ಯುನೈಟೆಡ್ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಸವಾಲು ನಡುವೆ ವೈದ್ಯರು- ಪತ್ರಕರ್ತರು ಕಾರ್ಯನಿರ್ವಹಣೆ
ಕಲಬುರಗಿ: ಜು.1:ಪತ್ರಕರ್ತರು ಹಾಗೂ ವೈದ್ಯರೂ ಸವಾಲು ಹಾಗೂ ಅನೇಕ ಒತ್ತಡಗಳ ನಡುವೆ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಲಬುರಗಿ ಮಹಾನಗರ ಪೆÇಲೀಸ್ ಆಯುಕ್ತ ಆರ್.ಚೇತನ ಹೇಳಿದರು.
ನಗರದ ಯುನೈಟೆಡ್ ಸುಪರ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಜತೆಗೆ ಪತ್ರಕರ್ತ ಮತ್ತು ಪತ್ರಕರ್ತ ಕುಟುಂಬ ವರ್ಗದವರಿಗೆ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರಿಗೆ ಇಂಟರನೆಟ್ ಹಾಗೂ ಇತರೆ ಸಹಾಯದಿಂದ ಬೇಗ ಸುದ್ದಿಯ ಮಾಹಿತಿ ಸಿಗಬಹುದು. ಆದರೆ ಇದರಕ್ಕಿಂತ ಮೊದಲು ಸೋಸಿಯಲ್ ಮೆಡಿಯಾದಲ್ಲಿ ಬರಬಹುದು. ಆದರೆ ಪತ್ರಕರ್ತರು ಸುದ್ದಿಯನ್ನು ಎಷ್ಟು ಸತ್ಯಾಂಶದಿಂದ ಕೂಡಿದೆ ಎಂಬುದನ್ನು ಎಲ್ಲ ಆಯಾಮ ಗಳಿಂದ ಪರಿಶೀಲಿಸಬೇಕಾಗಿದೆ. ಪತ್ರಿಕೆಯಲ್ಲಿ ಬಂದ ಸುದ್ದಿ ಯೇ ನಿಜಾಂಶ ಎಂದು ಓದುಗರಿಗೆ ಬಲವಾದ ವಿಶ್ವಾಸವಿರುತ್ತದೆ. ಹೀಗಾಗಿ ಪತ್ರಕರ್ತರು ಕಣ್ಣಲ್ಲಿ ಕಣ್ಣಿಟ್ಟು ಸವಾಲು ನಡುವೆ ಕಾರ್ಯನಿರ್ವಹಿಸಬೇಕಿದೆ. ಅದೇ ತೆರನಾಗಿ ವೈದ್ಯರು ಸಹ ಬರೆದುಕೊಡುವ ಮಾತ್ರೆಯನ್ನು ರೋಗಿಗಳು ಹತ್ತಾರು ಸಲ ಪರೀಕ್ಷೆ ಒಳಪಡಿಸುತ್ತಿರುವುದರ ಜತೆಗೆ ಇತರ ಆಯಾಮಗಳಲ್ಲಿ ಸೇವೆ ಪರಿಶೀಲಿಸುತ್ತಿರುವುದರಿಂದ ವೈದರ ಸೇವೆಯೂ ಸವಾಲಾಗಿದೆ ಎಂದು ಆಯುಕ್ತರು ವಿವರಣೆ ನೀಡಿದರು.
ಜುಲೈ 1 ವಿಶೇಷ ದಿನ. ವೈದ್ಯರ ಹಾಗೂ ಪತ್ರಕರ್ತರ ದಿನಾಚರಣೆ ಆಚರಿಸಲಾಗುತ್ತಿದೆ. ಒತ್ತಡದ ನಡುವೆ ಕೆಲಸ ನಿರ್ವಹಿಸಿ ಆರೋಗ್ಯ ದ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸದ ಹಿನ್ನೆಲೆಯಲ್ಲಿ ಪತ್ರಕರ್ತ ಹಾಗೂ ಪತ್ರಕರ್ತ ಕುಟುಂಬದವರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಪೆÇೀಲೀಸ್ ಆಯುಕ್ತರು ಶ್ಲಾಘಿಸಿದರು.
ಎಸ್.ಪಿ.ಅಕ್ಷಯ್ ಎಂ.ಹಾಕೆ, ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ಧಾರೆಡ್ಡಿ, ನಿರ್ದೇಶಕರಾದ ಡಾ.ವೀಣಾ ಸಿದ್ದಾರೆಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಮತ್ತಿತರರು ಇದ್ದರು.