ಕಾನಿಪದಿಂದ ಪವಿತ್ರಾಗೆ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.01: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿನ್ನೆ ಹಾವೇರಿ ನಗರದ ಶ್ರೀ ಗುರುಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ 2024 ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ  ಪತ್ರಕರ್ತ  ದಂಪತಿಗಳ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದ ಜಿ.ಎಂ.ಪವಿತ್ರಾಗೆ ಸನ್ಮಾನಿಸಿ ಗೌರವಿಸಿ ಪ್ರೋತ್ಸಾಹ ದನ ನೀಡಲಾಗಿದೆ.
ಎಮ್ಮಿಗನೂರು ಗ್ರಾಮದ  ಬಸಯ್ಯಸ್ವಾಮಿ  ಅವರ ಪುತ್ರಿ ಜಿ.ಎಂ.ಪವಿತ್ರ  ಎಸ್ ಎಸ್ ಎಲ್ ಸಿಯಲ್ಲಿ ಶೇ 92:5 ಅಂಕ ಪಡೆದಿದ್ದರು.
ಈ ವೇಳೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ, ರಾಜಾಧ್ಯಕ್ಷ ಶಿವಾನಂದ ತಗಡೂರ್, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಹಾವೇರಿ ಜಿಲ್ಲಾ ಸಮಿತಿಯವರು, ಪತ್ರಕರ್ತರು, ಪೋಷಕರು ಭಾಗವಹಿಸಿದ್ದರು.