ಮಾನವನಿಂದ ಮಹಾನ್ ಮಾನವನಾಗಲು ರಾಜಯೋಗ ಶಿಕ್ಷಣವೇ ಆಧಾರ: ಬಿಕೆ ಕರುಣಾಜಿ ಅಭಿಮತ
ಸಂಜೆವಾಣಿ ನ್ಯೂಸ್
ಮೈಸೂರು, ಜು.01- ಜಗತ್ತಿನಲ್ಲಿ ಎಲ್ಲಾ ಪ್ರಕಾರದ ಶಿಕ್ಷಣ ವಿದ್ದರೂ ಮಾನವೀಯ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಮಾನವನನ್ನು ಮಹಾಮಾನವನನ್ನಾಗಿ ಮಾಡುವ ಏಕೈಕ ಶಿಕ್ಷಣ ರಾಜಯೋಗ ಶಿಕ್ಷಣ ಎಂದು ಅಂತರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮೌಂಟ್ ಅಬುವಿನ ಮೀಡಿಯಾ ರಾಷ್ಟ್ರೀಯ ಅಧ್ಯಕ್ಷ ರಾಜಯೋಗಿ ಬ್ರಹ್ಮಾಕುಮಾರ ಕರುಣಾಜೀ ಅಭಿಪ್ರಾಯ ಪಟ್ಟರು
ಅವರು ನಗರದ ಯಾದವಗಿರಿ ಶಾಖೆಯಲ್ಲಿ 84ನೇ ಜನ್ಮದಿನೋತ್ಸವದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡುತ್ತಾ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಂಡರೆ ಮಾತ್ರ ಮುಂಬರುವ ದಿನಗಳಲ್ಲಿ ಬರುವ ಜೀವನದ ಪರೀಕ್ಷೆ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯ ಎಂದರು. ರಾಜಯೋಗ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಅಂತರ್ಮುಖತೆ ಅಬ್ಯಾಸ ಮಾಡಿದರೆ ಒಳಿತು. ಅಂತರ್ ಮುಖಿ ಸದಾ ಸುಖಿ ಬಹಿರ್ಮುಖಿ ಸದಾ ದುಃಖಿ ಎಂದರು
ಜ್ಞಾನ ಸರೋವರ ರಾಜಯೋಗ ರಿಟ್ರೀಟ್ ಸೆಂಟರ್‍ನ ಪ್ರಾಂಶುಪಾಲ ಬಿಕೆರಂಗನಾಥ್ ಶಾಸ್ತ್ರಿಜಿ ಮಾತನಾಡಿ, 60ರ ದಶಕದಲ್ಲಿ ಮೈಸೂರು ಮಹಾರಾಜರಿಂದ ಸಹಯೋಗ ಪಡೆದು ಪುಟ್ಟದಾದ ರೀತಿಯಲ್ಲಿ ಆರಂಭಿಸಿದ ಈಶ್ವರೀಯ ವಿಶ್ವವಿದ್ಯಾಲಯ ಇಂದು ನಾಲ್ಕು ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಕರ್ನಾಟಕದಾದ್ಯಂತ ಹೆಮ್ಮರವಾಗಿ ಬೆಳೆದಿದೆ ಅದಕ್ಕೆ ಮೂಲ ಕಾರಣ ಕರ್ತರುಕರುಣಾಜಿಯವರು ಆಗಿದ್ದಾರೆ ಎಂದರು ಅಂತರಾಷ್ಟ್ರೀಯ ಮುಖ್ಯ ಕೇಂದ್ರವಾದ ಅಬು ಪರ್ವತದಲ್ಲಿ ಕಳೆದ 52 ವರ್ಷಗಳಿಂದ ಸಂಸ್ಥೆಯ ಮಲ್ಟಿಮೀಡಿಯಾದ ರಾಷ್ಟ್ರ ಅಧ್ಯಕ್ಷರಾಗಿ ಸಂಸ್ಥೆಯ ಮ್ಯಾನೇಜ್ಮೆಂಟ್ ಕಮಿಟಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಜೊತೆಗೆ ಪೀಸ್‍ಆಫ್ ಮೈಂಡ್ ಮತ್ತು ಅವೇಕನಿಂಗ್ ಎಂಬ ಎರಡು ಟಿವಿ ಚಾನಲ್ ಗಳನ್ನು ಪ್ರತಿμÁ್ಠಪಿಸಿ 24 ಗಂಟೆಗಳ ಕಾಲ ನಿರಂತರ ಆಧ್ಯಾತ್ಮಿಕ ಏಳಿಗೆಯ ವಿಧಿ ವಿಧಾನಗಳನ್ನು ಯಾವುದೇ ಜಾಹೀರಾತುಗಳಿಲ್ಲದೆ ಮುನ್ನಡೆಸುತ್ತಿದ್ದಾರೆ ಹಾಗೆ ಸಂಸ್ಥೆಯ ವಿಷಯಗಳನ್ನು ಜನರಿಗೆ ಮುಟ್ಟಿಸಲು ಹಿಂದಿ ಇಂಗ್ಲಿμï ಮತ್ತು ಅನೇಕ ಭಾμÉಗಳಲ್ಲಿ ನಿಯತ ಕಾಲಿಕಗಳನ್ನು ಪ್ರಕಟಿಸಲು ನಿಮಿತ್ತರಾಗಿದ್ದಾರೆ ಅನೇಕ ದೇಶಗಳಲ್ಲಿ ಪರಮಾತ್ಮನ ಸಂದೇಶವನ್ನು ನೀಡಲು ಪರ್ಯಟನೆ ಮಾಡಿರುವ ಕರುಣಾಜಿ ಇಂದು ಮೈಸೂರಿಗೆ ಆಗಮಿಸಿ ಅನೇಕ ಪ್ರೇರಣದಾಯಕ ಮಾತುಗಳನ್ನು ಆಡಿದ್ದಾರೆ ಎಂದು ತಿಳಿಸಿದರು.
ಯೋಗ ಭವನದ ನಾಗರಾಜ್ ಭಾಯಿ ಮಾತನಾಡಿ ಇಲ್ಲಿ ನಡೆಯುತ್ತಿರುವ 140 ಅಡಿ ಎತ್ತರದ ಶಿವಲಿಂಗದ ಮ್ಯೂಸಿಯಂ ಬಗ್ಗೆ ಸಾಕಷ್ಟು ಮಾರ್ಪಾಟು ಮಾಡಿಕೊಳ್ಳಲು ತಿಳಿಸಿದ್ದಾರೆ ಎಂದು ತಿಳಿಸಿದರು.
ರಾಜಾಯೋಗಿ ಪ್ರಾಣೇಶ್‍ಜಿ ಶುಭಾಶಯವನ್ನುಕೋರಿಕರುಣಾಜಿಯವರು ಅಂದಿನ ದಿನಗಳಲ್ಲಿ ಹೇಗೆ ಜನತೆಗೆ ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳುವ ರೀತಿ ನೀತಿಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿರಾಜಯೋಗಿನಿ ಬಿಕೆ ಲಕ್ಷ್ಮೀ ಜಿ, ಸ್ವಾಮಿ ವಿವೇಕಾನಂದರಾಜ್ಯ ಸದ್ಭಾವನ ಪ್ರಶಸ್ತಿ ಪುರಸ್ಕøತೆಬಿಕೆದಾನೇಶ್ವರೀಜಿ ಮೀನಾಜಿ. ಓಂ ಶಾಂತಿ ನ್ಯೂ ಸರ್ವಿಸ್‍ನ ಬಿ.ಕೆ. ಆರಾಧ್ಯ ಮಾಧ್ಯಮದ ಮಹದೇವಸ್ವಾಮಿ ನಿವೃತ್ತ ಡಿವೈಎಸ್ಪಿ ಕೃಷ್ಣಮೂರ್ತಿ ಸೇರಿದಂತೆ ಮೈಸೂರು ಉಪವಿಭಾಗದ ಅನೇಕ ರಾಜ ವಿದ್ಯಾರ್ಥಿಗಳ ಭಾಗವಹಿಸಿದ್ದರು.