ಸಿಎಂ, ಸಚಿವರ ರಾಜಿನಾಮೆಗೆ ಮಾದಿಗ ದಂಡೋರ ಆಗ್ರಹ
ಕೋಲಾರ,ಜು.೧- ರಾಜ್ಯದಲ್ಲಿ ಜನಸಾಮಾನ್ಯರನ್ನು ಅಧೋಗತಿಗೆ ತಳ್ಳುತ್ತಿರುವ ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕೆಂದು ಕರ್ನಾಟಕ ಮಾದಿಗ ದಂಡೋರ ಕಾನೂನು ಘಟಕದ ರಾಜ್ಯಾಧ್ಯಕ್ಷ ಹಾಗೂ ವಕೀಲ ಹಾರೋಹಳ್ಳಿ ಹೆಚ್.ವೆಂಕಟೇಶಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಹದಗೆಟ್ಟಿದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು ಜನಸಾಮಾನ್ಯರ ಜೀವನ ಚಿಂತಾ ಜನಕವಾಗಿದೆ, ಕಾಂಗ್ರೆಸ್‌ನವರು ಅವಿವೇಕಿಗಳಂತೆ ಘೋಷಣೆ ಮಾಡಿದ್ದ ಗ್ಯಾರಂಟಿಗಳಿಗೆ ಸಾವಿರಾರು ಕೋಟಿಗಳು ಹವಣಿಸಲು (ಹೊಂದಿಸಲು) ಕಾಂಗ್ರೆಸ್ ಸರ್ಕಾರದಿಂದ ಆಗದೆ ವಿಲವಿಲ ಎಂದು ಒದ್ದಾಡುತ್ತಿದೆ ಪೆಟ್ರೋಲ್ ಬೆಲೆ,, ಡೀಸೆಲ್ ಬೆಲೆ, ತರಕಾರಿ ಬೆಲೆ, ಬೇಳೆ ಬೆಲೆ, ಎಣ್ಣೆ ಬೆಲೆ, ಅಕ್ಕಿ ಬೆಲೆ, ಮತ್ತು ಹಾಲಿನ ಬೆಲೆ, ದುಪ್ಪಟ್ಟು ಏರಿಕೆಯಾಗಿದೆ.
ದಲಿತ ವರ್ಗ, ರೈತಾಪಿ ವರ್ಗ, ಕಾರ್ಮಿಕ ವರ್ಗ ಹಾಗೂ ಜನಸಾಮಾನ್ಯ ವರ್ಗಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಜೀವನ ಮಾಡಲು ಬಹಳ ಕಷ್ಟಕರವಾಗಿದೆ ಜನರು ಕೂಲಿ ನಾಲಿ ಮಾಡಿ ಸಂಪಾದಿಸಿದ ಹಣದಲ್ಲಿ ದಿನಸಿ ವಸ್ತುಗಳನ್ನು ಕೊಂಡುಕೊಳ್ಳಲು, ಮನೆ ಬಾಡಿಗೆ ಕಟ್ಟಲು, ಮಕ್ಕಳಿಗೆ ಶಾಲಾ-ಕಾಲೇಜುಗಳ ಶುಲ್ಕ ಕಟ್ಟಲು ಆಗುತ್ತಿಲ್ಲ.
ಇದರ ಜೊತೆಗೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಮದ್ರಾಂಕದ ಶುಲ್ಕ ದುಪ್ಪಟ್ಟು, ೨೦ ರೂಪಾಯಿ ಇದ್ದಿದ್ದ ಛಾಪಾ ಕಾಗದ ನೂರು ರೂಪಾಯಿ, ಬಡವರು ಸೈಟು, ಮನೆ ತೆಗೆದುಕೊಳ್ಳಲು ಆಗಲ್ಲ ಸ್ವಂತ ಮನೆ ಮಾಡಿಕೊಳ್ಳಲಿಕ್ಕೆ ಆಗಲ್ಲ, ನೆಮ್ಮದಿಯಾಗಿ ಬದುವುದಕ್ಕೆ ಬಿಡುವುದಿಲ್ಲ ಪ್ರತಿಯೊಂದು ವಸ್ತುವಿನ ಬೆಲೆ ಜಾಸ್ತಿ ಮಾಡಿ ರೂ.೨೦೦೦ ಗ್ಯಾರಂಟಿಗೆ ೬೦೦೦ ನಷ್ಟ ಮಾಡಿರುವುದೇ ಈ ಸರ್ಕಾರದ ವೈಖರಿಯಾಗಿದೆ.
ಈ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ದಲಿತರ ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಸುಮಾರು ೧೧ ಸಾವಿರ ಕೋಟಿ ಗಳನ್ನು ಬೇರೆ ರಾಜ್ಯದ ಚುನಾವಣೆಗೆ ಉಪಯೋಗಿಸಿಕೊಂಡು ಇವರು ಸಹ ಲೂಟಿ ಮಾಡಿಕೊಂಡು ತಿಂದು ಹಾಕಿದ್ದಾರೆ ಮತ್ತು ಪರಿಶಿಷ್ಟ ಜಾತಿ ಪಂಗಡದ (ವಾಲ್ಮೀಕಿ ಅಭಿವೃದ್ಧಿ ನಿಗಮದ )೧೮೭ ಕೋಟಿ ರೂ ಹಣವನ್ನು ಸಹ ತಿಂದು ಹಾಕಿದ್ದಾರೆ.
ಭೋವಿ ಅಭಿವೃದ್ಧಿ ನಿಗಮದ ಹಣವನ್ನು ಸಹ ತಿಂದು ನೀರು ಕುಡಿದಿದ್ದಾರೆ, ಇಂತಹ ಒಂದು ನೀಚ ಸರ್ಕಾರ ಭ್ರಷ್ಟ ಸರ್ಕಾರ, ದಲಿತ ವಿರೋಧಿ ಸರ್ಕಾರ, ರೈತ ವಿರೋಧಿ ಸರ್ಕಾರ, ಕಾರ್ಮಿಕರ ವಿರೋಧಿ ಸರ್ಕಾರ, ಬಡವರ ವಿರೋಧಿ ಸರ್ಕಾರ,
ಜನಸಾಮಾನ್ಯರ ವಿರೋಧಿ ಸರ್ಕಾರವಾಗಿದೆ ಇಂತಹ ದುಷ್ಟ ಆಡಳಿತವನ್ನು ನೀಡುತ್ತಿರುವಂತಹ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಅವರ ಸಚಿವ ಸಂಪುಟದ ಮಂತ್ರಿಗಳು ಕೂಡಲೇ ರಾಜೀನಾಮೆಯನ್ನು ಕೊಡಬೇಕೆಂದು ಕರ್ನಾಟಕ ಮಾದಿಗ ದಂಡೋರದ ಪರವಾಗಿ ಆಗ್ರಹ ಪಡೆಸಿದ್ದಾರೆ.