ವಿದ್ಯಾರ್ಥಿಗಳಿಗೆ ಯೋಗ ಪ್ರಮಾಣ ಪತ್ರ ವಿತರಣೆ
ಸಂಜೆವಾಣಿ ವಾರ್ತೆ
ಸಂಡೂರು:ಜು: 1:  ಆರೋಗ್ಯ, ಶಿಕ್ಷಣ ಪ್ರತಿಯೋರ್ವರೂ ಈ ಎರಡೂ ಕಡೆ ಗಮನ ನೀಡಿ ನಂತರ ಶಿಸ್ತು ಸಂಪತ್ತು ತಾನಾಗಯೇ ಬರುತ್ತದೆ ಸದೃಢ ಕಾಯರಾಗಲು ಗುಟ್ಕಾ, ಮದ್ಯ ಇವುಗಳ ದುಶ್ಚಟದಿಂದ ದಊರವಿರಬೇಕಾಗಿದ್ದು ಇವುಗಳಿಂದ ದೂರವಿರಬೇಕಾಗಿರಬೇಕದರೆ ಯೋಗ ಮುಖ್ಯ, ರೋಗ, ರುಜಿನ ಇವುಗಳನ್ನು ತೆಯಬೇಕಧರೆ ಯೋಗ ಮತ್ತು ಆದ್ಯಾತ್ಮ ಚಇಂತನೆ ಪ್ರತಿಯೋರ್ವರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ನಿರೋಗಿಗಳಾಗಿ ಬಾಳು ಯೋಗ ಬಹಳ ಮುಖ್ಯ, ಯೋಗ ಮಾಡುವುದರ ಜೊತೆಗೆ ನಿರೋಗಿಗಳಾಗಿ ಬಾಳಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ಉತ್ತಮ, ಯೋಗ ಒಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ಅರ್ಧಗಂಟೆಗಳ ಕಾಲ ಯೋಗಕ್ಕಾಗಿ ಮೀಸಲಿಡುವುದು ಅವಶ್ಯವಾಗಿದ್ದು ಯೋಗ ಮಾಡುವುದುರಿಂದ ಉತ್ತಮ ಬೆಳವಣಿಗೆ ಸಾಧ್ಯ ಎಂದು ಎಸ್.ಇ.ಎಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ|| ಜಗದೀಶ್ ಬಸಾಪುರರವರು  ತಿಳಿಸಿದರು.
ಎಸ್.ಇ.ಎಸ್ ವಿದ್ಯಾಮಂದಿರ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ಅಂತರಾಷ್ಟ್ರೀಯ ಯೋಗ ಶಿಬಿರದ ಸಮರೋಪ ಸಮಾರಂಭ ಯೋಗ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು. ಅವರು ಮುಂದುವರೆದು ರಾಜಯೋಗ, ಹಠಯೋಗ, ಪ್ರಾಣಯಾಮ, ಧ್ಯಾನ ಸೂರ್ಯನಮಸ್ಕಾರ ಸಿದ್ದಿಯೋಗ, ಯೋಗಗಳಲ್ಲಿ ಹಲವಾರು ಯೋಗಗಳಿವೆ, ನಾವು ಪರಾಣಯಾಮ, ಧ್ಯಾನ ಇವುಗಳಿಗೆ ಮಾತ್ರ ಹೆಚ್ಚಿನ ಅದ್ಯತೆ ನೀಡುತ್ತೇವೆ. ಅದರೆ ಸೂರ್ಯನಮಸ್ಕಾರಕ್ಕೂ ಹೆಚ್ಚಿನ ಪ್ರಧಾನತೆ ನೀಡುವುದು ಅವಶ್ಯ, ಶಿವನಿಗೆ ಹಾಲಿನ ಅಭಿಷೇಕ ಎಷ್ಟು ಪ್ರಾಮುಖ್ಯತೆಯೋ ಹಾಗೆ ಸೂರ್ಯನಮಸ್ಕಾರ ಪ್ರಿಯ ಯೋಗ ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾಋ ಅಷ್ಠೆ ಮುಖ್ಯ ಸೂರ್ಯನಮಸ್ಕಾರಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂದು ವಿದ್ಯರ್ಥಿಗಳಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಯೋಗ ತರಬೇತಿದಾರ ಶ್ರೀನಿವಾಸ ತುಮಟಿಯವರು ಉತ್ತಮ ಜೀವನಕ್ಕೆ ಯೋಗ ತರಬೇತಿ ಅವಶ್ಯಕ ಎಂದು ಹಾಗೂ ಯೋಗ ಮಾಡಿ ನಿರೋಗಿಯಾಗಿ ಎಂದು ಯೋಗದ ಮಹತ್ವವನ್ನು ತಿಳಿಸಿದರು.ಅವಿನಾಶ್ ಕುಮಾರ್ ತ್ಯಾಗಿ. ಪ್ರಸ್ತುತ ಎಸ್.ಆರ್.ಎಸ್ ಪ್ರಾಂಶುಪಾಲಅತಿಥಿಗಳಾಗಿ ಅಗಮಿಸಿದ್ದರು.