ಸುದೀರ್ಘ ಸೇವೆಯಿಂದ ನಿವೃತ್ತಿ,ರಮೇಶ್‌ಗೆ ಸನ್ಮಾನ
ಕೋಲಾರ,ಜು.೧- ತಾಲ್ಲೂಕಿನ ನರಸಾಪುರ ಹೋಬಳಿಯ ಕೆ.ಬಿ ಹೊಸಹಳ್ಳಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ೧೧ ವರ್ಷಗಳಿಂದ ಮುಖ್ಯೋಪಾಧ್ಯಾಯರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ರಮೇಶ್ ಅವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಶಾಲೆಯಲ್ಲಿ ದಂಪತಿ ಸಮೇತವಾಗಿ ಸನ್ಮಾನಿಸಿ ಗೌರವಿಸಲಾಯಿತು..
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡ ಎಸ್ ಸೋಮಶೇಖರ್ ಮಾತನಾಡಿ ಸುಮಾರು ವರ್ಷಗಳ ಕಾಲ ತಮ್ಮ ಅನುಭವದ ಮೂಲಕ ರಮೇಶ ಅವರು ಅನೇಕ ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿಸಲು ಶ್ರಮಿಸಿದ್ದಾರೆ ಅವರ ಅನುಭವದಿಂದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಇವತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ವಯೋನಿವೃತ್ತಿ ಹೊಂದಿದ ಬಳಿಕವೂ ತಾಲ್ಲೂಕಿನ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದೇ ರೀತಿಯಲ್ಲಿ ಅನೇಕ ವಿಧ್ಯಾರ್ಥಿಗಳಿಗೆ ಅವರ ಮಾರ್ಗದರ್ಶನ ಸಿಗುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್, ಸದಸ್ಯರು ಶಿಕ್ಷಕ ವೃಂದದವರಾದ ಅಕ್ತರಿ ಬೇಗಂ, ಸಂಧ್ಯಾರಾಣಿ, ಚಂದ್ರು, ಛಾಯಾಕುಮಾರಿ ಸೇರಿದಂತೆ ಗ್ರಾಮಸ್ಥರು ವಿಧ್ಯಾರ್ಥಿಗಳು ಈ ಸಂದರ್ಭದಲ್ಲಿ ಇದ್ದರು.