ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿ‌ ಕೊಡುಗೆ ಮಹತ್ವದ್ದು: ಡಾ.ಕರಿಯಪ್ಪ ಮಾಳಿಗಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.01: ಕನ್ನಡದ ಮೊದಲ‌ ಪತ್ರಿಕೆ ಮಂಗಳೂರು ಸಮಾಚಾರ ಮುದ್ರಣಗೊಳ್ಳುತ್ತಿದ್ದು ಬಳ್ಳಾರಿಯಲ್ಲಿ ಹಾಗಾಗಿ ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿ‌ ಕೊಡುಗೆ ಮಹತ್ವದ್ದು ಎಂದು ಚಿತ್ರದುರ್ಗದ ಉಪನ್ಯಾಸಕ ಡಾ.ಕರಿಯಪ್ಪ‌ ಮಾಳಿಗಿ ಹೇಳಿದ್ದಾರೆ.
ಅವರು ಇಂದು ನಗರದ ಬಿಡಿಎಎ ಸಭಾಂಗಣದಲ್ಲಿ ಜೋಳದರಾಶಿಯ ತಿಮ್ಮಪ್ಪ ಫೌಂಡೇಷನ್ ಹಾಗು ಬಳ್ಳಾರಿಯ ಪತ್ರಿಕಾ ಗೆಳೆಯರು ಆಯೋಜಿಸಿದ್ದ
ಪತ್ರಿಕಾ ದಿನಾಚರಣೆ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿ  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡುತ್ತಿದ್ದರು.
ಕನ್ನಡ ಪತ್ರಿಕೋದ್ಯಮದ ಇತಿಹಾಸ ತಿಳಿಸಿ‌ ಇಂದು ಇಂತಹ ಮಾಧ್ಯಮ, ಇಂತಹ ಪಕ್ಷದ್ದು ಎಂಬ ಮಾತುಗಳು ಕೇಳಿಬರುತ್ತಿದೆ. ಇದು ಸಮಾಜಕ್ಕೆ ಧಕ್ಕೆ ತರುವಂತಹುದು. ಅದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಉತ್ತಮ ಸಮಾಜ ಕಟ್ಟಲು ಸಮಾನತೆಯಿಂದ, ಸ್ಪಷ್ಟ ವರದಿಗಳ‌ ಮೂಲಕ ಸಮಾದ ಕನ್ನಡಿಯಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ, ದಿನ ನಿತ್ಯ ಪತ್ರಿಕೆ ಓದಿದವರು‌ ಮಾತ್ರ  ಎಂತಹುದೇ ಸಾಮಾನ್ಯ ಪರೀಕ್ಷೆಗಳನ್ನು ಎದಿರಿಸುವ ಬುದ್ದಿಮತ್ತೆ ಪಡೆಯಬಲ್ಲರು ಎಂದರು ಪತ್ರಿಕೆಯನ್ನು ಓದುದುವುದು ನಿರಂತರವಾಗಿರಬೇಕು ಏಕೆಂದರೆ,  ಸಮಾಜದ ಆಗು ಹೋಗುಗಳನ್ನು ಅರಿಯದಿದ್ದರೆ ಇಂದಿನ ಸ್ಪರ್ಧಾ ಯುಗದಲ್ಲಿ ನಾವು ನಮ್ಮ ಬದುಕು ರೂಪಿಸಿಕೊಳ್ಳಲು ಆಗದು ಎಂದರು. 
ಚಿತ್ರದುರ್ಗದ ಪತ್ರಕರ್ತ  ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, ವರದಿಗಾರರಾದವರು ಕೇವಲ ರಾಜಕೀಯ ಸೇರಿದಂತೆ ದಿನ‌ನಿತ್ಯದ ವಿಷಯಗಳ ವರದಿಗಾರಿಕೆಗೆ ಸೀಮಿತವಾಗದೆ ಅಭಿವೃದ್ಧಿ ಕುರಿತಾದ ವರದಿಗಳ ಬಗ್ಗೆ ಹೆಚ್ಚು ಹೆಚ್ಚು ಒತ್ತುಕೊಡಬೇಕು ಎಂದರು,
ಶಿವಮೊಗ್ಗದ ಪತ್ರಕರ್ತ ಮಾರ್ಕ್ಸ್ ತೇಜಶ್ವಿ ಮಾತನಾಡಿ, ಸಮಾಜಿಕ ಜಾಲತಾಣದಲ್ಲಿ ಹರಿದಾಡುವ ಫೇಕ್ ನ್ಯುಸ್ ಗಳ ಬಗ್ಗೆ ಮಹತ್ವ ನೀಡಬೇಕಿಲ್ಲ, ಮಹತ್ವದ ವಿಷಯಗಳು ಬಂದಾಗ ಫ್ಯಾಕ್ಟ್ ಚೆಕ್ ಮಾಡಿ ಎಂದರು. 
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು.
ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ‌ದರು.
ಮಾಧ್ಯಮ‌ ಕ್ಷೇತ್ರದಲ್ಲಿ ವರದಿಗಾರರು, ಛಾಯಾಗ್ರಾಹಕರು ಮತ್ತು ವಿಡಿಯೋ ಜರ್ನಲಿಸ್ಟ್ ಅವರನ್ನು ಸನ್ನಾನಿಸಿ ಗೌರವಿಸಲಾಯ್ತು. ಬಳಿಕ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯ್ತು. 
ಪತ್ರಕರ್ತ ಬಳ್ಳಾರಿಯ ಎಂ.ಅಹಿರಾಜ್, ಹೊನಕೆರೆ ನಂಜುಂಡೇಗೌಡ, ಡಿಡಿಪಿಐ ಉಮಾದೇವಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಜೆಟಿ ಫೌಂಡೇಷನ್ ನ ತಿಮ್ಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಾಹಿರಾತು ವಿಭಾಗದ ವ್ಯವಸ್ಥಾಪಕ ನಾಗಿದ್ದ ನಾನು ಈಗ ಹೊರಗಿದ್ದು ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳುವುದು ಸೂಕ್ತ ಎಂದು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಈ ಸಮಾರಂಭ ಹಮ್ಮಿಕೊಂಡಿದ್ದಾಗಿ ಹೇಳಿದರು.
ಪತ್ರಕರ್ತ ಶಶಿಧರ ಮೇಟಿ ಆಶಯ ನುಡಿ ನುಡಿದರು.