ಆಧುನಿಕ ಭಾರತದ ಯುಗಪುರುಷ ಅಂಬೇಡ್ಕರ್: ಬಂಜಗೆರೆ ಜಯಪ್ರಕಾಶ್
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಶೋಷಣೆ ವಿರುದ್ಧ ಮೊಳಗಿದ ದನಿ ಎಂದರೆ ಅದು ಆಧುನಿಕ ಭಾರತದ ಯುಗಪುರಷ ಅಂಬೇಡ್ಕರ್ ಮಾತ್ರ ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದ ಮೈಸೂರು ವಿಶ್ವವಿದ್ಯಾಲಯದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಂಶೋಧನಾ ವಿದ್ಯಾರ್ಥಿ ವೇದಿಕೆಯಿಂದ ಶನಿವಾರ ನಡೆದ ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ,ಅಂಬೇಡ್ಕರ್ ಚಿಂತನೆ: ಸಮಕಾಲೀನ ಸ್ಪಂದನೆ' ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಶೋಷಣೆ ವಿರುದ್ಧ ಜ್ಞಾನದ ಮಾರ್ಗದ ಕ್ರಾಂತಿ ಹರಿಸಿ ಸಮಾನತೆ ಸಾಧಿಸಿದರು. ಸಮಾಜಿಕ ಬದಲಾವಣೆಗೆ ಶ್ರಮಿಸಿದರು. ಎಲ್ಲರಿಗೂ ಸ್ಥಾನಮಾನ, ಸಮಾನತೆ ದೊರಕಬೇಕು ಎಂಬುದು ಅವರ ಆಶಯವಾಗಿತ್ತು ಎಂದರು. ಜಾತಿ ವ್ಯವಸ್ಥೆಗೆ ಕಾನೂನಿನಲ್ಲಿ ಮಾನ್ಯತೆ ಇರಬಾರದು. ಶ್ರಮ ವಿಭಜನೆಯಲ್ಲಿ ಮೇಲೂ ಕೀಳು ಇರಬಾರದು. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಸೋದರತೆ ದೇಶದಲ್ಲಿ ಹರಡಬೇಕೆಂದು ಅಂಬೇಡ್ಕರ್ ಬಯಸಿದ್ದರು ಎಂದರು. ದೇಶದಲ್ಲಿ ಸನಾತನ ಮತ್ತು ಸಂವಿಧಾನ ಒಟ್ಟಾಗಿ ಹೋಗಲು ಸಾಧ್ಯವಿಲ್ಲ. ಶೋಷಣೆ , ಮೇಲು ಕೀಳು ವ್ಯವಸ್ಥೆ ತೊಡೆದುಹಾಕುವ ಸಲುವಾಗಿ ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಸಾಮಾಜಿಕ ಸ್ವಾತಂತ್ರ್ಯ ಹೋರಾಟ ಸಹ ಪ್ರಾರಂಭವಾಯಿತು. ಇದಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ ಎಂದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಲಪಂಥೀಯರು ಹೆಳಿದ್ದರು. ಇದಕ್ಕಾಗಿ 400 ಸ್ಥಾನ ನೀಡಿ ಎಂದು ಕೇಳಿದ್ದರು. ಆದರೆ ಅಧಿಕೃತವಗಿ ಪ್ರಣಾಳಿಕೆಯಲ್ಲಿ ಹೇಳಲಿಲ್ಲ. ಕಾರಣ ಆಳುವ ವರ್ಗದ ಸ್ವಾಭಾವವೇ ವಂಚನೆ. ಯುವಕರ ಮನಸ್ಸು ಗೆದ್ದು, ಮಾಧ್ಯಮ ಖರೀದಿಸಿ, ಮನುಸ್ಮೃತಿ ಜಾರಿ ಮಾಡಲು ಹೊರಟಿದ್ದರು. ಆದರೆ ಭಾರತದ ಜನರು ಇದರ ಪರವಾಗಿರಲಿಲ್ಲ. ಅವರು ಬಯಸಿದ ಬಹುಮತ ಪಡೆಯಲಿಲ್ಲ. ಆದಿವಾಸಿಗಳು, ದಲಿತರು, ಅಸ್ಪೃಶ್ಯರು, ಶೂದ್ರರು, ಮುಸ್ಲಿಂ ಸಮುದಾಯದವರು ಅಂಬೇಡ್ಕರ್ ಸಂವಿಧಾನ ಮತ್ತು ತತ್ವ ಚಿಂತನೆ ಮನಗೊಂಡು ರುಜುವಾತು ಪಡಿಸಿದರು. ಬಯಸಿದ ಸಂಖ್ಯಾಬಲ ಪಡೆಯಲು ಆಗದೆ ಪ್ರಾದೇಶಿಕ ಪಕ್ಷಗಳ ಆಶ್ರಯ ಪಡೆಯಬೇಕಾಯಿತು ಎಂದು ತಿಳಿಸಿದರು. ಸಾಮಾಜಿಕ ಕಾರ್ಯಕರ್ತೆ, ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ,ನಮ್ಮನ್ನು, ನಮ್ಮ ಲಿಂಗತ್ವ ನಿರ್ಣಯ ಮಾಡಲು ಯಾರಿಗೂ ಹಕ್ಕಿಲ್ಲ. ನಾವೇ ನಮ್ಮ ಲಿಂಗ ನಿರ್ಧರಿಸುವ ಮಹಾಲಿಂಗಿಗಳು. ಇದನ್ನು ಕೇಳುವ, ಪ್ರಶ್ನಿಸುವ ಹಕ್ಕು ಸಂವಿಧಾನ ಒದಗಿಸಿದೆ. ಇದರಿಂದಲೇ ನಮ್ಮ ರಕ್ಷಣೆಯಾಗುತ್ತಿದೆ’ ಎಂದರು.
ಲಿಂಗ, ಲಿಂಗತ್ವ, ಲೈಂಗಿಕತೆಯೇ ನನ್ನ ಧರ್ಮ. ದೇಹ ಮಾರಿಕೊಂಡು ಸುಖ ಕೊಡುವುದು ರಾಜಕಾರಣ. ಸಂವಿಧಾನವೇ ರಕ್ಷಿಸುತ್ತಿರುವಾಗ, ನಮ್ಮನ್ನು ತೀರ್ಮಾನಿಸಲು ನೀವೆಲ್ಲ ಯಾರು’ ಎಂದರು.
12ನೇ ಶತಮಾನದ ಬಸವಣ್ಣ, ಸ್ವಾತಂತ್ರ್ಯಕ್ಕೆ ಹೋರಾಡಿದ ಗಾಂಧೀಜಿ, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಇವರು ವಿಶ್ವಗುರು ಹೊರತು, ಮೋದಿ ವಿಶ್ವಗುರುವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಆರ್‍ಎಸ್‍ಎಸ್ ಎಂಬುದು ರಾಷ್ಟ್ರೀಯ ಸರ್ವನಾಶ ಸಂಘವಾಗಿದೆ. ನಮ್ಮ ಲಿಂಗತ್ವ ಸಮುದಾಯವು ವಿಭಜನೆಯಾಗಿದೆ. ಆರ್‍ಎಸ್‍ಎಸ್ ಸಿದ್ಧಾಂತ, ಬಲಪಂಥೀಯವಾದ ಹೇರಲಾಗಿದೆ. ಕಳೆದ 10 ವರ್ಷದಲ್ಲಿ ದೇಶದ ಪರಿಸ್ಥಿತಿ ಅಧೋಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ಘೋಷಣೆ ಮಾಡಿರುವುದು ನಮ್ಮೇಲ್ಲರ ಭಾಗ್ಯವೇ ಸರಿ. ಇದು ಬೇರೆ ಸರ್ಕಾರ ಬಂದಿದ್ದರೂ ಮಾಡಲು ಸಾಧ್ಯವಾಗುತ್ತಿತ್ತೂ ಗೊತ್ತಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಪ್ರಶಂಸಿಸಿದರು.
ಸನಾತನ ಧರ್ಮದಲ್ಲಿ ಎಲ್ಲವೂ ಸರಿಯಿಲ್ಲ. ಮಂಗಳಮುಖಿಯರು ಎದುರುಗಡೆ ಬಂದರೆ, ಮಂಗಳ ಅಗುತ್ತದೆ ಅಂದಮೇಲೆ ನಿಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳು ಅಮಂಗಳರಾ ಎಂದು ಪ್ರಶ್ನಿಸಿದರು. ಸಂಶೋಧಕ, ವಿದ್ವಾಂಸಕ, ಚಿಂತಕರು ಸಾಮಾಜಿಕ ಅನ್ಯಾಯ ಟೀಕಿಸಿದರೆ ಇಂದು ಸಾವು ಬರುತ್ತದೆ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಲಾಯಿತು. ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಕಲಾತಂಡದಿಂದ ಮೆರವಣಿಗೆ ನಡೆಯಿತು.
ಕೆಎಸ್‍ಒಯು ಪ್ರಾಧ್ಯಾಪಕರಾದ ಪೆÇ್ರ.ಕವಿತಾ ರೈ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರಾದ ಪೆÇ್ರ.ಎನ್.ಕೆ.ಲೋಲಾಕ್ಷಿ, ಪ್ರಸಾರಾಂಗ ನಿರ್ದೇಶಕ ಪೆÇ್ರ.ಎಂ.ನಂಜಯ್ಯ ಭಾಗವಹಿಸಿದ್ದರು.