ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.01- ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದೆ ಕರೆಯಲ್ಪಡುವ ಪತ್ರಿಕಾರಂಗಕ್ಕೆ, ಸಂಪಾದಕರು ಹಾಗೂ ಪತ್ರಕರ್ತರು ಹಾಗೂ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಮತ್ತು ಸಾರ್ವಜನಿಕ ನಾಗರೀಕ ಬಂಧುಗಳಿಗೆ ಸಮಗ್ರವಾಗಿ ಅನೇಕ ಕಷ್ಟ ನಷ್ಟಗಳ ನಡುವೆಯೂ ಸೇವೆ ಸಲ್ಲಿಸುತ್ತಿರುವ ಪತ್ರಿಕೋದ್ಯಮದ ಸರ್ವರಿಗೂ ಕೂಡ ಪತ್ರಿಕಾ ದಿನಾಚರಣೆ ಅಂಗವಾಗಿ ಶುಭಾಶಯಗಳನ್ನು ಸಂಸ್ಕøತಿ ಚಿಂತಕ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.
ಪತ್ರಿಕೆ ಸಮಾಜದ ಬೆಳಕು.
ಜ್ಞಾನದ ಶಕ್ತಿ ಕೇಂದ್ರ. ಪ್ರತಿನಿತ್ಯದ ಆಗುಹೋಗುಗಳನ್ನು ಹಾಗೂ ಭವಿಷ್ಯದ ಚಿಂತನೆಗಳನ್ನು ತಮ್ಮ ಲೇಖನಗಳು, ವರದಿಗಳ ಮೂಲಕ ವಿವರಿಸಿ ಪ್ರತಿಯೊಂದು ಅರ್ಥ ಮಾಡಿಸಿ ಸಮಾಜಕ್ಕೆ ಹಾಗೂ ಭವಿಷ್ಯದ ಮಾರ್ಗದರ್ಶಕರಾಗಿ ರಾಷ್ಟ್ರದ ಅಭ್ಯುದಾಯಕ್ಕೆ ಹಗಲಿರುಳು ಎನ್ನದೆ ನಿರಂತರ ಸೇವೆ ಸಲ್ಲಿಸುವ ಪತ್ರಿಕಾ ಕ್ಷೇತ್ರದ ಸಮಸ್ತರಿಗೂ ಕೂಡ ಅಭಿನಂದನೆಗಳನ್ನು ಪತ್ರಿಕಾ ದಿನಾಚರಣೆಯ ಮೂಲಕ ಎಲ್ಲ ಪತ್ರಕರ್ತರಿಗೆ ಸಮಾಜದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ಹಾಗು ಅಭಿನಂದನೆಗಳನ್ನು ಋಗ್ವೇದಿ ಸಲ್ಲಿಸಿದ್ದಾರೆ.