ಚೆಸ್ ಕ್ರೀಡೆಯಲ್ಲಿ ಅಂಜುಮನ್ ಕಾನೂನು ವಿದ್ಯಾರ್ಥಿಗಳÀ ಅಮೋಘ ಸಾಧನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.1: ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಬಿ.ಎಲ್.ಡಿ.ಇ.ಎ ಸಂಸ್ಥೆಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಕಾನೂನು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ಚೆಸ್ ಟೂರ್ನಾಮೆಂಟ್ ಹಮ್ಮಿಕೊಂಡ ಸಂದರ್ಭದಲ್ಲಿ ವಿಜಯಪುರದ ಅಂಜುಮನ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ಸಮೀರ್ ಖಾಜಿ (ಕ್ಯಾಪ್ಟನ್), ಅಮೀರ ಎನ್. ಕೊರ್ತಿ, ಪ್ರದೀಪ ಬಳಗಾನೂರ, ಆನಂದ ಕಾಳಗಿ, ಶಶಿಕುಮಾರ ನುಗ್ಗಿ ಅವರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಸಮೀರ ಖಾಜಿ ಅವರು ಪ್ರಥಮ ಅತ್ಯುತ್ತಮ ಆಟಗಾರರೆಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೈಹಿಕ ನಿರ್ದೇಶಕÀ ತೌಫಿಕ್ ಅಹ್ಮದ ಕೂಡಗಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಂಜುಮನ್ ಕಾನೂನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಂತರ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲ ಚೆಸ್ ಆಟಗಾರರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಅಭಿನಂದಿಸಿದ್ದಾರೆ.