ಪೂರ್ವಬಾವಿ ಸಭೆ
ಕೊಲ್ಹಾರ:ಜು.1: ವಚನಪಿತಾಮಹ ಡಾ.ಫ.ಗು ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ತಾಲೂಕ ಆಡಳಿತದ ನೇತೃತ್ವದಲ್ಲಿ ಜುಲೈ 2 ರಂದು ಪಟ್ಟಣದ ತಾಲೂಕು ಪಂಚಾಯತ ಸಬಾ ಭವನದಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ ಎಸ್.ಎಸ್ ನಾಯಕಲಮಠ ಹೇಳಿದರು.
ಪ.ಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗುವವು ಸಾಹಿತಿಗಳಾದ ಜಂಬುನಾಥ ಕಂಚ್ಯಾಣಿ, ಪ.ಗು ಸಿದ್ದಾಪುರ, ಮೊಹಮ್ಮದಗೌಸ್ ಹವಾಲ್ದಾರ್, ಬೋರಮ್ಮ ಪತಂಗಿ, ಜಗದೀಶ ಸಾಲಳ್ಳಿ ಅವರಿಂದ ಸಾಹಿತ್ಯ ಗೋಷ್ಠಿ ನಡೆಯುವುದು ಹಾಗೂ ವಚನಪಿತಾಮಹ ಫ.ಗು ಹಳಕಟ್ಟಿಯವರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ ಚಲವಾದಿ, ಸಾಹಿತಿಗಳಾದ ಬೋರಮ್ಮ ಪತಂಗಿ, ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸಿಪ್ ಗಿರಗಾಂವಿ, ಬಾಬು ಬಜಂತ್ರಿ, ದಲಿತ ಮುಖಂಡರಾದ ದಶರಥ ಈಟಿ, ಪರಶುರಾಮ ಚಿಮ್ಮಲಗಿ ಸಹಿತ ಪಟ್ಟಣದ ಪ್ರಮುಖರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.