ವಚನ ಸಾಹಿತ್ಯ, ಶರಣ ಸಂಸ್ಕøತಿ ಇಂದು ಅತ್ಯಗತ್ಯ: ಸುಭಾಸ ಛಾಯಗೋಳ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.1:ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿ ಇಂದಿನ ಜೀವನಕ್ಕೆ ತೀರಾ ಅತ್ಯಗತ್ಯ. ಇಂದಿನ ಯಾಂತ್ರಿಕ ಯುಗದಲ್ಲಿಯೂ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಗಡಿನಾಡ ಭಾಗದಲ್ಲಿ ಕನ್ನಡ ಸಾಹಿತ್ಯವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರÀ ಮಾಡುತ್ತಿದೆ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ ಅಭಿಪ್ರಾಯ ವ್ಯಕ್ತಪಡಿಸಿದರು
ಭಾನುವಾರಮ ನಗರದ ವಿಜಯಪುರ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದಿ. ಶಿವಮೂರ್ತೆಪ್ಪ ಪಾಟೀಲ ದತ್ತಿ. ದತ್ತಿ ದಾನಿಗಳಾದ ವಿಜಯಪುರದ ಡಾ. ಶಿವಲಿಂಗಪ್ಪ ಶಿವಮೂರ್ತೆಪ್ಪ ಪಾಟೀಲ ಕನ್ನಡ ವಚನ ಸಾಹಿತ್ಯ ಕುರಿತು ಚಿಂತನ ಗೋಷ್ಠಿ, ದಿ. ದುಂಡಪ್ಪ ವೀರಭದ್ರಪ್ಪ ಸಕ್ರಿ ದತ್ತಿದಾನಿಗಳಾದ ವೀರಭದ್ರಪ್ಪ ದುಂಡಪ್ಪ ಸಕ್ರಿ ವಿಷಯ. ಶರಣ ಸಂಸ್ಕೃತಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದಾ ಕನ್ನಡ ಪರ ಕೆಲಸ ಮಾಡಿದ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಬೆಳವಣಿಗೆಗೆ ಕಾರಣವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಪೆÇ್ರ. ದೊಡ್ಡಣ್ಣ ಬಜಂತ್ರಿ ಮಾತನಾಡಿ, ವಚನಗಳಿಗೆ ಮನ ಪರಿವರ್ತನೆ ಮಾಡುವ ಶಕ್ತಿಯಿದೆ. ಕಾಯಕ ಮತ್ತು ದಾಸೋಹ ವಚನ ಸಾಹಿತ್ಯದ ಶ್ರೇಷ್ಠ ಸಿದ್ಧಾಂತಗಳು ಎಂದರು.
ವಚನ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಶರಣ ಚಿಂತಕ ಎಂ.ಬಿ. ಕಟ್ಟಿಮನಿ ವಚನ ಸಾಹಿತ್ಯ ಅಮೂಲ್ಯವಾದುದು. ಸಾಮಾನ್ಯ ವ್ಯಕ್ತಿಗಳು ಕೂಡ ಸಾಹಿತ್ಯ ರಚಿಸುವಂತೆ ಪ್ರೇರಣೆ ನೀಡಿದ್ದು ವಚನ ಸಾಹಿತ್ಯ. ಶರಣರು ಪ್ರತಿμÉ್ಟಗಾಗಿ ಬದುಕದೆ ಸಾಮಾಜಕ್ಕಾಗಿ ಬದುಕಿದವರು ಎಂದರು.
ಶರಣ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ನಡೆ, ನುಡಿ ಒಂದಾಗಿ ಬದುಕಿದವರು ಶರಣರು. ಜನಸಾಮಾನ್ಯರ ನೋವನ್ನು ಅರಿತು, ಜಾತಿ ಮತ್ತು ವೃತ್ತಿ ತಾರತಮ್ಯವಿಲ್ಲದೇ ನರನನ್ನು ಹರನನ್ನಾಗಿ ಮಾಡಿದವರು ಶರಣರು ಎಂದರು.
ವೇದಿಕೆಯಲ್ಲಿದ್ದ ಹಿರಿಯ ನ್ಯಾಯವಾದಿ ಉಸ್ಮಾನಬಾದಶಾಹ ಆಲಗೋರ, ಮಹಮ್ಮದ ಸರ್ದಾರ ಅಲಿಖಾನ, ವಿಶ್ರಾಂತ ಶಿಕ್ಷಕ ಅಮೋಘಸಿದ್ಧ ಪೂಜಾರ, ಶರಣ ಚಿಂತಕಿ ಭಾಗೀರಥಿ ಶಿಂಧೆ ಮಾತನಾಡಿದರು.
ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವೇದಿಕೆಯಲ್ಲಿದ್ದರು.
ಮಹಮ್ಮದಗೌಸ ಹವಾಲ್ದಾರ ಸ್ವಾಗತಿಸಿದರು. ಅನ್ನಪೂರ್ಣ ಬೆಳ್ಳೆನವರ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿ.ಎಂ. ಬಾಗಾಯತ, ಬಿ.ಎಂ. ಅಜೂರ, ಸಿದ್ದು ಸಾವಳಸಂಗ, ಭಾರತಿ ಸಾವಳಸಂಗ, ಅಭಿμÉೀಕ ಚಕ್ರವರ್ತಿ, ಶಿಲ್ಪಾ ಮಾಯಾಚಾರಿ, ಲತಾ ಗುಂಡಿ, ಕುಮಾರಿ ಗಂಗಮ್ಮ ರೆಡ್ಡಿ, ಎಸ್.ವಿ. ನಾಡಗೌಡ, ಯುವರಾಜ ಚೊಳಕೆ, ವಿಜಯಲಕ್ಷ್ಮಿ ಹೆಚ್, ಆರ್.ಎಂ. ದೊಡ್ಡಮನಿ, ಲಕ್ಷ್ಮಿ ಕಾತ್ರಾಳ, ಬಸವರಾಜ ಕಂಕನವಾಡಿ, ಪ್ರದೀಪ ನಾಯ್ಕೋಡಿ, ಅರ್ಜುನ ಶಿರೂರÀ, ಪ್ರವೀಣ ಬಡಿಗೇರ, ಮಹಾದೇವಿ ತೆಲಗಿ, ಪರಸು ಚಲವಾದಿ, ಆಲಿಸಾಬ ಖಡಕೆ, ಕಮಲಾ ಮುರಾಳ, ಚೈತನ್ಯ ಮುದ್ದೇಬಿಹಾಳ ಮತ್ತಿತರರು ಉಪಸ್ಥಿತರಿದ್ದರು