ಉಪಯುಕ್ತ ಕ್ರೀಡೆಯಿಂದ ನಗರಕ್ಕೆ ಕೀರ್ತಿ ತನ್ನಿ
ಕೆಜಿಎಫ್.ಜು.೧- ಪುಟ್‌ಬಾಲ್ ಆಟ ಮನುಷ್ಯನನ್ನು ಸದಾ ಕ್ರಿಯಾ ಚುಟುವಟಿಕೆಗಳಿಂದ ಕೂಡಿರುವಂತೆ ಮಾಡುವ ಉತ್ತಮವಾದ ಕ್ರೀಡೆಯಾಗಿದ್ದು ಆರೋಗ್ಯದ ದೃಷ್ಠಿಯಿಂದಲ್ಲೂ ಉಪಯುಕ್ತವಾದ ಕ್ರೀಡೆ ಮತ್ತು ಪುಟ್‌ಬಾಲ್ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೆ ದೇಶದ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಅಥಾವ ಖಾಸಗಿ ಕಂಪನಿಗಳಲ್ಲಿ ಒಳ್ಳೆಯ ಉದ್ಯೋಗ ಅವಕಾಶಗಳು ಲಭಿಸಲಿದೆ.
ಆದ್ದರಿಂದ ಯುವಕರು ಪುಟ್‌ಬಾಲ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು ಯುವಕರಿಗೆ ಪೋಷಕರು ಸಹ ಪ್ರೋತ್ಸಾಹ ನೀಡಬೇಕು ಎಂದು ಪುಟ್ ಬಾಲ್ ಪ್ರೇಮಿ ಕೆಜಿಎಫ್ ಪುಟ್ ಬಾಲ್ ಆಕಾಡೆಮಿ ಅಧ್ಯಕ್ಷ ಸೈಮನ್ ಹೇಳಿದರು.
ಭವಿಷ್ಯದ ಯುವಕರಿಗಾಗಿ ಪುಟ್‌ಬಾಲ್ ಕ್ರೀಡೆಯನ್ನು ತರಬೇತಿ ನೀಡುವ ನಿಟ್ಟಿನಲ್ಲಿ ಆಕಾಡಮಿಯನ್ನು ಪ್ರಾರಂಭಿಸಿದ್ದು ನಗರದ ಮುನಿಸಿಪಾಲ್ ಮೈದಾನದಲ್ಲಿ ಯುವಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಇಂದಿನ ಯುವ ಸಮುದಾಯವು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅವರುಗಳನ್ನು ದುಶ್ಚಟಗಳಿಂದ ದೂರ ಮಾಡಲು ಹಾಗೂ ಕೆಜಿಎಫ್ ನಗರದ ಹಿಂದಿನ ಗತ ವೈಭವನ್ನು ಮರು ಕಳಿಸುವಂತೆ ಮಾಡುವ ದೃಷ್ಠಿಯಿಂದ ನಾನು ಪುಟ್ ಬಾಲ್ ಆಕಾಡೆಮಿಯನ್ನು ಪ್ರಾರಂಭಿಸಿದ್ದು ನಗರದ ಹಲವು ಯುವಕರು ದೇಶದ ರಾಜ್ಯದ ವಿವಿಧ ಪುಟ್‌ಬಾಲ್ ಆಕಾಡಮಿಗಳನ್ನು ಪ್ರತಿನಿಧಿಸುತ್ತಿದ್ದಾರೆ ಅವರುಗಳು ನಮ್ಮ ಆಕಾಡಮಿಯನ್ನು ಪ್ರತಿನಿಧಿಸಿದರೆ ನಮ್ಮ ನಗರಕ್ಕೂ ಹೆಮ್ಮೆಯ ಸಂಗತಿಯಾಗಲಿದೆ ಆದ್ದರಿಂದ ಯುವಕರನ್ನು ಪುಟ್‌ಬಾಲ್ ಆಟದ ಬಗ್ಗೆ ಆಸಕ್ತಿ ಮೂಡುವ ನಿಟ್ಟಿನಲ್ಲಿ ವಿಶೇಷವಾದ ತರಬೇತಿಯನ್ನು ನೀಡಲಾಗುತ್ತಿದೆ ಮುಂದಿನ ತಿಂಗಳು ರಾಷ್ಟ್ರ ಮಟ್ಟದಲ್ಲಿ ಪುಟ್‌ಬಾಲ್ ಟೂರನಮೇಂಟ್ ಹಮ್ಮಿಕೊಳ್ಳಲಾಗಿದ್ದು ರಾಷ್ಟ್ರ ಹಾಗೂ ರಾಜ್ಯದ ವಿವಿಧ ಖ್ಯಾತ ಪುಟ್‌ಬಾಲ್ ಆಟಗಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.