ಉತ್ತಮ ಸೇವೆಗೆ ಸಮುದಾಯದ ಸಹಕಾರ ಅತಿ ಮುಖ್ಯ
ಸೈದಾಪುರ:ಜು.1:ಉತ್ತಮ ಸೇವೆಗೆ ಸಮೂದಾಯದ ಸಹಕಾರ ಅತಿ ಮುಖ್ಯವಾಗಿದೆ. ನನ್ನ ಸೇವಾ ಅವಧಿಯಲ್ಲಿ ಇದನ್ನು ಕಂಡು ಕೊಂಡಿದ್ದೇನೆ ಎಂದು ಅಂಗನವಾಡಿ ಮೇಲ್ವಿಚಾರಕಿ ಸರಸ್ವತಿ ಅನಂತರಾವ ದೇಸಾಯಿ ಅಭಿಪ್ರಾಯಪಟ್ಟರು.
ಸಮೀಪದ ಕೊಂಡಾಪುರ ಅಂಗನವಾಡಿ ಕೇಂದ್ರದಲ್ಲಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳ ಹಾಗೂ ಮಹಿಳೆಯರ ಹಾರೈಕೆಯಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ದಿಸೆಯಲ್ಲಿ ನಾನು ಹೆಚ್ಚಿನ ಜನರನ್ನು ಗುರುತಿಸಿಕೊಳ್ಳುವಂತಾಯಿತು. ಇಂದು ತಾವು ತೋರಿಸಿದ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತರಾದ ರಮಾ ನರಸಿಂಹರಾವ, ಶಶಿಕಲಾ, ಕುಸುಮಾವತಿ, ಶಾಂತವೀರಮ್ಮ, ಉಮಾದೇವಿ, ನಿರ್ಮಲಾ, ರೇಣುಕಾ, ಶಿಲ್ಪಾ, ಐಶ್ವರ್ಯ, ಸರಸ್ವತಿ, ಬೂದೇಮ್ಮ ಸೇರಿದಂತೆ ಇತರರಿದ್ದರು.