ಆಚಾರ್ಯ ಪಾಠಶಾಲೆಯಲ್ಲಿ ಸಮ್ಮಿಲನ ಕಾರ್ಯಕ್ರಮ
ಬೆಂಗಳೂರು, ಜು೧- ಎಪಿಎಸ್ ಶೈಕ್ಷಣಿಕ ಟ್ರಸ್ಟ್ ನ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಯ ಉತ್ಸಾಹಭರಿತ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಎ.ವಿಷ್ಣು ಭರತ್ ಆಲಂಪಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮೂಡಿಬಂತು. ಸ್ವಚ್ಛ ಮತ್ತು ಸುಂದರ ಮಳಿಗೆಗಳಲ್ಲಿ ರೋಮಾಂಚಕ ಆಟಗಳು, ಸಮ್ಮೋಹನಗೊಳಿಸುವ ಸಂಗೀತ, ಆಕರ್ಷಕ ನೃತ್ಯ ಪ್ರದರ್ಶನಗಳು, ಮನಸೂರೆಗೊಳ್ಳುವ ನಾಟಕಗಳು ಮತ್ತು ರುಚಿಕರವಾದ ತಿಂಡಿ ? ತಿನಿಸುಗಳು ಗಮನ ಸೆಳೆದವು. ಅತ್ಯಾಕರ್ಷಕ ಅದೃಷ್ಟದ ಲಾಟರಿ ಡ್ರಾಗಳಲ್ಲಿ ಬಹುಮಾನ ಗೆದ್ದು ಬೀಗಿದರು.