ಒಕ್ಕಲಿಗರ ಸಂಘದ ಕಛೇರಿ ಉದ್ಘಾಟನೆ ಹಾಗೂ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಜು.1:- ಸಂಘಟನೆಗಳು ಸಮಾಜಮುಖಿ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಕೆ. ಮಹದೇವ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘದ ಕಛೇರಿ ಉದ್ಘಾಟನೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾಡಪ್ರಭು ಕೆಂಪೇಗೌಡರವರು ದೂರದೃಷ್ಟಿಯಿಂದ 500 ವರ್ಷಗಳ ಹಿಂದೆ ಕಟ್ಟಿದ ಬೆಂಗಳೂರು ಇಂದು ವಿಶ್ವದಲ್ಲಿಯೇ ಪ್ರಸಿದ್ದಿ ಪಡೆದಿದೆ ಬೆಂಗಳೂರು ಹಾಗೂ ನಮ್ಮ ರಾಜ್ಯದ ಬೆಳವಣಿಗೆಗೆ ಕೆಂಪೇಗೌಡರವರ ಕೊಡುಗೆ ಅಪಾರವಾಗಿದೆ ಎಂದರು.
ಪಿರಿಯಾಪಟ್ಟಣದಲ್ಲಿ ಇಂದು ಒಕ್ಕಲಿಗರ ಸಂಘದ ಉದ್ಘಾಟನೆ ಯಾಗುತ್ತಿರುವುದು ಸಂತಸದ ವಿಷಯ ಒಕ್ಕಲಿಗ ಸಮುದಾಯ ಎಲ್ಲಾರಿಗೂ ನ್ಯಾಯವನ್ನು ಒದಗಿಸುವ ಸಮುದಾಯವಾಗಿದೆ ತಾಲೂಕಿನ ಒಕ್ಕಲಿಗ ಸಮುದಾಯದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಬೆಳವಣಿಗೆಗೆ ಶ್ರಮಿಸುವುದು ಸಂಘಟನೆಗಳ ಜವಾಬ್ದಾರಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಲಿ ಇಂದು ಪ್ರಾರಂಭವಾಗಿರುವ ಒಕ್ಕಲಿಗರ ಸಂಘವು ಯಶಸ್ಸನ್ನು ಗಳಿಸಲಿ ಎಂದು ಸಂಘಕ್ಕೆ ಶುಭ ಹಾರೈಸಿದರು.
ಮಾಜಿ ನಗರ ಪಾಲಿಕೆ ಸದಸ್ಯ ಹಾಗೂ ಸಂಘದ ಗೌರವಾದ್ಯಕ್ಷ ಪಿ. ಪ್ರಶಾಂತ್ ಗೌಡ ಮಾತನಾಡಿ ನಾಡಪ್ರಭು ಕೆಂಪೇಗೌಡರವರ ಆದರ್ಶಗಳನ್ನು ಎಲ್ಲರೂ ಅನುಸರಿಸಬೇಕು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಹಾಗೂ ಒಕ್ಕಲಿಗ ಸಮಾಜದ ಸರ್ವೋತೋಮುಖ ಬೆಳವಣಿಗೆಯಾಗಬೇಕು ಎನ್ನುವ ಉದ್ದೇಶದಿಂದ ಪಿರಿಯಾಪಟ್ಟಣದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಒಕ್ಕಲಿಗರ ಸಂಘವನ್ನು ಪ್ರಾರಂಭ ಮಾಡಲಾಗಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಅವರು ಸಾಮಾಜಿಕವಾಗಿ , ಶೈಕ್ಷಣಿಕವಾಗಿ , ಆರ್ಥಿಕವಾಗಿ ಸಬಲರಾಗಬೇಕು ಆ ನಿಟ್ಟಿನಲ್ಲಿ ಸಂಘ ಕೆಲಸಮಾಡುತ್ತದೆ ಎಂದು ಹೇಳಿದರು.
ನಮ್ಮ ರಾಜ್ಯ ಇಷ್ಟು ಅಭಿವೃದ್ಧಿ ಹೊಂದಲು ನಾಡಪ್ರಭು ಕೆಂಪೇಗೌಡರವರ ಆಡಳಿತ ಹಾಗೂ ಅವರ ಆರ್ಥಿಕ ನೀತಿಗಳು ಕಾರಣವಾಗಿವೆ ಎಂದರೆ ತಪ್ಪಾಗಲಾರದು ಅವರ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ ಮಾತನಾಡಿ ಸಂಘಟನೆಗಳು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು ಆಗ ಸಮುದಾಯಗಳು ಬೆಳವಣಿಗೆ ಹೊಂದುತ್ತವೆ ಕೆಂಪೇಗೌಡರವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಎಲ್ಲಾರೂ ಸಮುದಾಯದ ಬೆಳವಣಿಗೆಗಾಗಿ ದುಡಿಯಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ತಾಲೋಕು ಒಕ್ಕಲಿಗರ ಸಂಘದ ಅಧ್ಯಕ್ಷ ಆನಂದ್ ಬಸಲಾಪುರ, ಉಪಾಧ್ಯಕ್ಷರಾದ ಚಂದ್ರೆಗೌಡ, ಜಗದೀಶ್, ಕಾನೂನು ಸಲಹೆಗಾರ ಕೆ. ಡಿ. ಸಂದೀಪ್ ಕಾರ್ಯದರ್ಶಿ ಮೋಹನ್, ಖಜಾಂಚಿ ಮನು, ನಿರ್ದೇಶಕರಾದ ಗಣೇಶ್, ರಾಜೇಶ್, ಅನಿಲ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಇತರರು ಇದ್ದರು.