ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ
ಸೈದಾಪುರ:ಜು.1:ಪಟ್ಟಣದ ವನಮಿತ್ರ ತಂಡದ ಸದಸ್ಯರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರೈಲು ನಿಲ್ದಾಣದಿಂದ ನಡೆದುಕೊಂಡು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟುಗಳಿಗೆ, ಮನೆಗಳಿಗೆ ತೆರಳಿ 1000 ಸಸಿಗಳನ್ನು ಸಾರ್ವಜನಿಕರಿಗೆ ಹಂಚಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಆದ್ದರಿಂದ ಮನುಷ್ಯ ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿರುವುದು ವಿನಾಶದತ್ತ ನಾವು ಸಾಗುತ್ತಿದ್ದೇವೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಪರಿಸರದ ಬಗ್ಗೆ ಜಾಗೃತರಾಗಿ ಗಿಡ ಮರಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕು. ಇದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಪ್ರೇಮಿಗಳು ಹಾಗೂ ತಂಡದ ಸದಸ್ಯರಾದ ನಾಗರಾಜ ಸಂಗೀತ ಗ್ಯಾಲಕ್ಸಿ, ಶಶಿಧರ ಹಿರೇಮಠ, ಶಶಿಧರ ಪಾಟೀಲ್ ಸೈದಾಪುರ, ಪರಮೇಶ ವಾರಾದ, ಆನಂದ ವಾರಾದ, ವಿಟ್ಟೋಬ ಪಾಲಾದಿ, ಪ್ರಭು ಗೂಗಲ್, ವಿಜಯ ಕಂದಳ್ಳಿ, ಗುರುರಾಜ ವಿಶ್ವಕರ್ಮ, ಬಸ್ಸು ಕಲಾಲ್ ಕೂಡ್ಲೂರು, ರಾಜೇಶ ದೇವರಶೆಟ್ಟಿ, ಆಂಜನೇಯ ಸೈದಾಪುರ, ಹಣಮಂತರಾಯ ನಾಯಕ, ಭೀಮಣ್ಣ ಮಡಿವಾಳಕರ, ನಾಗರಾಜ ವಡವಟ್, ನಾಗರೆಡ್ಡಿ ಕಲಾಲ್ ಹೆಗ್ಗಣಗೇರಾ, ಸಂದೀಪ ಗುಂಡಾಲ್ ಸೇರಿದಂತೆ ಇತರರಿದ್ದರು.