ಡೆಂಘಿಗೆ ೮ ಸಾವು-ವೈದ್ಯರ ಆತಂಕ
ಕೋಲಾರ,ಜು.೧- ರಾಜ್ಯದಲ್ಲಿ ಮಳೆಗಾಲ ಆರಂಭವಾಗಿರುವ ಬೆನ್ನಲ್ಲೆ ಡೆಂಗ್ಯು ಜ್ವರ ಹಾಗೂ ಚಿಕುನ್ ಗುನ್ಯಾ ಪ್ರಕರಣಗಳು ವ್ಯಾಪಿಸುತ್ತಿದ್ದು ರಾಜ್ಯದಲ್ಲಿ ಈವರೆಗೆ ಡೆಂಗ್ಯೂಗೆ ೫ ಮಂದಿ ಬಲಿಯಾಗಿರುವುದು ಆತಂಕಕಾರಿಯಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಾಕರಾ ಡಾ. ವಿಜಯಕುಮಾರ್ ತಿಳಿಸಿದರು
ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಾದ್ಯಮದೊಂದಿಗೆ ಅವರು ಮಾತನಾಡಿ ಗ್ರಾಮೀಣಾ ಪ್ರದೇಶಗಳಲ್ಲಿ ತೆಂಗು, ಮಾವು ತೋಟಗಳಲ್ಲಿ ನಗರ ಪ್ರದೇಶಗಳಲ್ಲಿನ ಮನೆಗಳ ಅವರಣಗಳಲ್ಲಿರು ನೀರು ನಿಲ್ಲವ ಹೊವಿನ ಕುಂಡ, ಹಳೆ ಟೈರು, ತೆಂಗಿನ ಚಿಪ್ಪುಗಳು, ನೀರಿನ ಟ್ಯಾಂಕುಗಳಲ್ಲಿ ತೆರೆದಿಟ್ಟ ನೀರಿನ ಟ್ಯಾಂಕುಗಳು ಡೆಂಗ್ಯೂ ಜ್ವರಕ್ಕೆ ಕಾರಣವಾಗ ಬಹುದಾಗಿದೆ. ಇವುಗಳು ಲಾರ್ವ ಉತ್ಪತ್ತಿಯ ತಾಣಗಳಾಗಿ ಪರಿವರ್ತನೆಯಾಗಲಿದೆ.
ಪ್ರಸ್ತುತ ಮುಂಗಾರು ಹಂಗಾಮಿನ ಮಳೆಯು ಆರಂಭವಾಗಿರುವುದರಿಂದ ಹವಮಾನದ ವೈಪರೀತ್ಯ ಉಂಟಾಗುತ್ತಿರುವುದು ಡೆಂಗ್ಯೂ ಹರಡುವಿಕೆಗೆ ಉತ್ತೇಜನಕಾರಿಯಾಗೆ ಪರಿಣಾಮಿಸಿದೆ. ಈ ವರ್ಷ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಶೇ ೬೦ಕ್ಕೆ ತಲುಪಿದೆ ಅಂದರೆ ಒಟ್ಟಾರೆಯಾಗಿ ಡೆಂಗ್ಯೂ ಶಂಕಿತ ಪ್ರಕರಣ ಸಂಖ್ಯೆ ಸುಮಾರು ಈವರೆಗೆ ೯೩ ಸಾವಿರಕ್ಕೂ ಹೆಚ್ಚಿದೆ ಎಂದು ವರದಿಯಾಗಿದೆ. ಈ ಪೈಕಿ ಸುಮಾರು ೪೪೦೦ ಪ್ರಕರಣಗಳಲ್ಲಿ ಡೆಂಗ್ಯು ಸೊಂಕು ತಗುಲಿರುವುದು ಧೃಡ ಪಟ್ಟಿದೆ ಎಂದರು,
ರಾಜ್ಯದಲ್ಲಿ ಡೆಂಗ್ಯು ಜ್ವರ ಮರಣ ಮೃದಂಗ ಬಾರಿಸುತ್ತಿರುವ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳು ಇತ್ತೀಚೆಗೆ ಅರೋಗ್ಯ ಸಚಿವರ ಸಮ್ಮಖದಲ್ಲಿ ರಾಜ್ಯದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಡೆಂಗ್ಯು ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ ಆದೇಶ ಜಾರಿ ಮಾಡಿದ್ದಾರೆ. ಸೋಂಕಿತರಿಗೆ ಅಗತ್ಯವಾದ ಚಿಕಿತ್ಸೆಗೆ ಪೂರಕವಾದ ಇಂಜೆರ್ಕ್ಷನ್, ಮಾತ್ರೆಗಳು, ಪ್ಲೇಟ್‌ಲಿಟ್ಸ್‌ಗಳ ಸಂಗ್ರಹವನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ದಾಸ್ತನು ಇರುವಂತೆ ಖಚಿತ ಎಚ್ಚರಿಕೆಯನ್ನು ನೀಡಿದ್ದಾರೆ.
ನಮ್ಮಲ್ಲಿ ಕೊಳಚೆ ನೀರು ನಿಲ್ಲುವಂತ ಪ್ರದೇಶಗಳಲ್ಲಿ ಡೆಂಗ್ಯು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳ ಬೇಕು, ಯಾರಿಗಾದರೂ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಿಸದೆ ಕೊಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯ ಬೇಕು, ಪ್ರಾರಂಭದಲ್ಲೆ ಚಿಕಿತ್ಸೆ ಪಡೆದರೆ ಬೇಗನೆ ಗುಣಪಡೆಸಲು ಸಾಧ್ಯವಾಗುತ್ತದೆ ಎಂದ ಅವರು ಡೆಂಗ್ಯು ನಿಯಂತ್ರಣಕ್ಕೆ ಅರೋಗ್ಯ ಇಲಾಖೆಯು ಸೂಚಿಸುವ ನಿಯಮಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಅರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡುವಂತಾಗ ಬೇಕು ಎಂದು ಮನವಿ ಮಾಡಿದರು,