ಬಿಜೆಪಿ ಯಿಂದ ದೇವೇಂದ್ರಪ್ಪ ಸ್ಪರ್ಧೆ ಖಚಿತ
ಅರಳಿಕುಮಾರಸ್ವಾಮಿ,
ಸಂಡೂರು: ಜು: 1:  ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸ್ಪರ್ಧೆಯ ಕುರಿತು ಕುತೂಹಲದ ಚರ್ಚೆ ತೀವ್ರವಾಗಿ ನಡೆಯುತ್ತಿದೆ. ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಎಸ್.ಟಿ. ಮೀಸಲಾತಿ ಇದ್ದು ಕಾಂಗ್ರೇಸ್ ಮತ್ತು ಬಿಜೆಪಿ ಪಟ್ಟಿ ವಿಪರೀತವಾಗಿ ಹೆಚ್ಚಳವಾಗುತ್ತಿದ್ದು ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಪಕ್ಷ ಭದ್ರಕೋಟೆಯಾದರೂ, ಬಿಜೆಪಿ ಪಕ್ಷದ ಟಿಕೇಟ್‍ಗಾಗಿ ವಿಪರೀತವಾಗಿ ಬೇಡಿಕೆ ಇದೆ. ಎರಡೂ ಪಕ್ಷಗಳಲ್ಲೂ ಪ್ರತಿನಿತ್ಯವೂ ಹೊಸ ಹೆಸರುಗಳು ಉದಯಗೊಳ್ಳುತ್ತಲೆ ಇವೆ. ಬಳ್ಳಾರಿಯ ಮಾಜಿ ಲೋಕಸಭಾ ಸದಸ್ಯ ವೈ.ದೇವೇಂದ್ರಪ್ಪನವರನ್ನು ಕಣಕ್ಕಿಳಿಸಲು ಬಿಜೆಪಿ ರಾಜ್ಯ ಸಮಿತಿ ನಿರ್ಧರಿಸಿದ್ದು ನೀವು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಗಬೇಕು ಎನ್ನುವ ಸೂಚನೆಯನ್ನು ಬಿಜೆಪಿ ಯ ಉನ್ನತಮೂಲಗಳು ತಿಳಿಸಿದರೆ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿ ಕೆ.ಎಸ್. ದಿವಾಕರರವರು ನವೆಂಬರ್ 1 ರಂದು ಮ್ಯಾರಾಥಾನ್ ಓಟದ ಸ್ಪರ್ಧೆ ಬೊಮ್ಮಘಟ್ಟದಲ್ಲಿ ಸಾಮೂಹಿಕ ವಿವಾಹ, ಫೆಬ್ರವರಿಯಲ್ಲಿ ಕ್ರೀಕೇಟ್, ಕಬ್ಬಡ್ಡಿ, ವಾಲಿಬಾಲ್ ಹೀಗೆ ಹಲವಾರು ಕ್ರೀಡೆಗಳ ಪ್ರಾಯೋಜಕತ್ವವನ್ನು ಹೋಂದಿ ಮತದಾರರನ್ನು ಆಕರ್ಷಿಸುತ್ತಿದ್ದಾರೆ.
ಮತ್ತೊಂದು ವಿಚಾರವೇನೆಂದರೆ ಕಾಂಗ್ರೇಸ್‍ನಲ್ಲಿ ಹಾಲಿ ಸಂಸದ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕರಾಂ ಅವರು ಕುಟುಂಬದವರಿಗೆ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ ಪಕ್ಷವನ್ನು ಒಂದೇ ಕುಟುಂಬಕ್ಕೆ ಮೀಸಲು ಮಾಡಿದಂತೆ ಆಗುತ್ತದೆ ಅಲ್ಲದೆ ಹೊಸಬರನ್ನು ಬೆಳೆಸಲು ಅವಕಾಶ ಇಲ್ಲದಂತೆ ಅಗುತ್ತದೆ. ಕಾರಣ ಹೊಸಬರನ್ನು ಹುಡುಕಿ ಸ್ಪರ್ಧೆಗೆ ಅವಕಾಶ ನೀಡಬೇಕು ಎನ್ನುವ ಚಿಂತನೆ ನಡೆದಿರುವುದೇನೋ ನಿಜ. ಈ ವಿಚಾರವನ್ನು ಸಂಸದರ ಬಳಿ ಅಗಲಿ ಸಚಿವ ಸಂತೋಷ್ ಲಾಡ್ ರವರ ಬಳಿಯಾಗಲಿ ಹೇಳುವ ಧೈರ್ಯ ಯಾರಿಗೂ ಇಲ್ಲ. ಬೆಕ್ಕಿಗೆ ಗಂಟೆಕಟ್ಟುವವರು ಯಾರು? ಎನ್ನುವ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಅಭ್ಯರ್ಥಿಗಳಲ್ಲಿ ಮೂಡಿಬಂದು ಹೇಳುವ ಧೈರ್ಯ ಯಾರಿಗಿಲ್ಲದಂತಾಗಿದೆ. ಮತ್ತೊಂದು ವಿಚಾರ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡ ಶ್ರೀ ರಾಮುಲು ಅವರು ತಮ್ಮ ಮಗನನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಟಿಕೇಟ್‍ಗಾಗಿ ಹೊಸದಾಳವನ್ನು ಉರುಳಿಸಿದ್ದಾರೆ ಎನ್ನುವ ಚಿಂತನೆ ನಡೆದಿದೆ.
ಮೂರನೆ ವಿಚಾರವೇನೆಂದರೆ ಜಮೀರ್ ಅಹ್ಮದ್ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರಣ ಕಾಂಗ್ರೇಸ್‍ನ ಸಂಪ್ರದಾಯಿಕ ಮತಗಳಾದ ದಲಿತರು, ಮುಸ್ಲಿಂರು, ಲಂಬಾಣಿಗಳು ಕಾರ್ಯಕರ್ತರ ಮತಗಳ ಜೊತೆಯಲ್ಲಿ ಗೆಲ್ಲುವುದು ಸುಲಭವಾಗಿರುವ ಕಾರಣ ಕಾಂಗ್ರೇಸ್ ಪಕ್ಷದ ಅಶೀರ್ವಾದದ ಪ್ರಭಾವ ಇರುವದುರಿಂದ ತೋರಣಗಲ್ಲು ನಿವಾಸಿ ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರು ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಟಿಕೇಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ. ಇತ್ತ ಸಂಸದರಾಗಿ ಈ.ತುಕರಾಂ ಅವರು ಆಯ್ಕೆಯಾಗುತ್ತಿದ್ದಂತೆ ಧರ್ಮಪತ್ನಿ ಅನ್ನಪೂರ್ಣಮ್ಮನವರನ್ನು, ಪುತ್ರಿ ಚೈತನ್ಯು, ( ಸೌಪರ್ಣಿಕ) ಕಣಕ್ಕಿಳಿಸುವ ಚಿಂತನೆ ಕಾಂಗ್ರೇಸಿಗರಲ್ಲಿ ತೀವ್ರ ಚರ್ಚೆಯಾಗುತ್ತಿದ್ದು ಅಭ್ಯರ್ಥಿಯ ಹುಡುಕಾಟಕ್ಕೂ ರಹಸ್ಯ ಕಾರ್ಯಾಚರಣೆ ನಡೆದಿದೆ. ಆದರೆ ಸಚಿವ ಸಂತೋಷ್ ಲಾಡ್ ಸೂಚಿಸುವ ಹೆಸರು ಅಂತಿಮಗೊಳಿಸಲು ಪಕ್ಷದ ಹೈಕಮಾಂಡ ಚಿಂತನೆ ನಡೆಸಿದೆ. ಒಟ್ಟಾರೆಯಾಗಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಚವರು ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸುವವರೆಗೂ ಸ್ಪರ್ಧೆ ಮಾಡುವವರ ಸಂಖ್ಯೆ ಬೆಳೆಯುತ್ತಲೇ ಇರುತ್ತದೆ ಎನ್ನುವುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.