ಮಣ್ಣೆತ್ತು ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ದೊಡ್ಡದು
ಜಿ.ಪಿ. ಘೋರ್ಪಡೆ
ತಾಳಿಕೋಟೆ:ಜು.1: ವಿವಿಧ ಕಲೆ ಕುಸುರುಗಳಲ್ಲಿ ಪರಿಣಿತರಾದವರನ್ನು ದಿನಾಲು ನೋಡುತ್ತೇವೆ ಅವರ ಕುರಿತು ಅರಿತುಕೊಳ್ಳುತ್ತೇವೆ ಆಯಾ ಕಲಾ ಕಾರರಿಗೆ ಆಯಾ ಸಂಬಂದಿತ ಸಮಾಜ ಬಾಂದವರಿಗೆ ಯಾವುದೇ ತರಹದ ಸೌಲಬ್ಯ ದೊರೆಯಲಾರದಕ್ಕೆ ಚಿಂತೆಗೆ ಒಳಪಡುತ್ತಾ ಸಾಗಿದ್ದೇನು ಕಡಿಮೇನಿಲ್ಲಾ.
ಅಂತವರ ಗುಂಪಿಗೆ ಸೇರಿದವರಲ್ಲಿ ತಾಳಿಕೋಟೆಯ ಕುಂಭಾರ ಸಮಾಜದ ಕುಂಭಾರ ಮನೆತನದವರೆಂದು ಹೇಳಿದರೆ ತಪ್ಪಾಗಲಾರದು ಜೇಷ್ಠಮಾಸದ ಕೃಷ್ಣಪಕ್ಷದ ಅಮವಾಸ್ಯೆ ತಿಥಿಯನ್ನು ಜೇಷ್ಠ ಅಮವಾಸ್ಯೆ ಅಥವಾ ಮಣ್ಣೆತ್ತಿನ ಅಮವಾಸ್ಯೆ ಎಂದು ಕರೆಯಲಾಗುತ್ತದೆ ಈ ದಿನದಂದು ಪಿತೃಪೂಜೆ ಮಾತ್ರವಲ್ಲಾ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ರೈತಾಪಿ ಜನತೆ ಹಾಗೂ ಇನ್ನೂಳಿದ ಜನತೆಯೂ ಸಹ ಆ ಎತ್ತುಗಳನ್ನು ಪೂಜಿಸುವ ಮೂಲಕ ಬೆಳೆಗೆ ಸಹಾಯ ಮಾಡಿರುವದಕ್ಕೆ ದನ್ಯವಾದವನ್ನು ಸಲ್ಲಿಸುತ್ತಾರೆ. ಅಂತಹ ಮಹತ್ವದ ಮಣ್ಣೆತ್ತಿನ ಅಮವಾಸ್ಯೆಯ ದಿನದಂದು ರೈತರಿಗೆ ಖರೀದಿಸಲು ಕುಂಭಾರ ಮನೆತನದ ಕಲಾ ಕಾರರು ಈ ಹಿಂದಿನಿಂದ ಬಂದ ಸಾಂಪ್ರದಾಯದಂತೆ ಮಣ್ಣೆತ್ತುಗಳನ್ನು ನಿರ್ಮಾಣ ಮಾಡಿ ರೈತರಿಗೆ ಹಾಗೂ ಇನ್ನೂಳಿದ ಕುಟುಂಭದ ಜನತೆಗೂ ಮಾರಾಟ ಮಾಡುವ ಕಾರ್ಯದಂತೆ ತಾಳಿಕೋಟೆ ಪಟ್ಟಣದಲ್ಲಿಯೂ ನಡೆಯುತ್ತಾ ಸಾಗಿಬಂದಿದೆ.
ಕುಂಭಾರ ಕುಟುಂಭದವರಲ್ಲಿ ಮಣ್ಣೆತ್ತು ನಿರ್ಮಾಣ ಮಾಡುವವರಲ್ಲಿ ಹೆಣ್ಣು ಮಕ್ಕಳ ಹಾಗೂ ಅವರ ಸಮಾಜದ ಮಹಿಳೆಯರ ಪಾತ್ರ ದೊಡ್ಡದೆಂದು ಹೇಳಿದರೆ ತಪ್ಪಾಗಲಾರದು. ಮಣ್ಣೆತ್ತಿನ ಅಮವಾಸ್ಯೆ ಪೂರ್ವದಲ್ಲಿಯೇ ಮಣ್ಣೆತ್ತು ತಯಾರಿಸುವ ಕಾರ್ಯಕ್ಕೆ ಮುಂದಾಗುತ್ತಾರೆ ಕುಂಭಾರ ಮನೆತನದ ಕಲಾ ಕಾರರು ತಯಾರಿಸುವ ಸಾಮಾಗ್ರಿಗಳಲ್ಲಿ ಗಡಿಗೆ, ಹೂವಿನ ಕುಂಡಲಿ, ಮಣ್ಣೆತ್ತುಗಳು, ದೀಪಾವಳಿಯ ಪಣತಿಗಳು, ಹಾಗೂ ಉಗಾಧಿಗೆ ಬೇವು ಸವಿಯಲು ಗಡಿಗೆಗಳು ಅಲ್ಲದೇ ಜೋಕಮಾರಸ್ವಾಮಿಯ ತಯಾರಿಕೆ, ಇದು ಅಲ್ಲದೇ ವಿವಾಹಕ್ಕೆ ಅಗತ್ಯವಿರುವ ಹೈರಾಣಿಗಳು, ಅಡಕಲ ಗಡಗಿಗಳು, ಸುಮಾರು 25 ಒಳ್ಳಗೊಂಡಿರುವ ಈ ಸಟ್ ತಯಾರಿಸುವ ಕಾರ್ಯದಲ್ಲಿ ತಾಳಿಕೋಟೆಯ ಕುಂಭಾರ ಮನೆತನದವರು ನಿಪುಣತೆ ಹೊಂದಿದ್ದರೂ ಈ ಜನತೆಗೆ ಹಾಗೂ ಈ ಕುಟುಂಭದವರಿಗೆ ಕೆಲವು ಪಟ್ಟಣಗಳಲ್ಲಿ ಇದೇ ಸಂಬಂದಿಸಿದ ಕೋಮಿನ ಜನತೆಗೆ ಸರ್ಕಾರ ಕಲೆ ಕುಸುಮ ತಯಾರಿಸಲು ಜಾಗೆ ನೀಡಿದೆ ಅಲ್ಲದೇ ಗಡಿಗೆ ತಯಾರಿಸಲು ಮಣ್ಣಿರತಕ್ಕಂತಹ ಕೇರೆಯನ್ನೂ ಸಹ ನಿರ್ಮಾಣ ಮಾಡಿ ಕೊಟ್ಟು ಮಣ್ಣಿನ ಸೌಕರ್ಯ ಮಾಡಿಕೊಡಲಾಗಿದೆ ಗಡಿಗೆ ಸುಡಲಿಕ್ಕೆ ಬಟ್ಟಿಯನ್ನು ತಯಾರಿಸಿ ಮಳೆಗಾಲದಲ್ಲಿಯೂ ಈ ದುಡಿತ ಕಾರ್ಯ ನಡೆಯಲಿ ಎಂದು ಈ ಕುಟುಂಬದವರ ಜೀವನೋಪಾಯಕ್ಕೆ ಸರ್ಕಾರ ಕೆಲವೆಡೆ ಆಸರೆಯಾಗಿದ್ದರೂ ತಾಳಿಕೋಟೆ ಪಟ್ಟಣದ ಈ ಕುಂಭಾರ ಕುಟುಂಭ ಹಾಗೂ ಸಮಾಜ ಬಾಂದವರಿಗೆ ಸರ್ಕಾರದಿಂದ ಯಾವ ಆಸರೆಯಾಗಿಲ್ಲಾ ಇದು ಅಲ್ಲದೇ ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಈ ಸಮಾಜ ಕುರಿತು ನಿಗಮ ರಚನೆಯಾಗಿದ್ದರೂ ಈ ತಾಳಿಕೋಟೆ ಕುಂಭಾರ ಬಾಂದವರಿಗೆ ಯಾವದೇ ತರಹದ ಉಪಯೋಗ ಆಗಿಲ್ಲಾವೆಂಬುದು ಅದೇ ಸಮಾಜದ ಶರಣಪ್ಪ ಮಡಿವಾಳಪ್ಪ ಕುಂಭಾರ ಹಾಗೂ ಶ್ರೀಮತಿ ಸಿದ್ದಮ್ಮ ಕುಂಭಾರ ಅವರ ದೂರಾಗಿದೆ.
ಕುಂಭಾರ ಮನೆತನದವರಲ್ಲಿ ವಿವಿಧ ನಮೂನೆಯ ಮಣ್ಣಿನ ಸಲಕರಣೆಗಳನ್ನು ನಿರ್ಮಾಣ ಮಾಡಿ ಬಂದಂತಹ ಹಣದಿಂದ ತಮ್ಮ ಸಂಸಾರವನ್ನು ಸಾಗಿಸುತ್ತಾ ಸಾಗಿದ್ದಾರೆ ಪೂರ್ವಿಕಾಲದಿಂದ ಈ ಕಸಬು ಮಾಡುತ್ತಾ ಸಾಗಿರುವವರು ಈ ಪಟ್ಟಣದಲ್ಲಿ 12ಕ್ಕೂ ಮೇಲ್ಪಟ್ಟು ಮನೆತನದವರಾಗಿದ್ದು ಈ ಮನೆತನದವರಲ್ಲಿ 40 ಕ್ಕೂ ಮೇಲ್ಪಟ್ಟು ಕುಟುಂಭದವರಿದ್ದು ಮಣ್ಣಿನಲ್ಲಿಯೇ ಮಣ್ಣಾಗಿ ದುಡಿಯುತ್ತಾ ಸಾಗಿಬಂದ ಈ ತಾಳಿಕೋಟೆಯಲ್ಲಿಯ ಶರಣಪ್ಪ ಕುಂಭಾರ, ಮಲ್ಲು ಕುಂಭಾರ, ರಮೇಶ ಕುಂಭಾರ, ಬಸ್ಸು ಕುಂಭಾರ, ಈರಪ್ಪ ಕುಂಭಾರ, ಕಾಶಿನಾಥ ಕುಂಭಾರ, ಜಗದೀಶ ಕುಂಭಾರ, ಸಿದ್ದಪ್ಪ ಕುಂಭಾರ, ಮುತ್ತು ಕುಂಭಾರ, ಮಹಾದೇವಪ್ಪ ಕುಂಭಾರ, ಲಕ್ಷ್ಮಣ ಕುಂಭಾರ ಇವರೆಲ್ಲರೂ ಒಳಗೊಂಡಿದ್ದಾರೆಂದು ಶರಣಪ್ಪ ಕುಂಭಾರ ಅವರು ತಿಳಿಸಿದ್ದಾರೆ.
ಈ ತಾಳಿಕೋಟೆ ಭಾಗದತ್ತ ಸರ್ಕಾರ ಲಕ್ಷವಿಟ್ಟು ಬಡ ಕುಟುಂಭಸ್ಥರಾದ ಈ ಸಮಾಜದ ಜನತೆಯ ಮೇಲೆ ದಯೆ ತೋರಿ ಅನ್ಯ ನಗರ ಪಟ್ಟಣದ ಇದೇ ಸಮಾಜದ ಜನತೆಗೆ ನೀಡಿದಂತಹ ಸೌಲಭ್ಯಗಳನ್ನು ಇಲ್ಲಿಯ ಸಮಾಜದವರಿಗೂ ನೀಡಬೇಕೆಂದು ಅವರು ಪತ್ರಿಕಾ ಪ್ರಕಟನೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.