ಕನ್ನಡ ಸೇವ ರತ್ನ ಪ್ರಶಸ್ತಿ ಪ್ರಧಾನ ಹಾಗೂ ಮೈಸೂರು ಜಾನಪದ ಸಂಭ್ರಮ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್ ಎಸ್ ಕಲಾ ಸಂಭ್ರಮ ಇವರ ಸಂಯುಕ್ತ ಆಶ್ರಯದಲ್ಲಿ, ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣ ದಲ್ಲಿ ಕನ್ನಡ ಸೇವಾ ಪ್ರಶಸ್ತಿ ಪ್ರಧಾನ
ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮ ನೆರವೇರಿತು.
ಮೈಸೂರು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಎನ್ ಎಂ ನವೀನ್ ಕುಮಾರ್ ರವರಿಗೆ ರಾಜ್ಯ ಮಟ್ಟದ “ಕನ್ನಡ ಸೇವಾ ರತ್ನ” ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಗೌರವ ವನ್ನು ಸ್ವೀಕರಿಸಿ ಮಾತನಾಡಿದ ನವೀನ್ ಕುಮಾರ್ ರವರು ನಾವು ಇಂದಿನ ಜಗತ್ತಿನ ಅವಶಕತೆಗೆ ತಕ್ಕಂತೆ ಇಂಗ್ಲಿಷ್,ಹಿಂದಿ ಅಥವಾ ಯಾವುದೇ ಭಾಷೆ ಯನ್ನು ಕಲಿತರು ಸಹ ನಮ್ಮ ಮಾತೃ ಭಾಷೆ ಆದ ಕನ್ನಡವನ್ನು ಉತ್ತಮವಾಗಿ ಕಲಿತು,ಕನ್ನಡಕ್ಕೆ ಅಗ್ರ ಸ್ಥಾನವನ್ನು ನೀಡಬೇಕು ಹಾಗೂ ನಮ್ಮತನ ವನ್ನು ಎಂದಿಗೂ ಬಿಟ್ಟುಕೊಡಬಾರದೆಂದು ನುಡಿದರು.
ಸಮಾಜ ಸೇವಕರಾದ ಕುರುಬರಹಳ್ಳಿ ಧನಪಾಲ್ ಸೇರಿದಂತೆ ಅನೇಕ ಸಾಧಕರನ್ನು ಇದೇ ವೇದಿಕೆಯಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು,ಕನ್ನಡ ಲೋಕದ ಅಧ್ಯಕ್ಷರಾದ ಡಾ.ವೈ.ಡಿ.ರಾಜಣ್ಣ ರವರು,
ಅವಧೂತ ಮಹರ್ಷಿ ಸಿದ್ದಾರ್ಥಸ್ವಾಮೀಜಿ ರವರು,ಸಾಹಿತಿಗಳಾದ ಶ್ರೀಮತಿ ಮಂಜುಳಾ ಪಾವಗಡ ರವರು, ಡಾ.ನಾಗರಾಜ ತಂಬ್ರಹಳ್ಳಿ ರವರು ಹಾಗೂ ಅನೇಕ ಸಾಹಿತಿಗಳು ಮತ್ತು ಸಮಾಜಸೇವಕರು ಭಾಗವಹಿಸಿದರು.