ಮಹನೀಯರ ತತ್ವ, ಆದರ್ಶ ಮುಂದಿನ ಪಿಳೀಗೆಗೂ ತಿಳಿಸೋಣ
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಮಹನೀಯರ ಜಯಂತಿಗಳನ್ನು ಕೇವಲ ರಜಾ ದಿನಕ್ಕಾಗಿ ಮಾತ್ರ ಆಚರಣೆ ಮಾಡದೆ, ಅವರುಗಳ ತತ್ವ, ಸಿದ್ಧಾಂತ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಯೊಂದಿಗೆ ಆಚರಿಸಬೇಕಿದೆ ಎಂದು ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್ ಗೌಡ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಸರ್ಕಾರಿ ಮುದ್ರಣಾಲಯದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಗರದ ನಿರ್ಮಾತೃವಾಗಿದ್ದು, ವೈಜ್ಞಾನಿಕ ನೆಲೆಗಟ್ಟಿನಿಂದ ಬೆಂಗಳೂರನ್ನು ನಿರ್ಮಿಸಿದ್ದಾರೆ. ಆ ಕಾರಣಕ್ಕಾಗಿ ಬೆಂಗಳೂರು ಯೋಗ್ಯ ನಗರಗಳ ಪೈಕಿ ಪ್ರಮುಖ ಸ್ಥಾನದಲ್ಲಿದ್ದು, ಭಾರತದ ಬೃಹತ್ ಮಹಾನಗರಗಳ ಪೈಕಿ ಬೆಂಗಳೂರನ್ನು ಸ್ಥಳೀಯ ರಾಜರು ನಿರ್ಮಿಸಿದ್ದರೆ.
ಉಳಿದ ನಗರಗಳೆಲ್ಲಾ ಬ್ರಿಟಿಷರು, ಡಚ್ಚರು, ಪೆÇೀರ್ಚುಗೀಸರ ವಸಹಾತುಗಳಾಗಿ ಉಗಮವಾದ ನಗರಗಳಾಗಿವೆ ಎಂದ ಅವರು, ಮಹನೀಯರ ಜಯಂತಿಗಳ ಆಚರಣೆಯ ಉದ್ದೇಶ ಕೇವಲ ರಜಾ ದಿನಕ್ಕಾಗಿ ಮಾತ್ರ ಆಚರಿಸದೆ, ಮಹನೀಯರ ತತ್ವ, ಸಿದ್ಧಾಂತ, ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದರ ಹೊಣೆಯಿಂದ ಆಚರಿಸಬೇಕಿದೆ. ಈ ನಿಟ್ಟಿನಲ್ಲಿ ಮುದ್ರಣಾಲಯ ಸಂಸ್ಥೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರೀಸ್ವಾಮಿ, ನಿರ್ದೇಶಕ ಎ. ರವಿ, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಮುದ್ರಣಾಲಯದ ಉಪ ನಿರ್ದೇಶಕಿ ಜ್ಯೋತಿ, ಮುದ್ರಣಾಲಯದ ಸಿಬ್ಬಂದಿ ರಾಜು, ಅಶೋಕ್, ನಾಗರಾಜ, ಪುಟ್ಟರಾಜು, ಮಹೇಂದ್ರ, ಹರ್ಷವರ್ಧನ್ ಇತರರಿದ್ದರು.