ್ನೇಕ್ ಪ್ರಶಾಂತ್ ತಿಳಿಸಿದರು.
ಎಲ್ಲಿಯಾದರು ಹಾವು ಕಾಣಿಸಿಕೊಂಡಲ್ಲಿ ಸಾರ್ವಜನಿಕರು ಸ್ನೇಕ್ ಪ್ರಶಾಂತ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಅವರ ಮೊಬೈಲ್ ನಂಬರ್: 7411431430, 7411431414.