ಕಾಡಂಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ಕಲಿಕಾ ಸಾಮಗ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ಹನೂರು ಜು 1 :- ತಾಲೂಕಿನ ಕೋಣನಕೆರೆ ಬುಡಕಟ್ಟು ಆಶ್ರಮ ಶಾಲೆ, ಹೊಸಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪಾಲರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಬೆಂಗಳೂರಿನ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್
ಹಾಗೂ ಕಾನನ ಕಮ್ಯುನಿಟಿ ಟ್ರಸ್ಟ್ ಕೋಣನಕೆರೆಯವರ ಸಹಯೋಗದಲ್ಲಿ 350 ಶಾಲಾ ಮಕ್ಕಳಿಗೆ 1500ಕ್ಕೂ ಹೆಚ್ಚು ಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಅಲ್ಲದೇ ಈ ಸಂದರ್ಭದಲ್ಲಿ ಹೊಸಪಾಳ್ಯ ಶಾಲೆಗೆ ಪೇಂಟಿಂಗ್ ಮಾಡಿಸಲಾಯಿತು. ಹಾಗೆಯೇ ಶಾಲೆಯ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ದಾಮೋದರ್ ನಾಯಕ್ ಎ ಸಹಾಯಕ ಪ್ರಾಧ್ಯಾಪಕರು, ಔಷಧ ವಿಜ್ಞಾನ ವಿದ್ಯಾಲಯ ಹಾಗೂ ಮಾರ್ಗದರ್ಶಕರು – ರೋಟರಾಕ್ಟ್, ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಗವಿರಾಜ್ ರೋಟರಿ ಕನಕಪುರ ರವರು ಸಹಕಾರ ನೀಡಿರುತ್ತಾರೆ.
ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕ್ಲಬ್ ನ ಅಧ್ಯಕ್ಷೆ ಅಪೇಕ್ಷಾ ಕೆ ಹೆಗ್ಡೆ, ಕಾರ್ಯದರ್ಶಿ ರಾಜು ಎನ್, ಸದಸ್ಯ ನಂದಿನಿ ಎಂ.ಎಸ್, ಯಶ್ವಂತ್ ಗೌಡ ಎಸ್. ಎ, ಕಾನನ ಕಮ್ಯುನಿಟಿ ಟ್ರಸ್ಟ್ ನ ಮುಖ್ಯಸ್ಥ ಜೆ. ಮಹದೇವಸ್ವಾಮಿ, ಶಾಲೆಯ ಮುಖ್ಯ ಶಿಕ್ಷಕ
ಅಕಪ್ಪನವರು, ಶಿಕ್ಷಕ ಸಿದ್ದರಾಜು, ಶಶಿ ಕುಮಾರ್, ಮಲ್ಲೇಶ್ ರವರು ಹಾಗೂ ಕೋಣನಕೆರೆ ಗ್ರಾಮದ ಮುಖಂಡರಾದ ಪಿ.ಪುಟ್ಟಮಾದ ರವರು ಹಾಜರಿದ್ದರು.