ಪರಿಸರದ ಪ್ರೇಮ ಕಾಳಜಿ ಸರ್ವರಲ್ಲಿ ಬರಬೇಕಾಗಿದೆ- ಪ್ರಭುಮಹಾಸ್ವಾಮಿಗಳು
ಸಂಜೆವಾಣಿ ವಾರ್ತೆ
ಸಂಡೂರು:ಜೂ: 1:  ಸೋವೆನಹಳ್ಳಿ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಪ್ರೌಢಶಾಲಾ ಅವರಣದಲ್ಲಿ ಶ್ರೀ ರಾಮಶೆಟ್ಟಿ ಇವರಿಗೆ ನಿವೃತ್ತಿಯ ಸಂದರ್ಭದಲ್ಲಿ ಅವರನ್ನು ಬೀಳ್ಕೊಡಿಗೆ ಸಮಾರಂಭದ ನಂತರ ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ಮತ್ತು ಪರಮಪೂಜ್ಯ ಶ್ರೀ ಚ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಹಸ್ತದಿಂದ ಎರಡುನೂರಾ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಭಯಸ್ವಾಮಿಗಳು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪರಿಸರದ ಬಗ್ಗೆ ಕಾಳಜಿ ಇರುವ ವೃಂದ ಗುಂಪು, ವಾಸವಿ ಪೌಂಡೇಷನ್ ಹಾಗೂ ವಿಶ್ವವಿನೂತನ ಸೇವಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಪರಿಸರದ ಅಭಿವೃದ್ದಿಯ ಬಗ್ಗೆ ಕಾಳಜಿವಹಿಸಿರುವುದು ಶ್ಲಾಘನೀಯ ಪರಿಸರ ಪ್ರೇಮ ಕಾಳಜಿ ಬರಬೇಕಾಗಿದೆ ಎಂದು ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಸಂಘ ಸಂಸ್ಥೆ ಪದಾಧಿಕಾರಿಗಳು ಸ್ಥಳೀಯ ಸಂಸ್ಥೆ ಮುಖಂಡರು ನಿವೃತ್ತರಾದ ಶಿಕ್ಷಕ ಶ್ರೀ ರಾಮಶೆಟ್ರುರವರ ಕುಟುಂಬ ಉಪಸ್ಥಿತರಿದ್ದರು.