ಜೆಜೆಎಮ್ ಕಾಮಗಾರಿಯಿಂದ ಸಾರ್ವಜನಿಕರಿಗೆನಿತ್ಯ ತೊಂದರೆ: ಕಲ್ಯಾಣಿ ಮಂಗಾ
ಸೇಡಂ, ಜು,01: ಗ್ರಾಮದಲ್ಲಿ ಸುಮಾರು ದಿನಗಳಿಂದ ಜೆಜೆಎಮ್ ಕಾಮಗಾರಿ (ಪೈಪ್ ಲೈನ್ ಅಳವಡಿಸುವ ನಿಟ್ಟಿನಲ್ಲಿ) ಆರಂಭಿಸಲಾಗಿದು ರಸ್ತೆಯ ಮಧ್ಯದಲ್ಲಿ ಸರಿಯಾಗಿ ಕೊರೆಯದೆ ಇರುವುದರಿಂದ ಇತ್ತ ಚರಂಡಿ ಅತ್ತ ಜೆಜೆಎಮ್ ಕಾಮಗಾರಿಯಿಂದ ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ ಕಲ್ಯಾಣಿ ಮಂಗಾ ಆರೋಪ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಎರಡು ತಿಂಗಳಿಂದ ಕೆಲಸ ಮಾಡುತ್ತಿದ್ದು ಆದರೂ ಕೂಡ ಇನ್ನುವರೆಗೂ ಮುಗಿಯದ ಕೆಲಸ ತೆಗ್ಗು ಗುಂಡಿಗಳನ್ನು ಮುಚ್ಚಿಲ್ಲ ಇದರಿಂದ ಬಹಳಷ್ಟು ಜನರು ಗುಂಡಿ ಒಳಗೆ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ ಮತ್ತು ಕಾಲು ಕೈಗಳು ಮುರಿದುಕೊಳ್ಳುವ ಸಂಭವವಿದ್ದು ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿ ಬಹು ಬೇಗ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ.