ವಯೋನಿವೃತ್ತಿ : ಚಂದ್ರಕಾಂತ ಬಿರಾದಾರಗೆ ಸತ್ಕಾರ
ಕಲಬುರಗಿ : ಜು.1:ಸರ್ಕಾರಿ ಪ್ರೌಢಶಾಲೆ ಮಹಾಗಾಂವನಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ಚಂದ್ರಕಾಂತ ಬಿರಾದಾರ ಅವರಿಗೆ ಕಲಬುರಗಿ ನಗರದ ಆಳಂದ ರಸ್ತೆಯ ‘ಶಿವಾ ಟ್ಯುಟೋರಿಯಲ್ಸ್’ನಲ್ಲಿ ‘ಆಳಂದ ರಸ್ತೆ ಗೆಳೆಯರ ಬಳಗ’ದ ವತಿಯಿಂದ ಭಾನುವಾರ ಸಂಜೆ ಸತ್ಕರಿಸಿ, ಅಭಿನಂದಿಸಿ, ಶುಭಾಶಯ ಕೋರಲಾಯಿತು.
ಕೆ.ಬಸವರಾಜ, ಎಚ್. ಬಿ.ಪಾಟೀಲ, ಚಂದ್ರಶೇಖರ ಪಾಟೀಲ, ಪ್ರಭುಲಿಂಗ ಮುಲಗೆ, ಸಂಜೀವಕುಮಾರ ಪಾಟೀಲ, ಅನೀಲ ಧೋತ್ರೆ, ಶಿವಲಿಂಗಪ್ಪ ಮೂಲೆಗೆ, ಶಿವಲಿಂಗಪ್ಪ ಕೋಡ್ಲಿ, ಶ್ರೀಪಾಲ ಭೋಗಾರ, ರವಿಕುಮಾರ ಹೂಗಾರ, ದಿಲೀಪ ಚೌಹಾಣ್, ಠಾಕ್ರು ಚೌಹಾಣ, ಲಿಂಗಯ್ಯ ಸ್ಥಾವರಮಠ್, ಶ್ರೀಶೈಲ ನಾಗಶೇಟ್ಟಿ, ರೇಣುಕಾಚಾರ್ಯ ಸ್ಥಾವರಮಠ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.